ದೇಶದಲ್ಲಿ ಸುಮಾರು 70 ರಷ್ಟು ಜನರು ಕೃಷಿ ಅವಲಂಬಿತರು: ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ

BANGALURU:

Font size:

"ಅನ್ನಂ ಪರಬ್ರಹ್ಮ ಸ್ವರೂಪಂ " ಎಂಬ ವಾಕ್ಯ ದಂತೆ ದೇಶದಲ್ಲಿ ಅನ್ನಕ್ಕಿರುವ ಬೆಲೆ ಬೇರೆ ಯಾವುದಕ್ಕೂ ಇಲ್ಲಾ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್.ಮುನಿಯಪ್ಪ ಹೇಳಿದರು.

ಬೆಂಗಳೂರು.16,
"ಅನ್ನಂ ಪರಬ್ರಹ್ಮ ಸ್ವರೂಪಂ " ಎಂಬ ವಾಕ್ಯ ದಂತೆ ದೇಶದಲ್ಲಿ ಅನ್ನಕ್ಕಿರುವ ಬೆಲೆ ಬೇರೆ ಯಾವುದಕ್ಕೂ ಇಲ್ಲಾ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್.ಮುನಿಯಪ್ಪ ಹೇಳಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ವತಿಯಿಂದ
ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ವಿಶ್ವ ಆಹಾರ ದಿನಾಚರಣೆ- 2024ರ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ವಿಶ್ವ ಆಹಾರ ದಿನ (World Food Day) ವಿಶ್ವಾದ್ಯಂತ ಅಕ್ಟೋಬರ್ 16ರಂದು ಆಚರಿಸಲಾಗುತ್ತದೆ. 1945ರಲ್ಲಿ ಸಂಯುಕ್ತ ರಾಷ್ಟ್ರಗಳ ಆಹಾರ ಮತ್ತು ಕೃಷಿ ಸಂಘಟನೆಯ (FAO) ಸ್ಥಾಪನೆಯನ್ನು ಗೌರವಿಸುವುದಾಗಿ ಈ ದಿನವನ್ನು ನಿಶ್ಚಿತಗೊಳಿಸಲಾಗಿದೆ ಎಂದರು.

ಆಹಾರದ ಮಹತ್ವ, ಜನರ ಭಕ್ಷ್ಯಮಾನದ ಹಕ್ಕು, ಹಸಿವು ಹಾಗೂ ದಾರಿದ್ರ್ಯ ನಿರ್ಮೂಲನೆಗೆ ಜಾಗೃತಿ ಮೂಡಿಸುವುದಾಗಿದೆ "ನಮ್ಮ ಅಹಾರ ವ್ಯವಸ್ಥೆಯನ್ನು ಪರಿವರ್ತಿಸಲು ಮತ್ತು ಹಸಿವು ನಿವಾರಿಸುವುದು ಎಂಬ ಚಿಂತನೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ನೇತೃತ್ವದಲ್ಲಿ ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದು ರಾಜ್ಯದ ಕಟ್ಟ ಕಡೆಯ ಪ್ರಜೆಯೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ ಎಂದರು.

ಭಾರತ ದೇಶದಲ್ಲಿ ಸುಮಾರು ಶೇಕಡಾ 70 ರಷ್ಟು ಜನರು ಕೃಷಿಯನ್ನು ಅವಲಂಭಿಸಿದ್ದಾರೆ. ಈ ಜಗತ್ತಿನಲ್ಲಿ ಸಿರಿದಾನ್ಯಗಳ ಬಳಕೆ ಹೆಚ್ಚಾಗಬೇಕು ಮತ್ತು ಇಂದಿನ ಮಕ್ಕಳು ಅವುಗಳನ್ನು ಉಪಯೋಗಿಸಿದಾಗ ಆರೋಗ್ಯದ ಸಮಸ್ಯೆಗಳನ್ನು ಸುಧಾರಿಸಲು ಸಹಕಾರಿಯಾಗುತ್ತದೆ. 1960 ರಿಂದ 1965 ರ ಅವಧಿಯಲ್ಲಿ ನಾನು ಪ್ರೌಢಶಾಲಾ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ 4 ನಾಲ್ಕು ವರ್ಷಗಳ ಕಾಲ ಮಳೆ ಅಭಾವವಾಗಿತ್ತು ಅಂದು ನಾನು ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದೆ ಎಂದರು.

ನಂತರ ಅಂದಿನ ಪ್ರಧಾನಿ ಲಾಲ ಬಹಾದೂರ್ ಶಾಸ್ತ್ರಿ ರವರು ದೇಶದಲ್ಲಿ ಆಹಾರದ ಕೊರತೆ ಇದ್ದಾಗ ಜನರು ಒಂದು ಒತ್ತಿನ ಊಟವನ್ನು ಬಿಡಬೇಕು ಎಂಬ ಆದೇಶವನ್ನು ಮಾಡಿದರು. ನಂತರ ಎಲ್ಲಾರು ಅದನ್ನು ಅನುಸರಿಸಿ ಆಹಾರದ ಅಭಾವವನ್ನು ಕಡಿಮೆ ಮಾಡಲು ಈ ನಿರ್ಧಾರವನ್ನು ಮಾಡಿದ್ದರು. ಪ್ರಸ್ತುತದ ನಮ್ಮ ಭಾರತ ದೇಶದಲ್ಲಿ ಮೂರು ವರ್ಷಗಳಿಗೆ ಆಗುವಷ್ಟು ಆಹಾರ ದವಸದಾನ್ಯಗಳನ್ನು ನಾವು ಶೇಕರಣೆಮಾಡಿದ್ದೇವೆ
ಮತ್ತು ಇತರೆ ದೇಶಗಳಿಗೆ ರಫ್ತು ಮಾಡುವಷ್ಟು ಬಲಿಷ್ಠ ವಾಗಿದ್ದೇವೆ. ಸಿರಿದಾನ್ಯಗಳ ಬೆಳೆಯುವ ಪ್ರಮಾಣ ಕಡಿಮೆಯಾಗಿದ್ದು, ಇವನ್ನು ರೈತರು ತಮ್ಮ ಜಮೀನಿನಲ್ಲಿ ನವಣೆ, ಆರ್ಕಾ,ರಾಗಿ ಭತ್ತ, ಸಜ್ಜೆ ಮುಂತಾದ ಧಾನ್ಯಗಳನ್ನು ಬೆಳೆಯುವ ಕಡೆ ಗಮಣವಹಿಸಬೇಕು ಎಂದು ಸಚಿವರು ಹೇಳಿದರು.

ಈ ದೇಶದಲ್ಲಿ ತಯಾರಾಗಿರುವ ಆಹಾರ ಪದಾರ್ಥಗಳು ಹೋಟಲ್, ಕಲ್ಯಾಣ ಮಂಟಪಗಳು ಮೂಲಕ ವ್ಯರ್ಥ ವಾಗುತ್ತಿರುವುದನ್ನು ತಡೆಯಲು ಸದ್ಯದಲ್ಲಿಯೇ ಕಾನೂನು ರೂಪಿಸಲು ಚಿಂತಿಸುತ್ತಿದ್ದೇನೆ ಹಾಗೂ ಆಹಾರ ಪದಾರ್ಥಗಳು ವಾರ್ಷಿಕವಾಗಿ ಸುಮಾರು 90 ಸಾವಿರ ಕೋಟಿ ರೂಗಳಷ್ಟು ದೇಶದಲ್ಲಿ ಪೋಲಾಗುತ್ತಿದೆ ಎಂದರು.

ನಮ್ಮ ಕುಟುಂಬ ಕೃಷಿ ಅವಲಂಭಿಸಿ ಇಲ್ಲಿಯ ವರೆಗೂ ಬೆಳೆದಿದ್ದು, ನಾನು 1968ರಲ್ಲಿ ಎತ್ತು ಕಟ್ಟುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಅಂದಿನ ಕೃಷಿ ಸಚಿವ ರಾಚಯ್ಯ ರವರಿಂದ ಬಹುಮಾನ ಪಡೆದಿದ್ದೆ ಎಂದ ಸಚಿವರು ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಸಹಕಾರ ಕೃಷಿ ವಿಶ್ವ ವಿದ್ಯಾಲಯಕ್ಕೆ ಇರುತ್ತದೆ ಎಂದರು.

ನಂತರ ಸಚಿವರು ಮಕ್ಕಳಿಗೆ ಅನ್ನ ಪೋಲು ಮಾಡದಂತೆ ಮಕ್ಕಳಿಗೆ ಪ್ರಮಾಣ ಮಾಡಿಸಿ, ಯಾವ ರೀತಿ ಅನ್ನ ಬಳಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ್, ಸಿಂಡಿಕೇಟ್ ಸದಸ್ಯರಾದ ಪ್ರಭಾಕರ ಶೆಟ್ಟಿ,ಹರೀಶ್,ಚಂದ್ರೇಗೌಡ, ನಾರಾಯಣಸ್ವಾಮಿ, ಡೀನ್ ಪ್ರಕಾಶ್, ಸಂಶೋಧನಾ ನಿರ್ದೇಶಕ ಶಿವರಾಮ್, ಪ್ರಾಧ್ಯಾಪಕ ಉಷಾ ರವೀಂದ್ರ, ಕಲ್ಪನಾ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.

Prev Post 2026 ರಲ್ಲಿ ಕೆಎಫ್‌ಡಿ ಲಸಿಕೆ ಲಭ್ಯ - ಐಸಿಎಂಆರ್ ನಿರ್ದೇಶಕರನ್ನ ಭೇಟಿ ಮಾಡಿ ಚೆರ್ಚೆ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
Next Post ಮಮದಾಪುರ ಉದ್ಯಾನಕ್ಕೆ ಸಿದ್ಧೇಶ್ವರ ಶ್ರೀಗಳ ಹೆಸರು: ಎಂ‌ ಬಿ ಪಾಟೀಲ ಸಂತಸ