ಹೈಕಮಾಂಡ್ ನ ಮೆಚ್ಚಿಸಲು ಪ್ರಧಾನಿ ಮೋದಿಯವರನ್ನ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ನಿಂದಿಸವ್ರೆ -ನಿಖಿಲ್ ಕುಮಾರಸ್ವಾಮಿ

Bengaluru Urban:

Font size:

ನಲಾಪಾಡ್ ಮನೆ ಮೇಲೆ ದಾಳಿಗೆ ರಾಜಕೀಯ ಬಣ್ಣದ ಅವಶ್ಯಕತೆ ಇಲ್ಲ- ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆಯವರು ಹಿರಿಯರಿದ್ದಾರೆ ಈ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. ಇಂಥಹ ಹೇಳಿಕೆ ಅವರ ವ್ಯಕ್ತಿತ್ವಕ್ಕೆ ದಕ್ಕೆಯಾಗುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮೋದಿ ಟೆರಿರಿಸ್ಟ್ ಎಂದು ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು, ಮಲ್ಲಿಕಾರ್ಜುನ ಖರ್ಗೆ ಅವರು ರಾಜಕೀಯದಲ್ಲಿ ಹಿರಿಯರು. ಸಂಸ್ಕಾರದಿಂದ, ಸಂಯಮದಿಂದ ವರ್ತನೆ ಮಾಡಬೇಕು. ಇವರು ಯುವಕರಿಗೆ ದಾರಿದೀಪ ಆಗಬೇಕು, ವೈಯಕ್ತಿಕ ಹೇಳಿಕೆ, ನಿಂದನೆ ಮಾಡಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದರು.

ಹ್ಯಾರಿಸ್ ಪುತ್ರರ ನಿವಾಸದ ಮೇಲೆ ಇಡಿ ದಾಳಿ ವಿಚಾರ, ಇಡಿ ಅವರ ಮಾನದಂಡದ ಮೇಲೆ ದಾಳಿ ಮಾಡುತ್ತದೆ. ಇಡಿ ಒಂದು ಸ್ವಾಯತ್ತ ಸಂಸ್ಥೆ. ಈ ದಾಳಿಗೆ ರಾಜಕೀಯ ಬಣ್ಣ ಕಟ್ಟಿ ದಿಕ್ಕು ತಪ್ಪಿಸುವ ಅವಶ್ಯಕತೆ ಇಲ್ಲ ಎಂದು ನಿಖಿಲ್ ಅವರು ಹೇಳಿದರು.

ಆಗ್ನೇಯ ಕ್ಷೇತ್ರದ ಪರಿಷತ್ ಟಿಕೆಟ್ ಫೈಟ್ ವಿಚಾರಕ್ಕೆ ಮಾತನಾಡಿದ ಅವರು, ಪದವೀಧರರ ಕ್ಷೇತ್ರಕ್ಕೆ ಈಗಾಗಲೇ ಮಿತ್ರ ಪಕ್ಷ ಟಿಕೆಟ್ ಘೋಷಿಸಿದೆ. ಒಇ ವಿಚಾರವಾಗಿ ಕುಮಾರಣ್ಣ , ನಿತಿನ್ ನಬಿನ್, ನಡ್ಡಾ ಭೇಟಿ ಮಾಡಿದ್ದಾರೆ.
ವಾಸ್ತವಾಂಶದ ಬಗ್ಗೆ ಚರ್ಚೆ ಮಾಡಿದ್ದಾರೆ ಅತೀ ಶೀಘ್ರವಾಗಿ ಇದಕ್ಕೆ ಉತ್ತರ ಸಿಗುತ್ತದೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಮೇಲೆ ಮಾಟ ಮಂತ್ರ ವಿಚಾರಕ್ಕೆ ಮಾತನಾಡಿದ ಅವರು, ನನಗೆ ಮಾಟಮಂತ್ರದ ಬಗ್ಗೆ ಅಷ್ಟು ಅರಿವಿಲ್ಲ.ನಾವು ದೈವದ ಮೇಲೆ ನಂಬಿಕೆ‌ ಇಟ್ಟಿದ್ದೇವೆ. ನಮ್ಮಿಂದ ನಾಲ್ಕು ಜನರಿಗೆ ಒಳ್ಳೆಯದು ಆಗಬೇಕೆಂದು ಭಗವಂತನಲ್ಲಿ ಕೈ ಮುಗಿಯುತ್ತೆವೆ ಎಂದು ಹೇಳಿದರು.

ಅಲ್ಪಸಂಖ್ಯಾತರು ಜೆಡಿಎಸ್ ಕಡೆಗೆ ಮುಖ ಮಾಡುವ ವಿಚಾರಕ್ಕೆ ಮಾತನಾಡಿದ ಅವರು, ಸಿಎಂ ಅವರು ಯಾವಾಗಲೂ ಅಹಿಂದ ರಾಜಕಾರಣಿ ಅಂತ ಹೇಳ್ತಾರೆ. ಅಹಿಂದದಲ್ಲಿ ದ ಅನ್ನೋದು ಉರುಳಿ ಹೋಗಿದೆ. ಅಹಿಂದದಲ್ಲಿ ಅ- ಅಲ್ಪಸಂಖ್ಯಾತ, ದ-ದಲಿತ ಹೋಗಿದೆ. ಉಳಿದಿರೋದು ಹಿಂದುಳಿದ ಅನ್ನೋದು, ಅದು ಯಾವಾಗ ಹೋಗುತ್ತದೆ ಗೊತ್ತಿಲ್ಲ. ಸಂಪೂರ್ಣ ಅಹಿಂದ ಚಿದ್ರಗೊಳ್ಳುತ್ತದೆಯೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ರಾಜಣ್ಣ, ನಾಗೇಂದ್ರ ಅವರನ್ನ ಸಚಿವ ಸಂಪುಟದಿಂದ ಕೈಬಿಟ್ಟಾಗಿದೆ. ಅ ಅಂತಹವರಾದ ಜಬ್ಬಾರ್, ನಜೀರ್ ತಲೆದಂಡ ಆಗಿದೆ. ದಾವಣಗೆರೆಯಲ್ಲಿ ಅಲ್ಪಸಂಖ್ಯಾತರ ಹೆಚ್ಚಾಗಿದ್ದಾರೆ. ಆ ಕ್ಷೇತ್ರದಲ್ಲಿ ಮುಸ್ಲಿಂ ಬಾಂಧವರಿಗೆ ಟಿಕೆಟ್ ಕೊಡಬೇಕಿತ್ತು. ಅಲ್ಲಿ ಜಬ್ಬಾರ್, ನಜೀರ್ ಕೈ ಬಿಟ್ಟಿದ್ದಾರೆ ಎಂದು ಕಿಡಿಕಾರಿದರು.

Comments

Leave a Comment

Prev Post ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ತೆಂಗಿನ ನಾರಿನ ಮ್ಯಾಟ್‌ಗಳು ಮತ್ತು ಇತರೆ ಉತ್ಪನ್ನಗಳನ್ನು ದೆಹಲಿಗೆ ಸರಬರಾಜು ಮಾಡುವ ವಾಹನಕ್ಕೆ ಚಾಲನೆ ನೀಡಿದರು.
Next Post ರಾಜ್ಯದಲ್ಲಿ ಅಗ್ನಿಶಾಮಕ ಸೇವೆಗಳ ಪುನರ್‌ವಿಂಗಡಣೆ – ಸಾರ್ವಜನಿಕ ಸುರಕ್ಷತೆಗೆ ಬಲವರ್ಧನೆ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ನ್ಯಾ.‌ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ:ಬಸವರಾಜ ಬೊಮ್ಮಾಯಿ

ಸಿಎಂ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದಿದ್ದಾರೆ: ಬಸವರಾಜ ಬೊಮ್ಮಾಯಿ

ಒಡಿಶಾ ಶಾಸಕರನ್ನು ನಾನು ಕರೆಸಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪಕ್ಷ ಹೇಳಿದ್ದನ್ನು ಮಾಡುತ್ತೇನೆ ನನಗೆ ಇದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News