-2025-26ರ ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅಸ್ತು -ಅನ್ನದಾತರಿಗೆ ಬೆಳಕು ತೋರಿದ ಮೋದಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಣ್ಣನೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಕಾಲಿಕವಾಗಿ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ ಘೋಷಿಸಿ ರೈತರಿಗೆ ಬಲ ತುಂಬಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ ಹೇಳಿದ್ದಾರೆ.
ನವದೆಹಲಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ಮುಂಗಾರು, ಹಿಂಗಾರು ಹಂಗಾಮಿನ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸುವ ಮೂಲಕ ಪ್ರಧಾನಿ ಮೋದಿ ಅವರು ಅನ್ನದಾತರಿಗೆ ಬೆಳಕು ತೋರಿದ್ದಾರೆ ಎಂದು ಬಣ್ಣಿಸಿದರು.
ಬೆಲೆ ಹೆಚ್ಚಳಕ್ಕೆ ಅಸ್ತು: 2025-26ಕ್ಕೆ ಹಿಂಗಾರು ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ (ಎಂ.ಎಸ್.ಪಿ)
ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಮಂತ್ರಿಮಂಡಲ ಸಮಿತಿ (ಸಿಸಿಇಎ) ವ್ಯಾಪಾರ ವರ್ಷ 2025-26ಕ್ಕಾಗಿ ಸೂಚಿಸಿದ ಎಲ್ಲಾ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ (ಎಂ.ಎಸ್.ಪಿ) ಹೆಚ್ಚಿಸಲು ಅನುಮೋದನೆ ನೀಡಿದೆ ಎಂದರು.
ಎಂ.ಎಸ್.ಪಿಯಲ್ಲಿ ಗರಿಷ್ಠ
ಹೆಚ್ಚಳವಾಗಿ ಕುರಿ ಮೇವಿಕ ಕಾಳು ಮತ್ತು ಸಾಸಿವೆಗಳಿಗೆ ಪ್ರತಿ ಕ್ವಿಂಟಲ್ ಗೆ 300 ರೂ. ಹಾಗೂ ಮಸೂರ ಬೇಳೆಗೆ ಪ್ರತಿ ಕ್ವಿಂಟಲ್ ಗೆ 275 ರೂ. ಹೆಚ್ಚಿಸಿದೆ.
ಕಡಲೆ, ಗೋಧಿ, ಕುಸುಬೆ ಮತ್ತು ಬಾರ್ಲಿ ಧಾನ್ಯಗಳಿಗೆ ಪ್ರತಿ ಕ್ವಿಂಟಲ್ ಗೆ ಅನುಕ್ರಮವಾಗಿ 210 ರೂ., 150 ರೂ., 140 ರೂ. ಮತ್ತು 130 ರೂಪಾಯಿ ಹೆಚ್ಚಿಸಲಾಗಿದೆ ಎಂದು ಸಚಿವರು ವಿವರಿಸಿದರು.
2025-26ರ ಹಿಂಗಾರು ಬೆಳೆಗಳಿಗಾಗಿ ಎಂ.ಎಸ್.ಪಿಯಲ್ಲಿ ಮಾಡಲಾದ ಹೆಚ್ಚಳ 2018-19ರ ಕೇಂದ್ರ ಬಜೆಟ್‌ನಲ್ಲಿ ಎಂ.ಎಸ್.ಪಿಯನ್ನು ಅಖಿಲ ಭಾರತೀಯ ನಿವ್ವಳ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಟ 1.5 ಪಟ್ಟು ಹೆಚ್ಚು ನಿಗದಿಪಡಿಸಿದೆ ಎಂದರು.
ಗೋಧಿಗೆ ಶೇ.105, ಕುರಿ ಮೇವಿಕ ಕಾಳು ಮತ್ತು ಸಾಸಿವೆಗಳಿಗೆ ಶೇ.98; ಮಸೂರ ಬೇಳೆಗೆ ಶೇ.89, ಕಡಲೆಗೆ ಶೇ.60; ಬಾರ್ಲಿಗೆ ಶೇ.60, ಕುಸುಬೆಗೆ ಶೇ.50 ರಷ್ಟಿದೆ. ಹಿಂಗಾರು ಬೆಳೆಗಳ ಎಂ.ಎಸ್.ಪಿಯಲ್ಲಿ ಮಾಡಲಾದ ಈ ಹೆಚ್ಚಳದಿಂದ ನಿಶ್ಚಿತವಾಗಿ ರೈತರಿಗೆ ಲಾಭ ಸಿಗಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.






