ತುಮಕೂರಿನಲ್ಲಿ 2026ರ ಜನವರಿ 16ರಿಂದ 22ರವರೆಗೆ ಕರ್ನಾಟಕ ರಾಜ್ಯ ಒಲಂಪಿಕ್‌ ಕ್ರೀಡಾಕೂಟ

Tumkur:

Font size:

ತುಮಕೂರಿನಲ್ಲಿ 2026ರ ಜನವರಿ 16ರಿಂದ 22ರವರೆಗೆ ಕರ್ನಾಟಕ ರಾಜ್ಯ ಒಲಂಪಿಕ್‌ ಕ್ರೀಡಾಕೂಟ

ತುಮಕೂರಿನಲ್ಲಿ 2026ರ ಜನವರಿ 16ರಿಂದ 22ರವರೆಗೆ ಕರ್ನಾಟಕ ರಾಜ್ಯ ಒಲಂಪಿಕ್‌ ಕ್ರೀಡಾಕೂಟ ನಡೆಯಲಿರುವ ಹಿನ್ನೆಲೆಯಲ್ಲಿ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಅಧಿಕಾರಿಗಳೊಂದಿಗೆ ಭಾನುವಾರ ಗೃಹ ಸಚಿವ ಪರಮೇಶ್ವರ್ ಪೂರ್ವಭಾವಿ ಸಭೆ ನಡೆಸಿದರು.

ತುಮಕೂರು ದಸರಾ ಆಚರಣೆ ಯಶಸ್ವಿಯಾಗಿ ನಡೆದಿದೆ. ರಾಜ್ಯದ ಜನರ ಗಮನ ಸೆಳೆದಿದೆ. ಅದೇ ರೀತಿಯಲ್ಲಿ ತುಮಕೂರಿನಲ್ಲಿ ನಡೆಯುವ ಒಲಂಪಿಕ್‌ ಕ್ರೀಡಾ ಕೂಟವನ್ನು ಯಶಸ್ವಿಗೊಳಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಪ್ರಮಾಣಿಕವಾಗಿ ಶ್ರಮಿಸಬೇಕು ಸೂಚಿಸಿದೆ.
ಕಳೆದ ವರ್ಷ ಮಂಗಳೂರಿನಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಈ ವರ್ಷ ತುಮಕೂರು ಆತಿಥ್ಯ ವಹಿಸುತ್ತಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಡಳಿತದಿಂದ ನಿಗದಿಗೊಳಿಸಿರುವ ಉಪ ಸಮಿತಿಗಳು ಎಲ್ಲ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು.
ಸಾರ್ವಜನಿಕರಿಗೆ ಕ್ರೀಡೆಗಳನ್ನು ನೋಡಲು ಹಾಗೂ ಪ್ರೋತ್ಸಾಹಿಸಲು ಅನುಕೂಲವಾಗುವಂತೆ ಪ್ರಚಾರ ಕಾರ್ಯ, ಕ್ರೀಡಾಪಟುಗಳಿಗೆ ಸರಿಯಾದ ಊಟ- ವಸತಿ, ಪ್ರಯಾಣ ಸೌಲಭ್ಯ ಇತ್ಯಾದಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು.
ಸುಮಾರು 9 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಬರುತ್ತಿರುವುದರಿಂದ ಅವರ ಸುರಕ್ಷತೆ ಕೂಡ ಮುಖ್ಯವಿದ್ದು, ಪೊಲೀಸ್‌ ಇಲಾಖೆಯು ಅಗತ್ಯ ಸುರಕ್ಷತಾ ಕ್ರಮ ಮತ್ತು ಸೂಕ್ತ ಬಂದೋಬಸ್ತ್‌ ಕೈಗೊಳ್ಳಬೇಕು ಎಂದು ಸೂಚಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಆರ್.ಚೇತನ್‌, ಜಿಲ್ಲಾಧಿಕಾರಿ ಶುಭಕಲ್ಯಾಣ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಭು ಜಿ. ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಆಶೋಕ್‌ ಕೆ.ವಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ನಿಕೇತ್‌ರಾಜ್‌ ಮೌರ್ಯ ಅವರು ಸಭೆಯಲ್ಲಿ ಹಾಜರಿದ್ದರು.

Prev Post ಬೆಂಗಳೂರಿನ ತ್ಯಾಜ್ಯ ನೀರು ನಿರ್ವಹಣೆಗೆ 'ಸ್ವಿಸ್‌' ಟಚ್: ಸ್ವಿಟ್ಜರ್ಲೆಂಡ್ ನವೋದ್ಯಮಗಳಿಂದ ತಂತ್ರಜ್ಞಾನ ಹೂಡಿಕೆಗೆ ಒಲವು