೬೯ನೇ ಕನ್ನಡ ರಾಜ್ಯೋತ್ಸವವನ್ನು ನವದೆಹಲಿಯಲ್ಲಿ ಆಚರಿಸಿದ ಕೇಂದ್ರ ಸಚಿವ ವಿ. ಸೋಮಣ್ಣ.

ರಾಜ್ಯ ರೇಲ್ವೆ ಮತ್ತು ಜಲಶಕ್ತಿ ಸಚಿವರ ಕಚೇರಿ, ನವದೆಹಲಿ:

Font size:

ನವದೆಹಲಿಯ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ರೇಲ್ವೆ ಮತ್ತು ಜಲ ಶಕ್ತಿ ಸಚಿವ ವಿ. ಸೋಮಣ್ಣ ಭಾಗವಹಿಸಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ದ್ವಜಾರೋಹಣ ನಡೆಸಿದರು

೬೯ನೇ ಕನ್ನಡ ರಾಜ್ಯೋತ್ಸವವನ್ನು ನವದೆಹಲಿಯಲ್ಲಿ ಆಚರಿಸಿದ ಕೇಂದ್ರ ಸಚಿವ ವಿ. ಸೋಮಣ್ಣ.
ನವದೆಹಲಿಯ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ರೇಲ್ವೆ ಮತ್ತು ಜಲ ಶಕ್ತಿ ಸಚಿವ ವಿ. ಸೋಮಣ್ಣ ಭಾಗವಹಿಸಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ದ್ವಜಾರೋಹಣ ನಡೆಸಿದರು.

ಭಾರತ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸದ ನಿಮಿತ್ತ ದೆಹಲಿಯಲ್ಲಿ ತಂಗಿದ್ದೆ, ದೆಹಲಿಯಲ್ಲಿ ತಾಯಿ ಕನ್ನಡಾಂಭೆಯ ಪೂಜೆ ಮಾಡುವ ಮತ್ತು ಧ್ವಜಾರೋಹಣ ಮಾಡುವ ಸದಾವಕಾಶ ನನಗೆ ಲಭ್ಯವಾಗಿದೆಯೆಂದು ಕೇಂದ್ರ ಸಚಿವ ವಿ. ಸೋಮಣ್ಣ ಅತ್ಯಂತ ಹರ್ಷ ವ್ಯಕ್ತ ಪಡೆಸಿದ್ದಾರೆ.

ದೆಹಲಿ ಕರ್ನಾಟಕ ಸಂಘದಲ್ಲಿ ಕನ್ನಡಾಂಬೆಯ ಕಾರ್ಯಕ್ರಮವನ್ನು ಆಯೋಜಿಸಿದ್ದ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ಇನ್ನು ಮುಂದೆಯು ಕನ್ನಡ ಪರ ಹತ್ತಾರು ಕಾರ್ಯಕ್ರಮಗಳನ್ನು ವಿಶೇಷ ರೀತಿಯಿಂದ ಆಯೋಜಿಸುವಂತೆ ಸಲಹೆ ನೀಡಿದರು

ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಮಹನಿಯರ ವ್ಯಕ್ತಿತ್ವವನ್ನು ರಾಷ್ಟç ಮಟ್ಟದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಅವರ ಬಗ್ಗೆ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಕಟಣೆಗಳನ್ನು ಹೊರತರುವಂತೆ ಸಲಹೆ ನೀಡಿದರು. ರಾಷ್ಟç ರಾಜಧಾನಿ ದೆಹಲಿಯಲ್ಲಿ ಕನ್ನಡದ ಮತ್ತು ಕನ್ನಡ ಸಂಘಟನೆಗಳ ಅಸ್ತಿತ್ವವನ್ನು ಕಾಯ್ದುಕೊಳ್ಳಲು ದೆಹಲಿ ಕನ್ನಡಿಗರೆಲ್ಲರೂ ಸಮಾನ ಮನಸ್ಸಿನಿಂದ ಒಗಟ್ಟಾಗಿ ಕೆಲಸ ಮಾಡಲು ಕರೆ ನೀಡಿದರು.

ಈ ಸುಸಂದರ್ಭದಲ್ಲಿ ಸಮಸ್ತ ಕರ್ನಾಟಕದ ಜನತೆಗೆ ೬೯ನೇ ಕನ್ನಡ ರಾಜ್ಯೋತ್ಸವದ ಮತ್ತು ದೀಪಾವಳಿ ಹಬ್ಬದ ಶುಭಾಷಯವನ್ನು ಕೋರಿದರು.

ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದೆಹಲಿ ಕನ್ನಡ ಅಧ್ಯಕ್ಷರು ಸಂಘದ ಪದಾಧಿಕಾರಿಗಳು ಮತ್ತು ದೆಹಲಿ ಕನ್ನಡಿಗರು ಮತ್ತು ಮಾಧ್ಯಮ ಮಿತ್ರರು ಭಾಗಿಯಾಗಿದ್ದರು.

Prev Post ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದ್ವಜಾರೋಹಣ
Next Post ಜಾನಪದ ಕ್ರೀಡೆ ಕಂಬಳಕ್ಕೆ ಅಂತಿಮ ನಿಯಮಾವಳಿ ಸಿದ್ಧ , ಶಿಸ್ತು, ಸಮಯ ಪಾಲನೆಗೆ ವಿಶೇಷ ಆದ್ಯತೆ, ಹಲವು ಬದಲಾವಣೆಗೆ ಸಮಿತಿ ಒಪ್ಪಿಗೆ