ಕಾಂಗ್ರೆಸ್ಸಿನ ಢೋಂಗಿ ಜಾತ್ಯಾತೀತತೆಗೆ ದೇವಸ್ಥಾನಗಳ ಒಂದಿಂಚೂ ಜಾಗ ಜಾಸ್ತಿಯಾಗಿಲ್ಲ
*ಜಮೀರ್ ಅಹ್ಮದ್ ರನ್ನ ಕಿತ್ತೊಗೆಯಲಿ ಕಾಂಗ್ರೆಸ್*
*- ಈ ರಾಜ್ಯ- ದೇಶವನ್ನು ಇಸ್ಲಾಮೀಕರಣ ಮಾಡುತ್ತಿದ್ದಾರೆ ಜಮೀರ್*
*- ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ*
ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಮೊದಲು ಜಮೀರ್ ಅಹ್ಮದ್ ರನ್ನು ಕಿತ್ತೊಗೆಯಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದರು.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ವಕ್ಫ್ ಭೂ ಕಬಳಿಕೆಯಲ್ಲಿ ಜಮೀರ್ ಅಹ್ಮದ್ ಸಂಚಿದೆ. ಕಾಂಗ್ರೆಸ್ ಪಾರ್ಟಿಗೆ ಮಾನ ಮರ್ಯಾದೆ ಇದ್ರೆ ತಕ್ಷಣ ಅವರನ್ನು ಪಕ್ಷದಿಂದಲೇ ಕಿತ್ತೊಗೆಯಲಿ ಎಂದು ಆಗ್ರಹಿಸಿದರು.
ಸಚಿವ ಜಮೀರ್ ಅಹ್ಮದ್ ಈ ರಾಜ್ಯ ಮತ್ತು ದೇಶವನ್ನು ಇಸ್ಲಾಂಮೀಕರಣ ಮಾಡಲು ನಿಂತಿದ್ದು, ಎಲ್ಲೆಡೆ ಕೋಮು - ದ್ವೇಷ ಹರಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತಾಂಧತೆಯಲ್ಲಿ ತೇಲಾಡುತ್ತಿರುವ ಜಮೀರ್ ಅಹ್ಮದ್ ರನ್ನು ಕಾಂಗ್ರೆಸ್ ಪಾರ್ಟಿ ಮೊದಲು ಕಿತ್ತಿಗೆಯಲೇಬೇಕು ಎಂದು ಪ್ರಲ್ಹಾದ ಜೋಶಿ ಆಗ್ರಹಿಸಿದರು.
ಕಾಂಗ್ರೆಸ್ಸಿನ ಢೋಂಗಿ ಜಾತ್ಯಾತೀತತೆಗೆ ದೇವಸ್ಥಾನಗಳ ಒಂದಿಂಚೂ ಜಾಗ ಜಾಸ್ತಿಯಾಗಿಲ್ಲ*
*- ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ*
ಹುಬ್ಬಳ್ಳಿ: ಕಾಂಗ್ರೆಸ್ಸಿನ ಢೋಂಗಿ ಜಾತ್ಯಾತೀತತೆ ಮತ್ತು ಮುಸ್ಲಿಂ ತುಷ್ಟೀಕರಣದಿಂದಾಗಿ ಮುಜರಾಯಿ ದೇವಸ್ಥಾನಗಳ ಒಂದೇ ಒಂದು ಇಂಚು ಜಾಗವೂ ಜಾಸ್ತಿಯಾಗಿಲ್ಲ; ಬದಲಿಗೆ ಎಲ್ಲಾ ವಕ್ಫ್ ದ್ದೇ ಆಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ದೊಡ್ಡ ಆದಾಯವುಳ್ಳ ದೇವಸ್ಥಾನಗಳ ಕಂಟ್ರೋಲ್ ಅನ್ನು ರಾಜ್ಯ ಸರ್ಕಾರವೇ ಇರಿಸಿಕೊಂಡಿದೆ ಎಂದು ಹೇಳಿದರು.
ಅನೇಕ ದೊಡ್ಡ ದೊಡ್ಡ ದೇವಸ್ಥಾನಗಳ ಆಡಳಿತ, ಕಂಟ್ರೋಲ್ ರಾಜ್ಯ ಸರ್ಕಾರದ ಬಳಿ, ಮುಜರಾಯಿ ಇಲಾಖೆ ಬಳಿ ಇದೆ. ಈ ದೇಗುಲಗಳ ಆಸ್ತಿಯೇ ಒಂದಿಂಚೂ ಹೆಚ್ಚಿಲ್ಲ. ಹೀಗಿರುವಾಗ ವಕ್ಫ್ ಗೆ ಹೇಗೆ ಆಸ್ತಿ ಹೋಗುತ್ತದೆ? ಅದರ ಆಸ್ತಿ ಹೇಗೆ ಹೆಚ್ಚುತ್ತದೆ? ಎಂದು ಪ್ರಲ್ಹಾದ ಜೋಶಿ ಪ್ರಶ್ನಿಸಿದರು.
ಈ ದೇಶದ ದೇವಸ್ಥಾನಗಳು ಸಾವಿರಾರು ವರ್ಷಗಳಿಂದ ಇವೆ. ಹಿಂದೂ ಧರ್ಮವಾಗಲಿ ಅಥವಾ ಭಾರತೀಯ ಯಾವುದೇ ಧರ್ಮವಾಗಲಿ ಹುಟ್ಟಿದಾಗ ದೇಶದೊಳಗೆ ಇಸ್ಲಾಂ ಇರಲೇ ಇಲ್ಲ ಎಂದು ಹೇಳಿದರು.
ಸರ್ಕಾರದ್ದು ಮಾತ್ರವಲ್ಲ ಸುಪ್ರೀಂ ಕೋರ್ಟ್ ಕಂಟ್ರೋಲ್ ಸಹ ಇಲ್ಲ ಎಂದು ಹೇಳಿಕೊಳ್ಳುತ್ತಾರೆ ವಕ್ಫ್ ನ ಎಂದು ಸಚಿವ ಪ್ರಲ್ಹಾದ ಜೋಶಿ ತೀವ್ರ ಕಳವಳ ವ್ಯಕ್ತಪಡಿಸಿದರು.






