ವಿಜ್ಞಾನಿ ಮತ್ತು ಇಂಜಿನಿಯರ್ಸ್ ಗಳಿಗೆ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು:

Font size:

ಸಿ.ಎನ್.ರಾವ್ ಅವರ ಸಾಧನೆ ಇಡಿ ಮನು ಕುಲದ ಹೆಮ್ಮೆ ಎಂದು ಬಣ್ಣಿಸಿದರು

ಸಿ.ಎನ್.ರಾವ್ ಅವರ ಸಾಧನೆ ಇಡಿ ಮನು ಕುಲದ ಹೆಮ್ಮೆ. ವಿಜ್ಞಾನದ ಬೆಳವಣಿಗೆಗೆ ಇವರ ತುಡಿತ ಶ್ಲಾಘನೀಯ‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್.ಟಾಟಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜ್ಞಾನಿಗಳಿಗೆ ಮತ್ತು ಇಂಜಿನಿಯರ್ ಗಳಿಗೆ ಸರ್. ಎಂ. ವಿಶ್ವೇಶ್ವರಯ್ಯ, ಡಾ. ರಾಜಾರಾಮಣ್ಣ, ಸರ್. ಸಿ.ವಿರಾಮನ್, ಪ್ರೊ. ಸತೀಶ್ ಧವನ್ ಮತ್ತು ಡಾ. ಕಲ್ಪನಾ ಚಾವ್ಲಾ ರ ಹೆಸರಿನಲ್ಲಿ ವಿಜ್ಞಾನಿ ಮತ್ತು ಇಂಜಿನಿಯರ್ಸ್ ಗಳಿಗೆ ರಾಜ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿಗಳು ಕರ್ನಾಟಕ ರಾಜ್ಯ ವಿಜ್ಞಾನ-ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿ ನಂಬರ್ ಒನ್ ಇದ್ದೇವೆ. ಈ ವಿಜ್ಞಾನ ತಂತ್ರಜ್ಞಾನದ ಫಲ ಜನ ಸಾಮಾನ್ಯರಿಗೆ ತಲುಪಬೇಕು ಎಂದು ತಿಳಿಸಿದರು.

ವಿಜ್ಞಾನದ ಬೆಳವಣಿಗೆಯಿಂದ ಮಾತ್ರ ದೇಶದ ಸರ್ವತೋಮುಖ ಪ್ರಗತಿ ಸಾಧ್ಯ ಎಂದು ತಿಳಿಸಿದ ಅವರು ಪ್ರಶಸ್ತಿ ಪುರಸ್ಕೃತ ವಿಜ್ಞಾನಿಗಳ ಸಾಧನೆ ಯುವ ಪೀಳಿಗೆಗೆ ಆದರ್ಶ. ಇವರ ಸಾಧನೆ ವಿಜ್ಞಾನ-ತಂತ್ರಜ್ಞಾನದಲ್ಲಿ ಯುವ ಪೀಳಿಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಲು ಅನುಕೂಲ ಆಗುತ್ತದೆ ಎಂದು ತಿಳಿಸಿದರು.

ಬೆಂಗಳೂರು ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಆಗಿದೆ ಎಂದರೆ ಇದರಲ್ಲಿ ಹಲವು ವಿಜ್ಞಾನಿಗಳ, ತಂತ್ರಜ್ಞರ ಕೊಡುಗೆ ಇದೆ ವಿಜ್ಞಾನದ ಆಸಕ್ತಿ ಹೆಚ್ಚಿ, ವಿಜ್ಞಾನಿಗಳ ಸಂಖ್ಯೆ ಹೆಚ್ಚಾದರೆ ದೇಶದ ಬೆಳವಣಿಗೆ ಸಾಧ್ಯ. ಸಮಾಜದ ತಾರತಮ್ಯ ಅಳಿಯಬೇಕಾದರೆ ಎಲ್ಲಾ ಜಾತಿ, ಧರ್ಮ, ವರ್ಗಗಳಿಗೆ ಸಮಾನ ಅವಕಾಶಗಳು‌ ಸಿಗುವಂತಾಗಬೇಕು. ಗ್ರಾಮೀಣ ಭಾಗದ ಹಲವರು ವಿಜ್ಞಾನಿಗಳಾಗಿ ಪ್ರಶಸ್ತಿ ಪುರಸ್ಕೃತರಾಗಿರುವುದು ಖುಷಿಯ ವಿಚಾರ ಎಂದು ತಿಳಿಸಿದರು

ಪ್ರತಿಭೆ ಅನುವಂಶೀಯ ಅಲ್ಲ. ಅವಕಾಶ ಮತ್ತು ನಿರಂತರ ಶ್ರಮದಿಂದ ಪ್ರತಿಭೆ ವಿಸ್ತಾರಗೊಳ್ಳುತ್ತದೆ. ಯುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಎಲ್ಲರೂ ಮಾಡಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಉನ್ನತ ಮಟ್ಟದಲ್ಲಿ ಬೆಳೆದಲ್ಲಿ ದೇಶದ ಸರ್ವೋತೊಮುಖ ಬೆಳವಣಿಗೆ ಸಾಧ್ಯ ಎಂದು‌ ಅಭಿಪ್ರಾಯ ಪಟ್ಟರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಭೋಸರಾಜು ಅವರು ಮಾತನಾಡುತ್ತಾ ಸರ್. ಎಂ. ವಿಶ್ವೇಶ್ವರಯ್ಯ, ಸರ್. ಸಿ. ವಿ. ರಾಮನ್, ಪ್ರೊ. ಸತೀಶ್ ಧವನ್, ಡಾ. ರಾಜಾ ರಾಮಣ್ಣ ಹಾಗೂ ಡಾ. ಕಲ್ಪನಾ ಚಾವ್ಹಾರವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆಯನ್ನು ಮಾಡಿ, ಮಾನವ ಕಲ್ಯಾಣಕ್ಕಾಗಿ ಮತ್ತು ರಾಷ್ಟ್ರದ ಅಭಿವೃದ್ಧಿಗಾಗಿ ಅಪರಿಮಿತ ಕೊಡುಗೆಯನ್ನು ನೀಡಿದ್ದಾರೆ. ಅಂತಹ ಮಹನೀಯರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ವೈಜ್ಞಾನಿಕ ಕ್ಷೇತ್ರಕ್ಕೆ ಇವರುಗಳು ನೀಡಿರುವ ಕೊಡುಗೆಗಳು ಸಹ ಅಪರಿಮಿತವಾಗಿದೆ ಎಂದು ತಿಳಿಸಿದರು

ಅವರುಗಳ ಸಾಧನೆ ಇಂದಿನ ಯುವ ಪೀಳಿಗೆಗೆ ದಾರಿ ದೀಪವಾಗಲೆಂದು ಹಾರೈಸುತ್ತಾ, ಅವರ ಹೆಸರಿನಲ್ಲಿ 2022 ಮತ್ತು 2023 ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿರುವ ಎಲ್ಲಾ ಹಿರಿಯ ಹಾಗೂ ಯುವ ಪ್ರತಿಭಾನ್ವಿತ ವಿಜ್ಞಾನಿ ಮತ್ತು ಇಂಜಿನಿಯರುಗಳಿಗೆ ಸರ್ಕಾರದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಕರ್ನಾಟಕವನ್ನ ಸುಸ್ಥಿರ ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವುದು ನಮ್ಮ ಇಲಾಖೆಯ ಮೂಲ ಉದ್ದೇಶವಾಗಿದೆ. ಗ್ಯಾರಂಟಿಗಳ ಜೊತೆಗೆ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಇಲಾಖೆಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಹಾಗೂ ಎಲ್ಲಾ ಹೊಸ ಯೋಜನೆಗಳಿಗೆ ಬೆನ್ನುಲುಬಾಗಿ ತಮ್ಮ ಸಂಪೂರ್ಣ ಸಹಕಾರ ನೀಡಿದ್ದಾರೆ.

ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಸರ್ವರಿಗೂ ವಿಜ್ಞಾನ ಸುಲಭ ವಿಜ್ಞಾನ - ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ ಎಂಬ ಧೈಯವಾಕ್ಯದೊಂದಿಗೆ ನಮ್ಮ ಸರಕಾರ ಹಲವಾರು ನೂತನ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ರೂಪಿಸಿ ರಾಜ್ಯದ ಯುವ ಜನತೆಯಲ್ಲಿ ಹಾಗೂ ಸಾರ್ವಜನಿಕರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿ ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು

ಬೆಂಗಳೂರು ನಗರದಲ್ಲಿ ಸುಮಾರು 300 ಕೋಟಿ ವೆಚ್ಚದಲ್ಲಿ ವಿಜ್ಞಾನ ನಗರವನ್ನು (Science City Project) ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ವೈಜ್ಞಾನಿಕ ವಿಷಯಗಳ ಬಗ್ಗೆ ಅರಿವು ಮೂಡಿಸುವ ಹಾಗೂ ಅಂತರಿಕ್ಷ ಕ್ಷೇತ್ರದಲ್ಲಿ ಆಸಕ್ತಿ ಸೃಷ್ಟಿಸುವ ದೃಷ್ಟಿಯಿಂದ ರಾಜ್ಯದ 833 ವಸತಿ ಶಾಲೆಗಳಿಗೆ ಟೆಲಿಸ್ಕೋಪನ್ನು (TELESCOPE) ನೀಡುವ ಯೋಜನೆ ಈಗಾಗಲೇ ಚಾಲ್ತಿಯಲ್ಲಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಪ್ರೌಢಶಾಲೆಗಳಿಗೂ ಇದನ್ನು ವಿಸ್ತರಿಸಿ ಮಕ್ಕಳಲ್ಲಿ ವಿಜ್ಞಾನದ ಜ್ಞಾನಾರ್ಜನೆಗೆ ಅನುವು ಗ್ರಾಮೀಣ ಮಾಡಿಕೊಡಲಾಗುವುದು. ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹದ ಯೋಜನೆಯಡಿ (VISION GROUP ON SCIECNE AND TECHNOLOGY) ಸಂಸ್ಥೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧಿತ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ಸಂಶೋಧನೆಯನ್ನು ಪ್ರೋತ್ಸಾಹಿಸಲು ಹಾಗೂ ಉತ್ತೇಜಿಸಲು ಪ್ರತಿ ವರ್ಷ ಅನುದಾನವನ್ನು ನೀಡಲಾಗುತ್ತಿದೆ. 2023ನೇ ಸಾಲಿನಲ್ಲಿ ರಾಜ್ಯದ ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳ ಒಟ್ಟು 102 ಪ್ರಸ್ತಾವನೆಗಳನ್ನು ಆಯ್ಕೆ ಮಾಡಿ ರೂ. 16.45 ಕೋಟಿಗಳ ಅನುದಾನವನ್ನು ನೀಡಲಾಗಿದೆ.

ನ್ಯಾನೋ ಟೆಕ್ನಾಲಜಿಯು (NANO Technology) ಇಂದು ಹಲವಾರು ಕ್ಷೇತ್ರಗಳಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ರಾಜ್ಯದಲ್ಲಿ ಈ ಕ್ಷೇತ್ರದ ಬೆಳವಣಗೆಗೆ ಇಂಬು ನೀಡುವ ನಿಟ್ಟಿನಲ್ಲಿ ನ್ಯಾನೋ ಟೆಕ್ನಾಲಜಿ ಸಮಿಟ್‌ನ್ನ ಆಯೋಜಿಸಿ ನ್ಯಾನೋ ಟೆಕ್ನಾಲಜಿಯ ಕ್ಷೇತ್ರದಲ್ಲಿರುವ ಅವಕಾಶಗಳನ್ನ ನಮ್ಮ ಯುವ ಜನತೆಗೆ ತಲುಪಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಇದೇ ರೀತಿಯಲ್ಲಿಯೇ, ಕ್ವಾಂಟಮ್ ಟೆಕ್ನಾಲಜಿ (Quantum Technology) ಕೂಡಾ ಇಂದು ಹಲವಾರು ಕ್ಷೇತ್ರಗಳಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಇಡೀ ದೇಶದಲ್ಲೇ ಪ್ರಪ್ರಥಮ ಬಾರಿಗೆ ನಮ್ಮ ಸರಕಾರವು 2025 ರಲ್ಲಿ ಕ್ವಾಂಟಮ್ ಟೆಕ್ನಾಲಜಿ ಸಮಿಟನ್ನು ಆಯೋಜಿಸಲು ನಿರ್ಧರಿಸಿದೆ.

ಇತ್ತೀಚಿನ ದಿನಗಳಲ್ಲಿ ಅತೀ ಅಗತ್ಯವಾದ ನೀರಿನ ಸಂರಕ್ಷಣೆಯಲ್ಲಿ ಮಂಡಳಿಯು ಮುಖ್ಯ ಪಾತ್ರವನ್ನು ವಹಿಸುತ್ತಿದ್ದು, ಮಳೆ ನೀರು ಕೊಯ್ದು ಕುರಿತಂತೆ ಜನರಲ್ಲಿ ಅರಿವು ಮೂಡಿಸಿ. ರಾಜ್ಯದ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳಲ್ಲಿ ಮಳೆನೀರು ಕೊಯ್ದು ಪದ್ಧತಿಯನ್ನು ಅಳವಡಿಸಲು ವಿಸ್ತುತ ಯೋಜನಾ ವರದಿಗಳನ್ನು ಸಿದ್ಧಪಡಿಸುತ್ತಾ ತಾಂತ್ರಿಕ ಸಹಕಾರವನ್ನು ನೀಡುತ್ತಾ ಬಂದಿದೆ ಎಂದರು

ಕಳೆದ ನಾಲ್ಕು ದಶಕಗಳಿಂದ ಜನಸಾಮಾನ್ಯರಿಗೆ ಮುಟ್ಟುವಂತಹ ಹಲವಾರು ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯಕ್ರಮವನ್ನು ಮಂಡಳಿಯು ಯಶಸ್ವಿಯಾಗಿ ಅನುಷ್ಠಾನಗೊಳಿಸಿಕೊಂಡು ಬರುತ್ತಿರುವುದು ಸಂತಸದ ವಿಷಯವಾಗಿದೆ.

ರಾಜ್ಯದ ಅಭಿವೃದ್ಧಿಗೆ ಪೂರಕವಾಗುವ ಅದರಲ್ಲೂ ರೈತರಿಗೆ ನೆರವಾಗುವಂತಹ ಇನ್ನೂ ಹೆಚ್ಚಿನ ತಂತ್ರಜ್ಞಾನ ಆಧಾರಿತ ಯೋಜನೆಗಳನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ರೂಪಿಸಿ, ಸಮಾಜದ ಬೆಳವಣಗೆಗೆ ಅಗತ್ಯವಿರುವ ಅಂಶಗಳನ್ನು ಹೊಂದಿರುವ ಕಾರ್ಯಗಳನ್ನು ಕೈಗೊಳ್ಳಲಿ ಎಂದು ತಿಳಿಸಿದರು

ರಾಜ್ಯ ಮಟ್ಟದ ವಿಜ್ಞಾನ ತಂತ್ರಜ್ಞಾನ ಪ್ರಶಸ್ತಿಗೆ ಭಾಜನರಾಗಿರುವ ಎಲ್ಲಾ ಹಿರಿಯ ಹಾಗೂ ಯುವ ವಿಜ್ಞಾನಿ ಮತ್ತು ಇಂಜಿನಿಯರ್ ಗಳಿಗೆ ಮತ್ತೊಮ್ಮೆ ಅಭಿನಂದಿಸುತ್ತಾ, ತಾವುಗಳು ಯುವ ಪೀಳಿಗೆಗೆ ಮಾರ್ಗದರ್ಶಕರಾಗಿ, ರಾಜ್ಯದ ಬೆಳವಣಗೆಯಲ್ಲಿ ಪಾಲ್ಗೊಳ್ಳಬೇಕೆಂದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲಿನಸ್ ಪೌಲಿಂಗ್ ಸಂಶೋಧನಾ ಪ್ರಾಧ್ಯಾಪಕರು, ಜೆಎನ್ ಸಿಎಎಸ್ ಆರ್ ಗೌರವ ಅಧ್ಯಕ್ಷರಾದ ಭಾರತ ರತ್ನ ಪ್ರೊ.ಸಿ.ಎನ್.ಆರ್.ರಾವ್, ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರು ಹಾಗೂ ಇಸ್ರೋ ಮಾಜಿ ಅಧ್ಯಕ್ಷರು ಎ.ಎಸ್. ಕಿರಣ್ ಕುಮಾರ್, ಭಾರತೀಯ ವಿಜ್ಞಾನ ಸಂಸ್ಥೆ ನಿರ್ದೇಶಕರಾದ ಪ್ರೊ. ಗೋವಿಂದನ್ ರಂಗರಾಜನ್, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಭಾರತೀಯ ವಿಜ್ಞಾನ ಸಂಸ್ಥೆ ಕಾರ್ಯದರ್ಶಿ ಪ್ರೊ. ಅಶೋಕ್ ಎಂ ರಾಯಚೂರ, ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ.ಏಕ್ ರೂಪ್ ಕೌರ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

2022 ಮತ್ತು 2023 ನೇ ಪ್ರಶಸ್ತಿಗಳ ಆಯ್ಕೆಗೆ ಸಂಬಂಧಿಸಿದಂತೆ ಭಾರತರತ್ನ ಪ್ರೊ.ಸಿ.ಎನ್.ಆರ್. ರಾವ್ ಅಧ್ಯಕ್ಷತೆಯಲ್ಲಿ ಹೆಸರಾಂತ ವಿಜ್ಞಾನಿಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯು ಆಯ್ಕೆ ಮಾಡಲಾದ ಪಟ್ಟಿಗೆ ಸರ್ಕಾರವು ಅನುಮೋದನೆ ನೀಡಿ ಇಂದು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.


ಸರ್. ಎಂ. ವಿಶ್ವೇಶ್ವರಯ್ಯ ಹಿರಿಯ ವಿಜ್ಞಾನಿ ರಾಜ್ಯಪ್ರಶಸ್ತಿ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯದ ಅಭಿವೃದ್ಧಿಗಾಗಿ ತಮ್ಮ ಜೀವನಾವಧಿಯಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಇಬ್ಬರು ಹಿರಿಯ ವಿಜ್ಞಾನಿ / ಇಂಜಿನಿಯರ್ ಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.

ಈ ಪ್ರಶಸ್ತಿಯು ರೂ. 2,00,000 ನಗದು, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿಪತ್ರವನ್ನು ಒಳಗೊಂಡಿರುತ್ತದೆ.

ಈ ಪ್ರಶಸ್ತಿಗೆ 2022ನೇ ಸಾಲಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಿಂದ ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ ಮೆದುಳಿನ ಸಂಶೋಧನಾ ಕೇಂದ್ರ ನಿರ್ದೇಶಕರು ಹಾಗೂ ಕಂಪ್ಯೂಟರ್ ಸೈನ್ಸ್ ಮತ್ತು ಆಟೋಮೆಷಿನ್ ವಿಭಾಗÀದ ಪ್ರಾಧ್ಯಾಪಕರಾದ ಪ್ರೊ.ವೈ.ನರಹರಿ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿಗಳು ಮತ್ತು ನವದೆಹಲಿ ಪಿಪಿವಿ & ಎಫ್‍ಆರ್‍ಎ, ಭಾರತ ಸರ್ಕಾರದ ಮಾಜಿ ಅಧ್ಯಕ್ಷರಾದ ಪ್ರೊ. ರಾಮಪ್ಪ ರಾಯಪ್ಪ ಹಂಚಿನಾಳ್ ಅವರು ಹಾಗೂ 2023 ನೇ ಸಾಲಿಗೆ ಡಾ. ಶುಭ ವಿ. ಮಾಜಿ ಪ್ರತಿಷ್ಠಿತ ವಿಜ್ಞಾನಿ ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ ನವದೆಹಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಸಿಎಸ್‍ಐಆರ್ - ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರಿಸ್, ಬೆಂಗಳೂರು ಮತ್ತು ಪ್ರೊ.ಮದನ್‍ರಾವ್ ಹಿರಿಯ ಪ್ರಾಧ್ಯಾಪಕರು (I) ಜೈವಿಕ ವಿಜ್ಞಾನಗಳ ರಾಷ್ಟ್ರೀಯ ಕೇಂದ್ರ, ಜಿಕೆವಿಕೆ, ಕ್ಯಾಂಪಸ್ ಬಳ್ಳಾರಿ ರಸ್ತೆ, ಬೆಂಗಳೂರು ಅವರುಗಳು ಭಾಜನರಾಗಿದ್ದಾರೆ.

ಡಾ. ರಾಜಾರಾಮಣ್ಣ ವಿಜ್ಞಾನಿ ರಾಜ್ಯ ಪ್ರಶಸ್ತಿ: ರಾಜ್ಯದಲ್ಲಿ ವಿಜ್ಞಾನ ಶಿಕ್ಷಣ / ವಿಜ್ಞಾನದ ಇತಿಹಾಸ ಮತ್ತು ತತ್ವಜ್ಞಾನ / ವಿಜ್ಞಾನ ಮತ್ತು ಸಮಾಜ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಇಬ್ಬರು ಹಿರಿಯ ವಿಜ್ಞಾನಿ / ಇಂಜಿನಿಯರ್ ಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.

ಈ ಪ್ರಶಸ್ತಿಯು ರೂ. 1,50,000/-ನಗದು, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.

ಈ ಪ್ರಶಸ್ತಿಗೆ 2022 ನೇ ಸಾಲಿಗೆ ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ನಿರ್ದೇಶಕರು (ಸಂಶೋಧನೆ) ಮತ್ತು ಪ್ರಾಧ್ಯಾಪಕರಾದ ಪ್ರೊ.ಕಾಪೇಟ್ಟು ಸತ್ಯಮೂರ್ತಿ ಹಾಗೂ ಹುಬ್ಬಳ್ಳಿಯ ಕೆಎಲ್‍ಇ ತಾಂತ್ರಿಕ ವಿಶ್ವವಿದ್ಯಾಲಯದ ಪ್ರೊ.ಪ್ರಭುಗೌಡ ಎಂ.ಗೌಡ ಪಾಟೀಲ್, ಮತ್ತು 2023 ನೇ ಸಾಲಿಗೆ ವಿಜ್ಞಾನದ ಇತಿಹಾಸ ಮತ್ತು ತತ್ವಶಾಸ್ತ್ರ / ವಿಜ್ಞಾನ ಮತ್ತು ಸಮಾಜ / ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಡಾ. ಸಿ.ವಿ. ಯಲಮಗ್ಗಡ್, ವಿಜ್ಞಾನಿ - ಎಫ್, ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಕೇಂದ್ರ, ಅರ್ಕಾವತಿ ಸರ್ವೆ ನಂ.7, ಶಿವನಾಪುರ, ದಾಸನಪುರ ಹೋಬಳಿ, ಬೆಂಗಳೂರು ಹಾಗೂ ಪ್ರೊ.ರಾಮನಾಥನ್ ಸೌಧಾಮಿನಿ, ಹಿರಿಯ ಪ್ರಾಧ್ಯಾಪಕರು, ಜೈವಿಕ ವಿಜ್ಞಾನಗಳ ರಾಷ್ಟ್ರೀಯ ಕೇಂದ್ರ, ಕೃಷಿ ವಿಶ್ವವಿದ್ಯಾಲಯ ಬಳ್ಳಾರಿ ರಸ್ತೆ, ಬೆಂಗಳೂರು ಅವರುಗಳು ಭಾಜನರಾಗಿದ್ದಾರೆ

ಸರ್. ಸಿ.ವಿ. ರಾಮನ್ ಯುವ ವಿಜ್ಞಾನಿ ರಾಜ್ಯ ಪ್ರಶಸ್ತಿ: ಈ ಪ್ರಶಸ್ತಿಗಳನ್ನು ರಾಜ್ಯದ ಯುವ ವಿಜ್ಞಾನಿಗಳನ್ನು ಪ್ರೋತ್ಸಾಹಿಸಲು, ಅವರ ವಿಶಿಷ್ಟ ಕಾರ್ಯಸಾಧನೆಯನ್ನು ಪರಿಗಣಿಸಿ, ಭೌತ ವಿಜ್ಞಾನ ಮತ್ತು ಗಣಿತಶಾಸ್ತ್ರ, ರಾಸಾಯನ ವಿಜ್ಞಾನ, ಜೀವ ವಿಜ್ಞಾನ, ವೈದ್ಯಕೀಯ ವಿಜ್ಞಾನ, ಕೃಷಿ ವಿಜ್ಞಾನ ಮತ್ತು ಪಶುಸಂಗೋಪನೆಗಳ ಐದು ಕ್ಷೇತ್ರಗಳಲ್ಲಿ ಪ್ರತಿವರ್ಷ 5 ವಿಜ್ಞಾನಿಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.

2022ನೇ ಸಾಲಿಗೆ ಭೌತವಿಜ್ಞಾನದಲ್ಲಿ ಪ್ರೊ. ಎ.ಪಿ.ಜ್ಞಾನಪ್ರಕಾಶ್, ಪ್ರಾಧ್ಯಾಪಕರು, ಭೌತಶಾಸ್ತ್ರ ಮೈಸೂರು ವಿಶ್ವವಿದ್ಯಾನಿಲಯ, ಮಾನಸ ಗಂಗೋತ್ರಿ ಮೈಸೂರು, ರಸಾಯನಿಕ ವಿಜ್ಞಾನದಲ್ಲಿ ಪ್ರೊ. ಸತೀಶ್ ಅಮೃತರಾವ್ ಪಾಟೀಲ್, ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು ಎಸ್‍ಎಸ್‍ಸಿಯು, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು, ವೈದ್ಯಕೀಯ ವಿಜ್ಞಾನದಲ್ಲಿ ಡಾ. ರಾಜ್‍ಕುಮಾರ್ ಟಿ, ಪ್ರಾಧ್ಯಾಪಕರು, ಬಯೋ ಕೆಮೆಸ್ಟ್ರಿ ವಿಭಾಗ, ಜೆ.ಎಸ್.ಎಸ್. ವೈಧ್ಯಕೀಯ ಕಾಲೇಜು, ಜೆ.ಎಸ್.ಎಸ್. ಉನ್ನತ ಶಿಕ್ಷಣ ಮತ್ತು ಸಂಶೋಧನಾ ಆಕಾಡೆಮಿ, ಎಸ್.ಎಸ್. ನಗರ, ಮೈಸೂರು, ಜೀವವಿಜ್ಞಾನ ವಿಭಾಗದಲ್ಲಿ ಡಾ. ಮೋಹನ್ ಸಿ.ಡಿ, ಹಿರಿಯ ವಿಜ್ಞಾನಿ, ಎಫ್.ಎ.ಎಸ್.ಟಿ ವಿಭಾಗ, ಸಿ.ಎಸ್.ಐ.ಆರ್. ಇಂಡಿಯನ್ ಇನ್ಸಿಟ್ಯೂಟ್ ಆಫ್ ಟಾಕ್ಸಿಕಾಲಜಿ ಸಂಶೋಧನೆ, ವಿರ್ಶವ ವಿಜ್ಞಾನ ಭವನ, 31, ಮಹಾತ್ಮ ಗಾಂಧಿ ಮಾರ್ಗ ಲಕ್ನೋ ಉತ್ತರ ಪ್ರದೇಶ, ಕೃಷಿ ವಿಜ್ಞನ ಮತ್ತು ಪಶು ಸಂಗೋಪನೆ ವಿಭಾಗದಲ್ಲಿ ಡಾ. ಸತೀಶ್ ಬಿ ಶಿವಚಂದ್ರ, ಪ್ರಧಾನ ವಿಜ್ಞಾನಿ, ಐ.ಸಿ.ಎ.ಆರ್. ನ್ಯಾಷನಲ್ ಇನ್ಸಿಟ್ಟಯೂಟ್ ಆಫ್ ವೆಟರ್‍ನರಿ ಎಪಿಡೆಮಿಯಾಲಜಿ ಮತ್ತು ಡಿಸಿಜ್ ಇನ್ಫರ್‍ಮೆಟಿಕ್ಸ್ (ನಿವೇದಿ) ಬೆಂಗಳೂರು ಹಾಗೂ 2023ನೇ ಸಾಲಿಗೆ ಗಣಿತ ವಿಜ್ಞಾನ ವಿಭಾಗದಲ್ಲಿ ಪ್ರಸನ್ನಕುಮಾರ ಬಿ.ಸಿ, ಪ್ರಾಧ್ಯಾಪಕರು, ಗಣಿತ ಶಾಸ್ತ್ರ ವಿಭಾಗ, ದಾವಣೆಗೆರೆ ವಿಶ್ವವಿದ್ಯಾಲಯ, ಶಿವಗಂಗೋತ್ರಿ, ದಾವಣಗೆರೆ, ರಸಾಯನಿಕ ವಿಜ್ಞಾನ ವಿಭಾಗದಲ್ಲಿ ಪ್ರೊ. ನರೇಂದ್ರ ರೆಡ್ಡಿ, ಪ್ರಾಧ್ಯಾಪಕರು, ಇನ್ಕ್ಯೂಬೇಷನ್ ಇನ್ನೋವೇಷನ್ ರಿಸರ್ಚ್ ಮತ್ತು ಕನ್ಸಲ್‍ಟೆನ್ಸಿ ಕೇಂದ್ರ, ಜ್ಯೋತಿ ಇನ್ಸಿಟ್ಯೂಷನ್ ಆಫ್ ಟೆಕ್ನಾಲಜಿ ಕ್ಯಾಂಪಸ್ ತಥಾಗುಣಿ ಪೋಸ್ಟ್, ಬೆಂಗಳೂರು, ವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ ಡಾ. ದ್ವಾರಕನಾಥ್ ಶ್ರೀನಿವಾಸ್ ಪ್ರಾಧ್ಯಾಪಕರು ಮತ್ತು ಘಟಕದ ಮುಖ್ಯಸ್ಥರು, ನರಶಸ್ತ್ರ ಚಿಕಿತ್ಸಾ ವಿಭಾಗ, ನ್ಯೂರೋ ಸೆಂಟರ್, ನಿಮಾನ್ಸ್ ಬೆಂಗಳೂರು, ಜೀವ ವಿಜ್ಞಾನ ವಿಭಾಗದಲ್ಲಿ ಪ್ರೊ. ಸಂದೀಪ್ ಎಂ. ಈಶ್ವರಪ್ಪ , ಅಸೋಸಿಯೇಟ್ ಪ್ರೊಫೆಸರ್, ಬಯೋ ಕೆಮಿಸ್ಟ್ರಿ ವಿಭಾಗ, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ಮತ್ತು ಕೃಷಿ ವಿಜ್ಞಾನ ಪಶು ಸಂಗೋಪನಾ ವಿಭಾಗದಲ್ಲಿ ಡಾ. ಬಸವಪ್ರಭು ಎಲ್. ಪಾಟೀಲ್, ಪ್ರಧಾನ ವಿಜ್ಞಾನಿ, (ಕೃಷಿ ಜೈವಿಕ ತಂತ್ರಜ್ಞಾನ) ಜೈವಿಕ ತಂತ್ರಜ್ಞಾನ ವಿಭಾಗ, ಐ.ಸಿ.ಎ.ಆರ್-ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಆರ್ಟಿಕಚರಲ್ ರಿಸಚ್, ಬೆಂಗಳೂರು ಅವರುಗಳು ಭಾಜನರಾಗಿದ್ದಾರೆ.

ಪ್ರೊ. ಸತೀಶ್ ಧವನ್ ಯುವ ಇಂಜಿನಿಯರ್ ರಾಜ್ಯ ಪ್ರಶಸ್ತಿ: ಈ ಪ್ರಶಸ್ತಿಗಳನ್ನು ರಾಜ್ಯದ ಯುವ ಇಂಜಿನಿಯರುಗಳನ್ನು ಪ್ರೋತ್ಸಾಹಿಸಲು ಅವರ ವಿಶಿಷ್ಟ ಕಾರ್ಯ ಸಾಧನೆಯನ್ನು ಪರಿಗಣಿಸಿ, ಇಂಜಿನಿಯರಿಂಗ್ ವಿಜ್ಞಾನ ಕ್ಷೇತ್ರಗಳಲ್ಲಿ ಪ್ರತಿ ವರ್ಷ 4 ಇಂಜಿನಿಯರ್ ಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಸದರಿ ಪ್ರಶಸ್ತಿಗೆ 2022ನೇ ಸಾಲಿಗೆ ಇಂಜಿನಿಯರಿಂಗ್ ವಿಜ್ಞಾನ ಕ್ಷೇತ್ರದಲ್ಲಿ ಪ್ರೊ. ಕಲಬುರಗಿ ವಿ.ಟಿ.ಯು ಸಂಯೋಜಕರು ಹಾಗೂ ಪ್ರಾಧ್ಯಪಕರಾದ ಪ್ರೊ. ಶುಭಾಂಗಿ ದಿಗಂಬರ್ ಚಿಕ್ತೆ, ಮಂಗಳೂರಿನ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರೊ. ಹೇಮಂತ್ ಕುಮಾರ, ಕಲಬುರಗಿಯ ಪಿ.ಡಿ.ಎ. ಕಾಲೇಜ್ ಆಫ್ ಇಂಜಿನಿಯರಿಂಗ್‍ನ ಪ್ರೊ. ಜಯಶ್ರೀ ಅಗರಖೇಡ್, ಬೆಂಗಳೂರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‍ನ ಡಾ. ಮಾದೇವ ನಾಗರಾಳ್ ಹಾಗೂ 2023ನೇ ಸಾಲಿಗೆ ಬೆಂಗಳೂರು ಐ.ಐ.ಐ.ಟಿಯ ಅಸೋಸಿಯೇಟ್ ಪ್ರೊ. ಮಾಧವ ರಾಮಕೃಷ್ಣರಾವ್, ಬೆಂಗಳೂರು ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್‍ನ ಸಹಾಯಕ ಪ್ರಾಧ್ಯಾಪಕರಾದ ಡಾ. ಜಯಪ್ರಕಾಶ್, ಧಾರವಾಡ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಸೋಸಿಯೇಟ್ ಪ್ರೊ. ಅಮರನಾಥ ಹೆಗಡೆ ಮತ್ತು ಬೆಂಗಳೂರಿನ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಅಸೋಸಿಯೇಟ್ ಪ್ರೊ. ಶ್ರೀಶರಾವ್. ಎಂ.ವಿ ಅವರುಗಳು ಭಾಜನರಾಗಿದ್ದಾರೆ.

ಡಾ. ಕಲ್ಪನಾ ಚಾವ್ಲಾ ಮಹಿಳಾ ಯುವ ವಿಜ್ಞಾನಿ ಪ್ರಶಸ್ತಿ : ಈ ಪ್ರಶಸ್ತಿಗೆ ರಾಜ್ಯದ ಯುವ ಮಹಿಳಾ ವಿಜ್ಞಾನಿ / ಇಂಜಿನಿಯರ್ ಗಳನ್ನು ಪ್ರತ್ಸಾಹಿಸಲು ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಅವರ ವಿಶಿಷ್ಟ ಕಾರ್ಯಸಾಧನೆಯನ್ನು ಪರಿಗಣಿಸಿ, ಪ್ರತಿವರ್ಷ ಒಬ್ಬ ಮಹಿಳಾ ಯುವ ವಿಜ್ಞಾನಿ / ಇಂಜಿನಿಯರ್‍ಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.

2022ನೇ ಸಾಲಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮೈಸೂರಿನ ಪ್ಲಾಂಟೇಷನ್ ಉತ್ಪನ್ನಗಳು, ಮಸಾಲೆಗಳು ಮತ್ತು ಸುವಾಸನೆ ತಂತ್ರಜ್ಞಾನ ಇಲಾಖೆಯ ಹಿರಿಯ ಪ್ರಧಾನ ವಿಜ್ಞಾನಿ ಡಾ. ಪುಷ್ಪ ಎಸ್. ಮೂರ್ತಿ ಹಾಗೂ 2023ನೇ ಸಾಲಿಗೆ ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯದ ಎಸ್.ಇ.ಆರ್.ಬಿ ಸಂಶೋಧನಾ ವಿಜ್ಞಾನಿ ಡಾ. ಸಂಧ್ಯಾ ಶೆಣೈ ಯು ಅವರುಗಳು ಭಾಜನರಾಗಿರುತ್ತಾರೆ.

ಸರ್. ಸಿ.ವಿ. ರಾಮನ್, ಪ್ರೊ. ಸತೀಶ್‍ಧವನ್ ಮತ್ತು ಡಾ. ಕಲ್ಪನಾ ಚಾವ್ಲಾ ಪ್ರಶಸ್ತಿಗಳು ರೂ. 1,00,000/- ನಗದು ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತವೆ.

Prev Post 2024ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರಕಟ ಪ್ರೊ. ಜಿ.ಬಿ. ಶಿವರಾಜು ಹಾಗೂ ಹಾವೇರಿ ಜಿಲ್ಲೆ ಹೊಸರಿತ್ತಿಯ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಗೆ ಗೌರವ
Next Post ಇಂದು ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ರೈಲ್ ಸೌಧದಲ್ಲಿ ಹಾವೇರಿ