Font size:
ಮಧುಗಿರಿ ಕ್ಷೇತ್ರ;ದೊಡ್ಡೇರಿ ಗ್ರಾಮದಲ್ಲಿ ಶಾಸಕ ಕೆ ಎನ್ . ರಾಜಣ್ಣನವರಿಂದ ಹಕ್ಕು ಪತ್ರ ವಿತರಣೆ
ಮಧುಗಿರಿ ಶಾಸಕರಾದ ಕೆ ಎನ್ ರಾಜಣ್ಣ ಬುಧವಾರ ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡೇರಿ ಗ್ರಾಮದಲ್ಲಿ ಹೋಬಳಿ ಮಟ್ಟದ ಜನಸ್ಪಂದನ ಹಾಗೂ ಮನೆಗಳ ಕಾರ್ಯಾದೇಶ ಪತ್ರ ಹಾಗೂ ನಿವೇಶನ ಹಕ್ಕುಪತ್ರ ವಿತರಣೆ ಮಾಡಿದರು.
ಹಾಗೂ ವಿವಿಧ ಯೋಜನೆಗಳ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಕುರಿತು ಮಾತನಾಡಿದರು ರೈತರು ಸರ್ಕಾರದ ಕಾರ್ಯಕ್ರಮಗಳನ್ನು ಸದುಪಯೋಗ ಮಾಡಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಯಾದ ಶುಭ ಕಲ್ಯಾಣ್ ಅವರು, ಸಿ.ಇ.ಓ ಪ್ರಭುರವರು, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಪರಶುರಾಮ್ ಶಿನ್ನಾಳಕರ್ ಅವರು, ಉಪವಿಭಾಗ ಅಧಿಕಾರಿಗಳಾದ ಗೋಟೂರು ಶಿವಪ್ಪನವರು, ತಹಸೀಲ್ದಾರ್ ಶ್ರೀನಿವಾಸ್ ಅವರು, ಇ.ಓ ಲಕ್ಷಣ್ ಅವರು ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ಹಿರಿಯ, ಕಿರಿಯ ಮುಖಂಡರುಗಳು, ಫಲಾನುಭವಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.








