ಜೆಡಿಎಸ್ ಸಿದ್ಧಾಂತದಲ್ಲಿ ಬದಲಾವಣೆ ಇಲ್ಲ: NDA ಮೈತ್ರಿಯಲ್ಲೂ ಜಾತ್ಯತೀತ ನಿಲುವು ಮುಂದುವರಿಕೆ – ನಿಖಿಲ್ ಕುಮಾರಸ್ವಾಮಿ
ಚಿಕ್ಕಮಗಳೂರು : ಜಾತ್ಯತೀತ ಜನತಾದಳ ಅನ್ನುವುದು ಅದರ ಘೋಷ ವಾಕ್ಯದಲ್ಲೇ ಇದೆ. ನಮ್ಮ ಸಿದ್ದಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು ಯಾವತ್ತಿದ್ರೂ ಜಾತ್ಯತೀತಾನೇ ಜಾತ್ಯಾತೀತವಾಗಿ ಉಳಿಯುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.
ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿ ಅವರು, ಬಿಜೆಪಿ ಜೆಡಿಎಸ್ ಜತೆ ಮೈತ್ರಿ ಆಗಿರುವುದಕ್ಕೆ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ ಅವರು ; ನಾವು NDA ಜೊತೆ ಮಿತ್ರ ಪಕ್ಷವಾಗಿ ಕೈ ಜೋಡಿಸಿದ್ದೇವೆ. ಆದರೆ ನಮ್ಮ ಸಿದ್ದಾಂತವನ್ನ ಯಾರ ಜೊತೆಗೆ ಮರ್ಜ್ ಮಾಡಿಲ್ಲ. ನಮ್ಮದು ಬೇರೆ ರಾಜಕೀಯ ಪಕ್ಷವಾಗಿದೆ ಎಂದು ಹೇಳಿದರು.
ಜೆಡಿಎಸ್ ಧರ್ಮ ,ಜಾತಿ, ಸಮುದಾಯದ ಆಧಾರದ ಮೇಲೆ ರಾಜಕಾರಣ ಮಾಡಿಲ್ಲ
ಜೆಡಿಎಸ್ ಸರ್ವ ಜನಾಂಗದ ಶಾಂತಿಯ ತೋಟದ ಬಗ್ಗೆ ಪರಿಕಲ್ಪನೆ ಇಟ್ಟಿರುವುದನ್ನ ನೋಡಿದ್ದೀರಾ. ಯಾವುದೇ ಧರ್ಮ ,ಜಾತಿ, ಸಮುದಾಯದ ಆಧಾರದ ಮೇಲೆ ರಾಜಕಾರಣ ಮಾಡಿಕೊಂಡು ಬಂದಿಲ್ಲ. ಎಲ್ಲರನ್ನೂ ಸಮಾನವಾಗಿ ನೋಡುವ ಕೆಲಸವನ್ನು ಪಕ್ಷ ಮಾಡಿದೆ ಇದನ್ನ ಮುಂದುವರಿಸುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.
ಆನೆ ದಾಳಿಗೆ ಶೀಘ್ರದಲ್ಲಿಯೇ ಶಾಶ್ವತ ಪರಿಹಾರ
ಆನೆ ದಾಳಿಯಿಂದ ಆಗುತ್ತಿರುವ ತೀವ್ರ ಹಾನಿ ಮತ್ತು ಪ್ರಾಣಾಪಾಯದ ಬಗ್ಗೆ ಕುಮಾರಣ್ಣ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಶಾಶ್ವತ ಪರಿಹಾರಕ್ಕಾಗಿ ಚರ್ಚಿಸಿದ್ದಾರೆ.ತ್ವರಿತವಾಗಿ ಕ್ರಮ ಕೈಗೊಳ್ಳಲು ಚರ್ಚಿಸುತ್ತಿದ್ದಾರೆ ಎಂದು ನಿಖಿಲ್ ಅವರು ಹೇಳಿದರು.
ಜಮೀರ್ ಅಹಮದ್ ಖಾನ್ ಜೆಡಿಎಸ್ ಬರುವ ವಿಚಾರ; ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ
ಸಚಿವ ಜಮೀರ್ ಅಹಮದ್ ಖಾನ್ ಜೆಡಿಎಸ್ ಸೇರ್ಪಡೆ ವಿಚಾರಕ್ಕೆ ಪ್ರಕ್ರಿಯೆಸಿದ ಅವರು, ಪಕ್ಷವನ್ನ ಯಾವ ಸಂದರ್ಭದಲ್ಲಿ ಯಾವ ರೀತಿ ಬಿಟ್ಟು ಹೋದ್ರು, ಹೋಗುವಾಗ ಸಾರ್ವಜನಿಕ ವಲಯದಲ್ಲಿ ಯಾವ ಯಾವ ರೀತಿ ಚರ್ಚೆ ಮಾಡಿದ್ದಾರೆ, ಎಲ್ಲವನ್ನು ಪರಿಗಣಿಸಿ ಅಲ್ಲಿಂದ ಪಕ್ಷದ ವರಿಷ್ಠರು ಯಾರನ್ನ ಕರೆಸುಕೊಳ್ಳಬೇಕು ಯಾರನ್ನು ದೂರ ಇಡಬೇಕು ಅನ್ನುವುದನ್ನು ತೀರ್ಮಾನಿಸುತ್ತಾರೆ ಎಂದು ಅವರು.
ಜಿಲ್ಲೆಯ ಪ್ರತಿ ಕ್ಷೇತ್ರ , ಪ್ರತಿ ತಾಲೂಕುಗಳಿಗೂ ತೆರಳಿ ಸಂಘಟನೆ ಮಾಡುತ್ತೇನೆ
ಚಿಕ್ಕಮಗಳೂರು ಜಿಲ್ಲೆಯ ಪ್ರತಿ ಕ್ಷೇತ್ರ , ಪ್ರತಿ ತಾಲೂಕುಗಳಿಗೂ ತೆರಳಿ ಸಂಘಟನೆ ಮಾಡುತ್ತೇನೆ. ಕಡೂರು ಕ್ಷೇತ್ರದಲ್ಲಿ ನಿರಂತರವಾಗಿ ಜೆಡಿಎಸ್ ಗೆಲುವಾಗಿದೆ. ನಮ್ಮ ಪಕ್ಷಕ್ಕೆ ಜಿಲ್ಲೆಯಲ್ಲಿ ಒಂದು ಬಲವಿದೆ. ಪಕ್ಷಕ್ಕೆ ಹೊಸ ವೇಗ ನೀಡಬೇಕು ಎಂದು ಹೋರಾಟ ಮಾಡುತ್ತಿದ್ದೇವೆ ಎಂದು ನಿಖಿಲ್ ಅವರು ತಿಳಿಸಿದರು.
ಅಲ್ಪಸಂಖ್ಯಾತರನ್ನ ಕಾಂಗ್ರೆಸ್ ವೋಟ್ ಬ್ಯಾಂಕ್ ಆಗಿ ಮಾತ್ರ ಉಪಯೋಗಿಸಿಕೊಳ್ಳುತ್ತಿದೆ
ದಾವಣಗೆರೆ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರ ಕಡೆಗಣನೆ ವಿಚಾರಕ್ಕೆ ಮಾತನಾಡಿದ ಅವರು,ಕಾಂಗ್ರೆಸ್ ನಲ್ಲಿ ಅಹಿಂದಾ ನಾಯಕರ ರಾಜಕೀಯ ಭವಿಷ್ಯ ಎಲ್ಲಿಗೆ ಹೋಗುತ್ತೆ ಎಂಬ ಆತಂಕ ನನಗಿದೆ. ಅಲ್ಪಸಂಖ್ಯಾತರನ್ನ ಕಾಂಗ್ರೆಸ್ ವೋಟ್ ಬ್ಯಾಂಕ್ ಆಗಿ ಮಾತ್ರ ಉಪಯೋಗಿಸಿಕೊಳ್ಳುತ್ತಿದೆ. ಅಲ್ಪಸಂಖ್ಯಾತರನ್ನ ಕಾಂಗ್ರೆಸ್
ಯಾವತ್ತೂ ಬೆಳೆಸಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು




Comments
Leave a Comment