ಮೂರು ದೇಶಗಳಿಗೆ ನಂದಿನಿ ತುಪ್ಪ ರಫ್ತು: ಶುಭ ಹಾರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಪ್ರಪ್ರಥಮ ಬಾರಿಗೆ ಯುಎಸ್‌ಎ, ಆಸ್ಟ್ರೇಲಿಯಾ ಹಾಗೂ ಸೌದಿ ಅರೇಬಿಯಾ ಗಳಿಗೆ ಕರುನಾಡ ಹೆಮ್ಮೆಯ ಬ್ರ್ಯಾಂಡ್
“ನಂದಿನಿ ತುಪ್ಪ” ರಫ್ತು
ಪ್ರಪ್ರಥಮ ಬಾರಿಗೆ ಯುಎಸ್‌ಎ, ಆಸ್ಟ್ರೇಲಿಯಾ ಹಾಗೂ ಸೌದಿ ಅರೇಬಿಯಾ ಗಳಿಗೆ ಕರುನಾಡ ಹೆಮ್ಮೆಯ ಬ್ರ್ಯಾಂಡ್
“ನಂದಿನಿ ತುಪ್ಪ” ರಫ್ತು ಬಗ್ಗೆ.
ಕಹಾಮವು ಪ್ರಸ್ತುತ ದುಬೈ, ಖತಾರ್, ಬ್ರುನೈ, ಮಾಲ್ಡೀವ್ಸ್ ಹಾಗೂ ಸಿಂಗಾಪೂರ್ ದೇಶಗಳು ಸೇರಿದಂತೆ ಭಾರತೀಯರು, ವಿಶೇಷವಾಗಿ ಕನ್ನಡಿಗರು ಹೆಚ್ಚಾಗಿ ನೆಲೆಸಿರುವ ನೆರೆಯ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ನಂದಿನಿ ಯುಹೆಚ್‌ಟಿ ಟೆಟ್ರಾಪ್ಯಾಕ್ ಹಾಲು, ತುಪ್ಪ, ಚೀಸ್, ಡೇರಿ ವೈಟ್ನರ್, ಬೆಣ್ಣೆ, ಐಸ್‌ಕ್ರೀಂ, ಸುವಾಸಿತ ಹಾಲು, ಸಿಹಿ ಉತ್ಪನ್ನ, ಸೇವರೀಸ್ ಅನ್ನು ರಫ್ತು ಮಾಡಲಾಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟವನ್ನು ಅಭಿವೃದ್ಧಿಪಡಿಸಲು ಕ್ರಮವಿಡಲಾಗುತ್ತಿದೆ.
ಕಹಾಮವು ದಿನಾಂಕ:09.09.2023 ರಂದು ಫ್ರಾಂಚೈಸಿದಾರರ ಮೂಲಕ ಯುನೈಟೆಡ್ ಅರಬ್ ಎಮಿರೇಟ್ಸ್ (ದುಬೈ)ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಮೊದಲ ‘ನಂದಿನಿ ಕೆಫೆ ಮೂ’ ಅನ್ನು ಪ್ರಾರಂಭಿಸಿ ತುಪ್ಪ, ಬೆಣ್ಣೆ, ಚೀಸ್, ಯುಹೆಚ್‌ಟಿ ಹಾಲು, ಐಸ್‌ಕ್ರೀಂ, ಸಿಹಿ ಉತ್ಪನ್ನ ಹಾಗೂ ಖಾರದ ಉತ್ಪನ್ನಗಳನ್ನು ರಫ್ತು ಮಾಡಿ ಮಾರಾಟ ವಹಿವಾಟನ್ನು ವಿಸ್ತರಿಸಲಾಗಿದೆ. ಜೊತೆಗೆ, ದಿನಾಂಕ:29.08.2025 ರಿಂದ 31.08.2025 ರವರೆಗೆ ಯುಎಸ್‌ಎಯಲ್ಲಿನ ಲೇಕ್‌ಲ್ಯಾಂಡ್ ಫ್ಲೋರಿಡಾದಲ್ಲಿ ಆಯೋಜಿಸಲಾಗಿದ್ದ ನಾವಿಕ (ನಾವು ವಿಶ್ವ ಕನ್ನಡಿಗರು) ವಿಶ್ವ ಕನ್ನಡ ಸಮಾವೇಶ-2025ದಲ್ಲಿ ಕಹಾಮದ ವ್ಯವಸ್ಥಾಪಕ ನಿರ್ದೇಶಕರು ಪಾಲ್ಗೊಂಡು ಹೊಸ ವಿನ್ಯಾಸದ ಪ್ಯಾಕ್‌ನ ನಂದಿನಿ ತುಪ್ಪ ಹಾಗೂ ಸಿಹಿ ಉತ್ಪನ್ನಗಳನ್ನು ಈ ವೇದಿಕೆಯಲ್ಲಿ ಬಿಡುಗಡೆಗೊಳಿಸುತ್ತಾ, ಅಮೇರಿಕಾದಲ್ಲೂ ಇಂದಿನಿಂದ ನಂದಿನಿ ಉತ್ಪನ್ನಗಳು ಲಭ್ಯವಿರುವುದಾಗಿ ಘೋಷಿಸಿ, ಮರ್ಚೆಂಟ್ ರಫ್ತುದಾರರ ಮೂಲಕ ಸೆಪ್ಟೆಂಬರ್’2025 ರ ಮಾಹೆಯಿಂದ ವಿಶೇಷವಾಗಿ ಕರುನಾಡ ಹೆಮ್ಮೆಯ ನಂದಿನಿ ಪೇಡ, ಮೈಸೂರ್ ಪಾಕ್, ಬರ್ಫಿ ಹಾಗೂ ಸೇವರೀಸ್ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿರುತ್ತದೆ.
ಈ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾದಿಂದ 8.೦ ಮೆಟ್ರಿಕ್ ಟನ್, ಯುಎಸ್‌ಎದಿಂದ 5.೦ ಮೆಟ್ರಿಕ್ ಟನ್ ಹಾಗೂ ಆಸ್ಟ್ರೇಲಿಯಾದಿಂದ 1.೦ ಮೆಟ್ರಿಕ್ ಟನ್ ತುಪ್ಪಕ್ಕೆ ಬೇಡಿಕೆ ಬಂದಿದ್ದು, ಸದರಿ ಬೇಡಿಕೆಯಂತೆ ಕಹಾಮವು ಪ್ರಪ್ರಥಮ ಬಾರಿಗೆ ಸೌದಿ ಅರೇಬಿಯಾ, ಯುಎಸ್‌ಎ ಹಾಗೂ ಆಸ್ಟ್ರೇಲಿಯಾ ಗೆ ಕರುನಾಡ ಹೆಮ್ಮೆಯ ಬ್ರ್ಯಾಂಡ್ “ನಂದಿನಿ” ತುಪ್ಪದ ವಾಹನಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ.ಸಿದ್ದರಾಮಯ್ಯ ರವರು, ಮಾನ್ಯ ಪಶು-ಸಂಗೋಪನಾ ಇಲಾಖೆ ಸಚಿವರಾದ ಶ್ರೀ.ಕೆ.ವೆಂಕಟೇಶ್ ರವರು ಹಾಗೂ ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶ್ರೀಮತಿ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ರವರು ಸಾಂಕೇತಿಕವಾಗಿ ಹಸಿರು ನಿಶಾನೆಯನ್ನು ತೋರಿಸುವ ಮೂಲಕ ವಾಹನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೆಎಂಎಫ್‌ನ ಆಡಳಿತಾಧಿಕಾರಿಗಳು, ವ್ಯವಸ್ಥಾಪಕ ನಿರ್ದೇಶಕರು, ನಿರ್ದೇಶಕರು-ಮದರ್ ಡೇರಿ, ಮರ್ಚೆಂಟ್ ರಫ್ತುದಾರರು ಹಾಗೂ ಕೆಎಂಎಫ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
--
ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ
ಮೂರು ದೇಶಗಳಿಗೆ ನಂದಿನಿ ತುಪ್ಪ ರಫ್ತು: ಶುಭ ಹಾರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ನವೆಂಬರ್ 25: ಆಸ್ಟ್ರೇಲಿಯಾ, ಅಮೆರಿಕಾ ಹಾಗೂ ಸೌದಿ ಅರೇಬಿಯಾ ದೇಶಗಳಿಗೆ ಕರ್ನಾಟಕದ ನಂದಿನಿ ತುಪ್ಪವನ್ನು ರಫ್ತು ಮಾಡಲಾಗುತ್ತಿದೆ. ತುಪ್ಪದ ಬೇಡಿಕೆ ಹೆಚ್ಚಾಗುತ್ತಿದ್ದು, ದೇಶ ವಿದೇಶಗಳಲ್ಲಿಯೂ ಕರ್ನಾಟಕದ ನಂದಿನಿ ತುಪ್ಪಕ್ಕೆ ಬೇಡಿಕೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು .
ಅವರು ಇಂದು ಕಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಶುಭ ಹಾರೈಕೆ
ಮೂಲತ: ಮೈಸೂರು ಜಿಲ್ಲೆಯವರಾದ ಕುಮಾರ ಎಂಬುವರು ಅಮೆರಿಕಾದಲ್ಲಿ ನೆಲೆಸಿದ್ದು, ಇದರ ಏಜೆನ್ಸಿ ಪಡೆದಿದ್ದಾರೆ. ಕೆಎಂಎಫ್ ಹಾಗೂ ಕುಮಾರ ಅವರಿಗೆ ಶುಭವಾಗಲಿ ಎಂದು ಹಾರೈಸಿದರು.
ಎಲ್ಲಾ ಗೊಂದಲಗಳಿಗೆ ಮುಕ್ತಾಯ ಹಾಡಲು ಹೈಕಮಾಂಡ್ ತೀರ್ಮಾನಿಸಬೇಕು
ಶಾಸಕರ ಮತ್ತೊಂದು ತಂಡ ದೆಹಲಿಗೆ ಭೇಟಿ ನೀಡಿರುವ ಬಗ್ಗೆ ಮಾತನಾಡಿ ಹೈ ಕಮಾಂಡ್ ಅವರನ್ನು ಭೇಟಿ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಶಾಸಕರಿಗೆ ಅವರ ಅಭಿಪ್ರಾಯ ತಿಳಿಸುವ ಸ್ವಾತಂತ್ರ್ಯ ಇದೆ. ಪಕ್ಷರ ವರಿಷ್ಠರು ಏನು ಹೇಳುತ್ತಾರೆ ಎಂದು ನೋಡೋಣ ಎಂದರು. ಅಂತಿಮವಾಗಿ ಈ ಎಲ್ಲಾ ಗೊಂದಲಗಳಿಗೆ ಮುಕ್ತಾಯ ಹಾಡಲು ಹೈಕಮಾಂಡ್ ತೀರ್ಮಾನಿಸಬೇಕು ಎಂದರು.
ರಾಹುಲ್ ಗಾಂಧಿ ಭೇಟಿ ಸದ್ಯಕ್ಕಿಲ್ಲ
ಸಚಿವ ಸಂಪುಟ ವಿಸ್ತರಣೆಯನ್ನು ಪಕ್ಷದ ವರಿಷ್ಠರು ಸೂಚನೆ ನೀಡಿದಾಗ ಕೈಗೊಳ್ಳಲಾಗುವುದು ಎಂದರು. ರಾಹುಲ್ ಗಾಂಧಿಯವರನ್ನು ಭೇಟಿ ಮಾಡುವ ಇರಾದೆ ಸದ್ದಕ್ಕಿಲ್ಲ ಎಂದೂ ಕೂಡ ಅವರು ತಿಳಿಸಿದರು.








