ಕರ್ನಾಟಕ ಆಹಾರ ನಿಗಮದ 51 ನೇ ವರ್ಷದ ದಿನಾಚರಣೆ

BANGALURU:

Font size:

.ಕರ್ನಾಟಕ ಆಹಾರ ನಿಗಮದ 51 ನೇ ವರ್ಷದ ದಿನಾಚರಣೆಯ ಅರಸು ನಮನ ಕಾರ್ಯಕ್ರಮದಲ್ಲಿ ಆಹಾರ ಸಚಿವ ಕೆಹೆಚ್ ಮುನಿಯಪ್ಪ ಭಾಗಿ.

ಬೆಂಗಳೂರು.25 ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ 51 ನೇ ವರ್ಷದ ನಿಗಮದ ದಿನಾಚರಣೆ ಕಾರ್ಯಕ್ರಮವನ್ನು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ನವರು ಉದ್ಘಾಟಿಸಿದರು.

ಮೌಲಾನ ಅಬ್ದುಲ್ ಕಾಲಂ ಅಜಾದ ಭವನದಲ್ಲಿ ನಡೆದ ಕಾರ್ಯಕ್ರಮ

ನಂತರ ಮಾತನಾಡಿದ ಸಚಿವರು ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸ್ ರವರು ನಿರ್ಮಿಸಿದ ‌ಈ‌ಆಹಾರ ನಿಗಮ ಇಂದಿಗೆ 51ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಿಗಮದ ಎಲ್ಲಾ ಅಧಿಕಾರಿಗಳಿಗೆ ಶುಭಾಶಯಗಳನ್ನು ಕೋರಿದರು.

ಶೋಷಿತರ ಹಾಗೂ ಹಿಂದುಳಿದ ವರ್ಗಗಳ ಪರವಾಗಿ ದ್ವನಿಯಾಗಿ ಕೆಲಸ ಮಾಡಿದ ದೇವರಾಜ್ ಅರಸ್ ರವರನ್ನು ಸ್ಮರಿಸುತ್ತಾ ಈ ನಿಗಮದಿಂದ ಬಡವರಿಗಾಗಿ ಉತ್ತಮ ಕೆಲಸ ಮಾಡುತ್ತಿದ್ದೇವೆ

ರೈತರಿಂದ ರಾಗಿ ,ಜೋಳವನ್ನು ಖರೀದಿಸಿ ಅದನ್ನು ಸಮರ್ಪಕವಾಗಿ ಜನರಿಗೆ ತಲುಪಿಸುತ್ತಿದ್ದೇವೆ ಎಂದರು

ನಿಗಮದ ಎಲ್ಲಾ ಬೇಡಿಕೆಗಳನ್ನು ಅತಿ ಬೇಗನೆ ಈಡೇರಿಸಲು ನಾನು ಮತ್ತು ಅಧ್ಯಕ್ಷರ ನೇತೃತ್ವದಲ್ಲಿ ಒಂದು ಸಭೆಯನ್ನು ನಡೆಸಿ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ ಎಂದರು

ನಂತರ ಸಗಟು ಮಳಿಗೆಯಲ್ಲಿ ಕಾರ್ಯನಿರ್ವಹಿಸುವ ಹಮಾಲಿಗಳನ್ನು ಸನ್ಮಾನಿಸಿದರು.

ಈ‌ ಸಂದರ್ಭದಲ್ಲಿ ಅಧ್ಯಕ್ಷರಾದ ಬಿ.ಜಿ.ಗೋವಿಂದಪ್ಪ, ನಿಗಮ ನಿರ್ದೇಶಕ ಚಂದ್ರಕಾಂತ್,ಪ್ರಾಧಾನ ವ್ಯವಸ್ಥಾಪಕರಾದ ಮಂಜುನಾಥ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್,ಹಾಗೂ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು

Prev Post ಹರಕೆ ಕುರಿಯಾದ ಸಿ.ಪಿ.ಯೋಗೇಶ್ವರ್‌, ನಿಖಿಲ್‌ ಕುಮಾರಸ್ವಾಮಿ ಗೆಲ್ಲಲಿದ್ದಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ
Next Post 👇ಕಿತ್ತೂರು ಉತ್ಸವದ ಸಮಾರೋಪ ಸಮಾರಂಭಕ್ಕಾಗಿ ಕಿತ್ತೂರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚನ್ನಮ್ಮ ವೃತ್ತದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.