ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಮಾರಪ್ಪನ ಪಾಳ್ಯ ವಾರ್ಡಿನ ಕೃಷ್ಣಾನಂದ ನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಆರೋಗ್ಯ ತಪಾಸಣಾ ಶಿಬಿರ
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಮಾರಪ್ಪನ ಪಾಳ್ಯ ವಾರ್ಡಿನ ಕೃಷ್ಣಾನಂದ ನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಶಾಸಕರಾದ ಶ್ರೀ ಕೆ.ಗೋಪಾಲಯ್ಯರವರ ನೇತೃತ್ವದಲ್ಲಿ, ಬೃಹತ್ ಪ್ರಮಾಣದಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್, ಮತ್ತು ಲಯನ್ಸ್ ಇಂಟರ್‌ನ್ಯಾಷನಲ್, ಮಾತೃ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಬಸವೇಶ್ವರನಗರ ಅಪೋಲೋ ಆಸ್ಪತ್ರೆ, ವೈಷ್ಣವಿ ಲಯನ್ಸ್ ಕ್ಲಬ್, ಪುಣ್ಯ ಆಸ್ಪತ್ರೆ,
ಮೋದಿ ಕಣ್ಣಿನ ಆಸ್ಪತ್ರೆ, ಕರ್ನಾಟಕ ಕ್ಯಾನ್ಸರ್ ಸೊಸೈಟಿ ಇವರುಗಳ ಸಹಯೋಗದೊಂದಿಗೆ ಶಿಬಿರವನ್ನು ನಡೆಸಲಾಯಿತು. ಇಲ್ಲಿ ವಿಶೇಷವಾಗಿ ಬಿ.ಪಿ. ಡಯಾಬಿಟೀಸ್, ಲಿವರ್ ಫಂಕ್ಷನ್, ಥೈರಾಯ್ಡ್, ಮೂಳೆ ದಂತ, ಸ್ತ್ರೀರೋಗ,ಇನ್ನಿತರ ಖಾಯಿಲೆಗಳ ಪರೀಕ್ಷೆ ಮಾಡಿ ಉಚಿತ ಔಷಧಿ ವಿತರಿಸಲಾಯಿತು. ವಿಶೇಷವಾಗಿ ಸ್ತನ ಕ್ಯಾನ್ಸರ್ ಕಾಯಿಲೆಯ ತಪಾಸಣೆ ನಡೆಸಿ ಸಲಹೆ ಮತ್ತು ಔಷಧಿ ನೀಡಲಾಯಿತು. ಕಣ್ಣಿನ ದೋಷ ಇರುವವರಿಗೆ ಆಧುನಿಕ ತಂತ್ರಜ್ಞಾನದಲ್ಲಿ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ವ್ಯವಸ್ಥೆಯನ್ನು ಕಲ್ಪಿಸಲಾಯಿತು.
ಸುಮಾರು1500 ಹೆಚ್ಚು ಜನ ಈ ಶಿಬಿರದ ಪ್ರಯೋಜನವನ್ನು ಪಡೆದರು ಎಲ್ಲರಿಗೂ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮಾತೃ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಮಹೇಂದ್ರ ರವರು ಶಾಸಕರ ಪುತ್ರರಾದ ಡಾ. ಜಿ ಮಂಜುನಾಥ್ ಗೌಡ, ಡಾ. ಜಿ.ಸಂಜಯ್ ಗೌಡರವರು, ಬಿಬಿಎಂಪಿ ವೈದ್ಯಕೀಯ ಸಿಬ್ಬಂದಿ ಪಾಲ್ಗೊಂಡಿದ್ದರು.
ಮಾಜಿ ಉಪ ಮಹಾಪೌರರಾದ ಶ್ರೀಮತಿ ಹೇಮಲತಾ ಗೋಪಾಲಯ್ಯ, ಶ್ರೀ ಮಹಾಲಕ್ಷ್ಮಿ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಜಯರಾಮ್, ಖಜಾಂಚಿ ವೆಂಕಟೇಶ್ ರವರು, ಕ್ಷೇತ್ರದ ಸ್ಥಳೀಯ ಮುಖಂಡರುಗಳಾದ ಮಾಜಿ ಬಿಬಿಎಂಪಿ ಸದಸ್ಯ ಮಹದೇವ್ , ಚಿಕ್ಕೇಗೌಡ,ವೆಂಕಟೇಶ್ ಮೂರ್ತಿ, ಶಿವಾನಂದಮೂರ್ತಿ, ಡಾಕ್ಟರ್ ನಾಗೇಂದ್ರ, ಪುಟ್ಟಣ್ಣ, ರೈಲ್ವೆ ನಾರಾಯಣ್, ರಾಘವೇಂದ್ರ ನಾಗರಾಜ್ ,ಮತ್ತು ಕಾರ್ಯಕರ್ತರು ಶಿಬಿರದಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಸ್ವಯಂ ಸೇವೆ ಸಲ್ಲಿಸಿದರು






