ವಿಧಾನಸಭೆಯ ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳ ಸಭೆಯನ್ನು ನಡೆಸಿ ಅಗತ್ಯ ಸಹಕಾರ ಕೋರಿ ಸೂಚನೆಗಳನ್ನು ನೀಡಿದ ಸಭಾಧ್ಯಕ್ಷ ಯು.ಟಿ.ಖಾದರ್

BANGALURU:

Font size:

ವಿಧಾನಸಭೆಯ ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳ ಸಭೆಯನ್ನು ನಡೆಸಿ ಅಗತ್ಯ ಸಹಕಾರ ಕೋರಿ ಸೂಚನೆಗಳನ್ನು ನೀಡಿದ ಸಭಾಧ್ಯಕ್ಷ ಯು.ಟಿ.ಖಾದರ್

ಬೆಂಗಳೂರು, ಅ. 22 -ಅಕ್ಟೋಬರ್ 21 ರ ಸೋಮವಾರದಂದು ಸನ್ಮಾನ್ಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ನೂತನವಾಗಿ ರಚಿಸಲ್ಪಟ್ಟ ವಿಧಾನ ಮಂಡಲದ ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳ ಸಭೆಯನ್ನು ನಡೆಸಿದರು.

ನಂತರ ಅವರು, ಸಮಿತಿ ಪದ್ಧತಿಯನ್ನು ಬಲಪಡಿಸುವ ಬಗ್ಗೆ ಸಮಿತಿ ಅಧ್ಯಕ್ಷರುಗಳ ಸಹಕಾರವನ್ನು ಕೋರಿ, ಅಗತ್ಯ ಸೂಚನೆಗಳನ್ನು ನೀಡಿದರು. ವಿಧಾನ ಮಂಡಲದ/ವಿಧಾನ ಸಭೆಯ ಸಮಿತಿಗಳ ವರದಿಗಳ ಪ್ರಾಮುಖ್ಯತೆಯನ್ನು ಅರಿಯಲು ಹಾಗೂ ವರದಿಗಳಲ್ಲಿ ಶಿಫಾರಸ್ಸುಗಳ ಅನುμÁ್ಠನದ ಬಗ್ಗೆ ಕಾರ್ಯಾಂಗದ ಗಮನಕ್ಕೆ ತರಲು ಅನುಕೂಲವಾಗುವಂತೆ ಅವುಗಳನ್ನು ಸದನದಲ್ಲಿ ಚರ್ಚಿಸಲು ದಿನ ನಿಗದಿಪಡಿಸಿ ಸಮಿತಿಗಳ ಪ್ರಾಮುಖ್ಯತೆಯನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ಸಮಿತಿ ಸಭೆಗಳು ಪ್ರತಿ ತಿಂಗಳಲ್ಲಿ ನಾಲ್ಕು ದಿನಗಳು ನಡೆಯುತ್ತಿರುವುದರಿಂದ ಒಂದು ಸಭೆಯನ್ನು ಕಡ್ಡಾಯವಾಗಿ ಸಮಿತಿಯ ಶಿಫಾರಸ್ಸುಗಳ ಅನುμÁ್ಠನದ ಬಗ್ಗೆ ಮೀಸಲಿಟ್ಟು ವರದಿಯಲ್ಲಿನ ಶಿಫಾರಸ್ಸುಗಳನ್ನು ಜಾರಿಗೊಳಿಸಿ ಕಾರ್ಯಾಂಗವು ಶಾಸಕಾಂಗಕ್ಕೆ ಜವಾಬ್ದಾರಿಯಾಗಿದೆ ಎಂದರು.

ಎಲ್ಲಾ ಸಮಿತಿ ಸಭೆಗಳಿಗೆ ಸರ್ಕಾರದ ಇಲಾಖಾ ಮುಖ್ಯಸ್ಥರು ಅಂದರೆ ಸರ್ಕಾರದ ಕಾರ್ಯದರ್ಶಿ ಹಾಗೂ ಮೇಲ್ಪಟ್ಟ ಅಧಿಕಾರಿಗಳು ಭಾಗವಹಿಸಿ ಸಮಿತಿಗಳಿಗೆ ಸಹಕರಿಸುವಂತೆ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸಭೆಯಲ್ಲಿ ಹಾಜರಿದ್ದ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆಯನ್ನು ನೀಡಿದರು.

ಸಮಿತಿ ಸಭೆಗಳಿಗೆ ಅಗತ್ಯವಿರುವ ಮಾಹಿತಿಗಳನ್ನು ಕನಿಷ್ಠ ಸಭೆಯ ಮೂರು ದಿನಗಳಿಗೆ ಮುಂಚಿತವಾಗಿ ಒದಗಿಸಿ ಸಮಿತಿ ಸದಸ್ಯರುಗಳು ಸಕ್ರೀಯವಾಗಿ ಭಾಗವಹಿಸಲು ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.

ಸಮಿತಿಗಳ ಯಶಸ್ವೀ ಕಾರ್ಯನಿರ್ವಹಣೆಗೆ ವಿಧಾನ ಸಭೆ ಸಚಿವಾಲಯದಲ್ಲಿ ಒಬ್ಬ ಸಮನ್ವಯಾಧಿಕಾರಿಯನ್ನು ಅವರನ್ನು ನೇಮಿಸುವ ಬಗ್ಗೆ ಸಮಿತಿಯ ಅಧ್ಯಕ್ಷರುಗಳ ಗಮನಕ್ಕೆ ತರಲಾಯಿತು.

ಅಂತಿಮವಾಗಿ ಸಭಾಧ್ಯಕ್ಷರು ವಿಧಾನ ಮಂಡಲದ/ವಿಧಾನ ಸಭೆಯ ಸಮಿತಿಗಳು ಅತ್ಯಂತ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸಿ ಜವಾಬ್ದಾರಿಯುತವಾಗಿರುವುದನ್ನು ಶಾಸಕಾಂಗಕ್ಕೆ ಅನುμÁ್ಠನಗೊಳಿಸಿ ಸಂಸದೀಯ ಕಾರ್ಯಾಂಗ ಪದ್ದತಿಯನ್ನು ಬಲಿಷ್ಠಗೊಳಿಸಬೇಕೆಂದು ವಿನಂತಿಸಿದರು.

Prev Post ನವೆಂಬರ್ 14 ರಿಂದ 20ರ ವರೆಗೆ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ;ಕೆ.ಎನ್. ರಾಜಣ್ಣ
Next Post ಕಾಂತರಾಜ್ ವರದಿಯ ಸಾಧಕ ಬಾದಕಗಳ ಕುರಿತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ವತಿಯಿಂದ ಸಮಾಲೋಚನಾ ಸಭೆ