ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ನಲ್ಲಿ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯ; ಅಧ್ಯಕ್ಷರ ೫ ವರ್ಷಗಳ ಕನಸು ನನಸು.

ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ನಲ್ಲಿ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯ;
ಅಧ್ಯಕ್ಷರ ೫ ವರ್ಷಗಳ ಕನಸು ನನಸು.

ದಕ್ಷಿಣ ಕನ್ನಡ ಜಿಲ್ಲಾ ಬ್ಯಾಂಕ್ ನಿಂದ ಗ್ರಾಹಕರಿಗೆ ವಿಸ್ತರಿತ ಡಿಜಿಟಲ್ ಸೇವೆ: ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಘೋಷಣೆ.

ದಕ್ಷಿಣ ಕನ್ನಡ ಜಿಲ್ಲಾ ಬ್ಯಾಂಕ್ ನಿಂದ ಗ್ರಾಹಕರಿಗೆ ವಿಸ್ತರಿತ ಡಿಜಿಟಲ್ ಸೇವೆ: ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಘೋಷಣೆ

ಸಮಾಜ ಸೇವಾ ಕಾರ್ಯಕ್ಕೆ ವಿದಾಯ ಘೋಷಿಸಿದ ಡಾ. ಕನ್ಯಾನ ಸದಾಶಿವ ಶೆಟ್ಟಿ

ಸಮಾಜ ಸೇವಾ ಕಾರ್ಯಕ್ಕೆ ವಿದಾಯ ಘೋಷಿಸಿದ ಡಾ. ಕನ್ಯಾನ ಸದಾಶಿವ ಶೆಟ್ಟಿ

ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ ಮೇಕೆದಾಟು, ಯುಕೆಪಿ ಯೋಜನೆಗಳ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

ಪ್ರವಾಸೋದ್ಯಮದ ಪ್ರೋತ್ಸಾಹಕ್ಕೆ ಅಣೆಕಟ್ಟು ಬಳಿಯ 500 ಮೀಟರ್ ಪ್ರದೇಶದ ನಿರ್ಬಂಧ ಸಡಿಲಗೊಳಿಸಿ

ಅಣೆಕಟ್ಟುಗಳು ದೇಶದ ಶಕ್ತಿ, ಪ್ರಗತಿಯ ಪ್ರತೀಕ

ಅಣೆಕಟ್ಟು ಸುರಕ್ಷತೆಯಲ್ಲಿ ಕರ್ನಾಟಕ ದೇಶಕ್ಕೆ ಮಾದರಿ ಆಗಲಿದೆ

ರಾಜ್ಯದ 58 ಅಣೆಕಟ್ಟುಗಳ ದುರಸ್ತಿಗೆ 1500 ಕೋಟಿ ರೂ. ಮೀಸಲು

ಅಣೆಕಟ್ಟುಗಳ ಶಕ್ತಿ ನಿರ್ವಹಣೆ ಮೇಲೆ ಅವಲಂಬಿತ

ಬೆಂಗಳೂರಿನ ದಂತ ಕಾಲೇಜು ರೂ. 40 ಕೋಟಿ ವೆಚ್ಚದಲ್ಲಿ ಆಧುನೀಕರಣಕ್ಕೆ ಶಿಲಾನ್ಯಾಸ

ಬೆಂಗಳೂರಿನ ದಂತ ಕಾಲೇಜು ರೂ. 40 ಕೋಟಿ ವೆಚ್ಚದಲ್ಲಿ ಆಧುನೀಕರಣಕ್ಕೆ ಶಿಲಾನ್ಯಾಸ

ಫೆಬ್ರವರಿ 12 ಮಹಾ ಮುಷ್ಕರ ಬೆಂಬಲಿಸಿ ಬಂದರು ಹಮಾಲಿ ಕಾರ್ಮಿಕರ ಸಭೆ

ಫೆಬ್ರವರಿ 12 ಮಹಾ ಮುಷ್ಕರ ಬೆಂಬಲಿಸಿ ಬಂದರು ಹಮಾಲಿ ಕಾರ್ಮಿಕರ ಸಭೆ

ಕರ್ನಾಟಕದಲ್ಲಿ ಮೊದಲ ಬಾರಿಗೆ ವಿಕಲಚೇತನರಿಗಾಗಿ ವಿಶೇಷ ಉದ್ಯೋಗ ಮೇಳ: ಡಾ. ಶರಣಪ್ರಕಾಶ್ ಪಾಟೀಲ್

* ಬೆಂಗಳೂರು ಕಂಠೀರವ ಕ್ರೀಡಾಂಗಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜನೆ
* ವಿಕಲಚೇತನರ ಸ್ವಾವಲಂಬನೆಗೆ ಸರ್ಕಾರದ ವಿನೂತನ ಹೆಜ್ಜೆ

ಸ್ಥಳೀಯರಿಗೆ ಜಾಗತಿಕ ವೃತ್ತಿ ಅವಕಾಶ ಒದಗಿಸಲು ಆಸ್ಟ್ರೇಲಿಯ ಜೊತೆ ಜಿಟಿಸಿಸಿ ಒಪ್ಪಂದ

60 ವರ್ಷ ಮೇಲ್ಪಟ್ಟ ಪತ್ರಕರ್ತರಿಗೆ ಚಿಕಿತ್ಸೆಯಲ್ಲಿ ಶೇ.75ರಷ್ಟು ರಿಯಾಯಿತಿ: ಡಾ. ಶರಣಪ್ರಕಾಶ ಪಾಟೀಲ್‌

60 ವರ್ಷ ಮೇಲ್ಪಟ್ಟ ಪತ್ರಕರ್ತರಿಗೆ ಚಿಕಿತ್ಸೆಯಲ್ಲಿ ಶೇ.75ರಷ್ಟು ರಿಯಾಯಿತಿ: ಡಾ. ಶರಣಪ್ರಕಾಶ ಪಾಟೀಲ್‌

ಕೌಟುಂಬಿಕ ಜವಾಬ್ದಾರಿಯ ಜೊತೆಗೆ ಕೃಷಿ ಚಟುವಟಿಕೆಗೂ ಮಹಿಳೆ ಸಕ್ರಿಯ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಕೌಟುಂಬಿಕ ಜವಾಬ್ದಾರಿಯ ಜೊತೆಗೆ ಕೃಷಿ ಚಟುವಟಿಕೆಗೂ ಮಹಿಳೆ ಸಕ್ರಿಯ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಆದಿತ್ಯವಾರದಿಂದ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಶೀರೂರು ಶಕೆ. ಪುತ್ತಿಗೆ ಮಠದ ವಿಶ್ವ ಗೀತಾ ಪರ್ಯಾಯ ಸಮಾರೋಪ

ಪರ್ಯಾಯ ಮಹೋತ್ಸವಕ್ಕೆ ಸಜ್ಜುಗೊಂಡಿದೆ ಉಡುಪಿ.

ರಥಬೀದಿಯಲ್ಲಿ ದೀಪಾಲಂಕಾರ ನಿರ್ಮಿಸಿದೆ ಹೊಸ ಲೋಕ

ಶನಿವಾರದಿಂದ ಶ್ರೀ ಶೀರೂರು ಮಠದ ಪರ್ಯಾಯ ಆರಂಭ.

ರಿವರ್ ಮೊಬಿಲಿಟಿ ತಯಾರಿಕೆಯ ವಿದ್ಯುತ್ ಚಾಲಿತ ಯಮಾಹಾ ಇಸಿ-06 ಬೈಕ್ ಹಸ್ತಾಂತರ

ರಿವರ್ ಮೊಬಿಲಿಟಿ ತಯಾರಿಕೆಯ ವಿದ್ಯುತ್ ಚಾಲಿತ ಯಮಾಹಾ ಇಸಿ-06 ಬೈಕ್ ಹಸ್ತಾಂತರ
ಸ್ಥಳೀಯ ಉತ್ಪಾದನೆಗೆ ಸರಕಾರದ ಒತ್ತು: ಎಂ ಬಿ ಪಾಟೀಲ

ಆಗಸ್ಟ್ ಹೊತ್ತಿಗೆ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ

ಸಚಿವರಾದ ಎಂ.ಬಿ.ಪಾಟೀಲ ಮತ್ತು ಡಾ.ಎಂ.ಸಿ.ಸುಧಾಕರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ

ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಕ್ಯಾಂಪಸ್; 4 ವಿಷಯಗಳಲ್ಲಿ ಪದವಿ, 1 ವಿಷಯದಲ್ಲಿ ಸ್ನಾತಕೋತ್ತರ ಪದವಿ

ಬೆಂಗಳೂರು: ಆಸ್ಟ್ರೇಲಿಯಾದ ಅಗ್ರಗಣ್ಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ನ್ಯೂಸೌತ್ ವೇಲ್ಸ್ ವಿವಿ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ತನ್ನ ಕ್ಯಾಂಪಸ್ ಆರಂಭಿಸಲಿದೆ. ಈ ಸಂಬಂಧದ ಒಪ್ಪಂದಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಅವರ ಸಮ್ಮುಖದಲ್ಲಿ ಸಹಿ‌‌ ಮಾಡಲಾಯಿತು.

ವಿಧಾನಸೌಧದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ನ್ಯೂಸೌತ್ ವೇಲ್ಸ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಟಿಲಾ ಬ್ರಂಗ್ಸ್ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಅವರು ಒಪ್ಪಂದ ಪತ್ರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

ಈ ವಿಶ್ವವಿದ್ಯಾಲಯವು ಸದ್ಯಕ್ಕೆ ವಾಣಿಜ್ಯ, ಮಾಧ್ಯಮ, ಕಂಪ್ಯೂಟರ್ ಮತ್ತು ಡೇಟಾ ವಿಜ್ಞಾನ ಕೋರ್ಸುಗಳಲ್ಲಿ ಪದವಿ ಹಾಗೂ ಸೈಬರ್ ಸೆಕ್ಯುರಿಟಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ನೀಡಲಿದೆ ಎಂದು ಸಚಿವರಾದ ಎಂ ಬಿ ಪಾಟೀಲ ಮತ್ತು ಸುಧಾಕರ ಅವರು ತಿಳಿಸಿದ್ದಾರೆ.

ನಿಯೋಗದೊಂದಿಗೆ ವಿಚಾರ ವಿನಿಮಯ ನಡೆಸಿದ ನಂತರ ಮಾತನಾಡಿದ ಪಾಟೀಲ ಅವರು, ನ್ಯೂಸೌತ್ ವೇಲ್ಸ್ ವಿ.ವಿ.ದ ಶೈಕ್ಷಣಿಕ ಮಂಡಲಿಯೇ ಬೆಂಗಳೂರು ಕ್ಯಾಂಪಸ್ಸಿನಲ್ಲಿ ಓದುವ ವಿದ್ಯಾರ್ಥಿಗಳ ಮೇಲೆ ನಿಗಾ ಇಡಲಿದೆ. ಅಲ್ಲಿ ತಾನು ಹೊಂದಿರುವ ಪಠ್ಯಕ್ರಮವನ್ನೇ ಇಲ್ಲೂ ಬೋಧಿಸಲಿದೆ. ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಹಲವು ಅಗ್ರಮಾನ್ಯ ಕಂಪನಿಗಳೂ ಇರುವುದರಿಂದ ವಿದ್ಯಾರ್ಥಿಗಳ ಕಲಿಕೆ, ಕೌಶಲ್ಯಾಭ್ಯಾಸಕ್ಕೆ ನೆರವು ಸುಗಮವಾಗಿ ಸಿಗಲಿದೆ. ಮುಂಬರುವ ದಿನಗಳಲ್ಲಿ ಕ್ವಿನ್ ಸಿಟಿಯಲ್ಲಿ ಇವರ ಕ್ಯಾಂಪಸ್ ಅಸ್ತಿತ್ವಕ್ಕೆ ಬರಲಿದೆ ಎಂದಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 2025-30ರ ಅವಧಿಯ ಶೈಕ್ಷಣಿಕ, ಸಂಶೋಧನಾತ್ಮಕ ಸಹಭಾಗಿತ್ವ ಕಾರ್ಯಕ್ರಮ ಈಗ ಚಾಲ್ತಿಯಲ್ಲಿದೆ. ನ್ಯೂಸೌತ್ ವೇಲ್ಸ್ ವಿ.ವಿ. ಬೆಂಗಳೂರಿನಲ್ಲಿರುವ ಐಐಎಂ, ಭಾರತೀಯ ವಿಜ್ಞಾನ ಮಂದಿರ, ರಾಷ್ಟ್ರೀಯ ಕಾನೂನು ವಿವಿ, ಕೇಂದ್ರ ಸರಕಾರದ ಹೆದ್ದಾರಿ ಮತ್ತು ಉಕ್ಕು ಸಚಿವಾಲಯ, ಹಾಗೂ ರಾಜ್ಯದ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದು ಅವರು ವಿವರಿಸಿದ್ದಾರೆ.

ಸಚಿವ ಸುಧಾಕರ ಮಾತನಾಡಿ, ನ್ಯೂಸೌತ್ ವೇಲ್ಸ್ ವಿಶ್ವವಿದ್ಯಾಲಯವು ಏಷ್ಯಾ-ಪೆಸಿಫಿಕ್ ವಲಯದಲ್ಲೇ ಅತ್ಯುತ್ತಮ ಉದ್ಯೋಗಾವಕಾಶನ್ನು ಸೃಷ್ಟಿಸುತ್ತಿರುವ ಶಿಕ್ಷಣ ಸಂಸ್ಥೆ ಎಂದು ಹೆಸರಾಗಿದೆ. ಇಲ್ಲಿಂದ ಪದವಿ/ ಸ್ನಾತಕೋತ್ತರ ಪದವಿ ಪಡೆದು ಹೊರಬರುವವರನ್ನು ಉದ್ಯೋಗದಾತರು ತಮ್ಮ ಕಂಪನಿಗಳಿಗೆ ಅರಸುತ್ತಿರುತ್ತಾರೆ. ಇಂತಹ ವಿ.ವಿ.ಯು ಬೆಂಗಳೂರಿನಲ್ಲಿ ಕ್ಯಾಂಪಸ್ ತೆರೆಯುತ್ತಿರುವುದರಿಂದ ಇಲ್ಲಿನ ನಾವೀನ್ಯತಾ ಕಾರ್ಯ ಪರಿಸರಕ್ಕೆ ಮತ್ತಷ್ಟು ಶಕ್ತಿ ಬರಲಿದೆ. ಜೊತೆಗೆ ಇಂತಹ ಇನ್ನಷ್ಟು ವಿದೇಶಿ ವಿ.ವಿ.ಗಳು ನಮ್ಮಲ್ಲಿಗೆ ಬರಲು ಉತ್ತೇಜನ ನೀಡಲಿದೆ ಎಂದು ಎಂದಿದ್ದಾರೆ.

ಕರಾವಳಿ ಭಾಗದಲ್ಲಿ ಕೇರಳ ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ : ಡಿಸಿಎಂ ಡಿ.ಕೆ.ಶಿವಕುಮಾರ್

ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪ್ರತ್ಯೇಕ ನೀತಿ.

ಮಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಸರಕಾರದಿಂದ ಮೂಲಸೌಕರ್ಯ,
ಖಾಸಗಿಯವರಿಂದ ಹೂಡಿಕೆ.

ಸ್ಥಳೀಯರಿಗೆ ಅವರದೇ ನೆಲದಲ್ಲಿ ಉದ್ಯೋಗ ನೀಡುವ ಚಿಂತನೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮುಖ್ಯ ಕಾರ್ಯದರ್ಶಿಗಳಾದ ಡಾ.ಶಾಲಿನಿ ರಜನೀಶ್ ಭೇಟಿ

ಪ್ರಯಾಣಿಕರ ಸುಗಮ ಸಂಚಾರಕ್ಕೆ ಹೊಸ ಕ್ರಮಗಳ ಜಾರಿಗೆ ಮುಖ್ಯಕಾರ್ಯದರ್ಶಿಗಳು ಹಾಗೂ ಬಿಐಎಎಲ್ ಅಧ್ಯಕ್ಷರ ಸೂಚನೆ

*ಮಕ್ಕಳ ಪಾಲಿಗೆ ಪಿಡುಗಾಗುತ್ತಿರುವ ಸಾಮಾಜಿಕ ಮಾಧ್ಯಮಗಳು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಕಳವಳ*

*ಮಕ್ಕಳ ಪಾಲಿಗೆ ಪಿಡುಗಾಗುತ್ತಿರುವ ಸಾಮಾಜಿಕ ಮಾಧ್ಯಮಗಳು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಕಳವಳ*