ಶಂಕರ್‌ನಾಗ್ ಒಂದು ನೆನಪು ನವಂಬರ್ ೯ ಅವರ ಜನ್ಮ ದಿನ

BANGALORE:

Font size:

ಶಂಕರ್‌ನಾಗ್( (ನಾಗರಕಟ್ಟೆ ಶಂಕರ್) (9 ನವೆಂಬರ್ 1954 - 30 ಸೆಪ್ಟೆಂಬರ್ 1990)

ಶಂಕರ್‌ನಾಗ್ ಒಂದು ನೆನಪು ನವಂಬರ್ ೯ ಅವರ ಜನ್ಮ ದಿನ

ಶಂಕರ್‌ನಾಗ್( (ನಾಗರಕಟ್ಟೆ ಶಂಕರ್) (9 ನವೆಂಬರ್ 1954 - 30 ಸೆಪ್ಟೆಂಬರ್ 1990) ಕನ್ನಡ ಚಿತ್ರರಂಗದ ರಂಗಭೂಮಿ ಮತ್ತು ದೂರದರ್ಶನದಲ್ಲಿ ಕೆಲಸ ಮಾಡಿದ ಭಾರತೀಯ ನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. ಖ್ಯಾತ ಕಾದಂಬರಿಕಾರ ಆರ್. ಕೆ. ನಾರಾಯಣ್ ಅವರ ಕಿರು ಕಥೆಗಳ ಆಧಾರದ ದೂರದರ್ಶನದ ಮಾಲ್ಗುಡಿ ಡೇಸ್ ನಿರ್ದೇಶನ ಮತ್ತು ನಟಿಸಿದ್ದಾರೆ.

ಶಂಕರ್‌ನಾಗ್ ಉದ್ಘಾಟನಾ IFFI ಅತ್ಯುತ್ತಮ ನಟ ಪ್ರಶಸ್ತಿಯನ್ನು (ಪುರುಷ) ವಿಭಾಗದಲ್ಲಿ ಪಡೆದರು: ಸಿಲ್ವರ್ ಪೀಕಾಕ್ ಪ್ರಶಸ್ತಿಯನ್ನು ಅವರು 7ನೇ ರಾಷ್ಟ್ರೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಒಂದಾನೊಂದು ಕಾಲದಲ್ಲಿ ಚಿತ್ರಕ್ಕಾಗಿ ಪಡೆದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಕೂಡ ಆಗಿದ್ದಾರೆ. ಅವರು ಭಾರತೀಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ಮರಾಠಿ ಚಿತ್ರ 22 ಜೂನ್ 1897 ರ ಸಹ-ಬರಹಗಾರರು . ಅವರು ನಟ ಅನಂತ ನಾಗ್ ಅವರ ಕಿರಿಯ ಸಹೋದರರಾಗಿದ್ದಾರೆ

ಜನನ, ವೃತ್ತಿ ಜೀವನ

ನವೆಂಬರ್ ೯,೧೯೫೪ ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್‌ನಾಗ್ ಅವರು ಹುಟ್ಟಿದರು.ನಕ್ಷತ್ರ ನಾಮ'ಅವಿನಾಶ'.ಹೀಗೆಂದರೆ ವಿನಾಶವಿಲ್ಲದವನು ಎಂದರ್ಥ.ತಂದೆ ಹೊನ್ನಾವರದ ನಾಗರ ಕಟ್ಟೆಯ ಸದಾನಂದ, ಬಾಲ್ಯದಲ್ಲಿ ಪ್ರೀತಿಯಿಂದ ಮಗನನ್ನು ಕರೆಯುತಿದ್ದ ಹೆಸರು ಭವಾನಿ ಶಂಕರ್. ಶಂಕರ್‌ನಾಗ್ ತನ್ನ ವಿದ್ಯಾಭ್ಯಾಸದ ನಂತರ ಮುಂಬೈಗೆ ತೆರಳಿದರು.

ಮುಂಬೈನ ಮರಾಠಿ ಚಿತ್ರಮಂದಿರದ ಕಡೆಗೆ ಆಕರ್ಷಿತರಾದ ಶಂಕರ್‌ನಾಗ್ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾ ಮರಾಠಿ ರಂಗಭೂಮಿಯಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರು. ತಮ್ಮ ಗೆಳೆಯರೊಂದಿಗೆ ಅವರು ಚಿತ್ರಕತೆ ರಚಿಸಿದ ಮರಾಠಿ ಚಿತ್ರ ’೨೨ ಜೂನ್ ೧೮೯೭’ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿತ್ತು.
ಅಣ್ಣನಂತೆ ತಮ್ಮನು ಬ್ಯಾಂಕ್ ನೌಕರನಾದರೂ ಬ್ಯಾಂಕ್ ವೃತ್ತಿಯ ಜೊತೆಯಲ್ಲಿ ಸಂಗೀತ ಅಭಿರುಚಿ ಇದ್ದ ಕಾರಣ ತಬಲ , ಕೊಳಲು , ಹಾರ್ಮೋನಿಯಂ ಹೀಗೆ ಹಲವಾರು ವಾದ್ಯಗಳನ್ನು ನುಡಿಸಲು ಕಲಿತರು. ಮರಾಠಿ ನಾಟಕಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದರು. ಗಿರೀಶ್ ಕಾರ್ನಾಡರ 'ಒಂದಾನೊಂದು ಕಾಲದಲ್ಲಿ' ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಒಂದಾನೊಂದು ಕಾಲದಲ್ಲಿ ಚಿತ್ರದ ಅಭಿನಯಕ್ಕೆ ಸ್ಪರ್ಧಾರ್ಥಕ ಅಂತರರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆಯಿತು. ನಂತರದ ೧೨ ವರ್ಷಗಳಲ್ಲಿ ಕನ್ನಡದ ಸುಮಾರು ೯೨ ಚಿತ್ರಗಳಲ್ಲಿ ನಟಿಸಿದರು.ಶಂಕರ್‌ನಾಗ್ ಪ್ರಥಮ ಬಾರಿಗೆ ತ್ರಿಪಾತ್ರದಲ್ಲಿ ಅಭಿನಯಿಸಿದ ಚಿತ್ರ "ಗೆದ್ದ ಮಗ". ತಮ್ಮ ಸಹೋದರ ಅನಂತ ನಾಗ್ ಅವರೊಡನೆ "ಮಿಂಚಿನ ಓಟ", "ಜನ್ಮ ಜನ್ಮದ ಅನುಬಂಧ" ಮತ್ತು "ಗೀತಾ" ಚಿತ್ರಗಳನ್ನು ನಿರ್ಮಿಸಿದರು.

ಇದರಲ್ಲಿ "ಜನ್ಮ ಜನ್ಮದ ಅನುಬಂಧ" ಮತ್ತು "ಗೀತಾ" ಚಿತ್ರಗಳು ಇಳಯರಾಜ ಅವರ ಮಧುರ ಸಂಗೀತವನ್ನು ಹೊಂದಿ ಜನಮನ್ನಣೆ ಗಳಿಸಿವೆ. ನಾಟಕಗಳನ್ನು ಮತ್ತು ರಂಗಭೂಮಿಯನ್ನು ಗೌರವಿಸಿ ಶ್ರೀಮಂತಗೊಳಿಸಿದ ಶಂಕರ್ ಅವರು ಗಿರೀಶ ಕಾರ್ನಾಡ ರ "ಅಂಜು ಮಲ್ಲಿಗೆ", "ನೋಡಿ ಸ್ವಾಮಿ ನಾವಿರೋದು ಹೀಗೆ" ಮತ್ತು ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ.
ಭಾರತೀಯ ದೂರದರ್ಶನದಲ್ಲೇ ದಾಖಲೆ ನಿರ್ಮಿಸಿದ ಅತ್ಯಂತ ಜನಪ್ರಿಯವಾದ ಆರ್.ಕೆ. ನಾರಾಯಣ್ ಅವರ "ಮಾಲ್ಗುಡಿ ಡೇಸ್ ಅಥವಾ ಮಾಲ್ಗುಡಿಯ ದಿನಗಳು" ಮತ್ತು ಸ್ವಾಮಿ ಧಾರವಾಹಿಯನ್ನು ನಿರ್ದೇಶಿಸಿದ್ದಾರೆ. ಇಂದು ಸಹ ಇದುವರೆಗೆ ಎಲ್ಲ ತರಹದ ದೂರದರ್ಶನ ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚು ಜನ ಪ್ರಿಯತೆ ಗಳಿಸಿ ಪಂಡಿತರು, ಬುದ್ಧಿ ಜೀವಿಗಳಿಂದಲೂ ಮೆಚ್ಚುಗೆ ಗಳಿಸಿದ ಮಹೋನ್ನತ ಧಾರವಾಹಿ ‘ಮಾಲ್ಗುಡಿ ಡೇಸ್’.

ದಾಂಪತ್ಯ ನಾಟಕ ಬದುಕು
ಶಂಕರ್‌ನಾಗ್ ಅವರ ಪತ್ನಿ ಅರುಂಧತಿ ನಾಗ್.ಕಲಾವಿದೆಯಾಗಿದ್ದ ಅರುಂಧತಿ ಅವರನ್ನು ಇಷ್ಟ ಪಟ್ಟ ನಂತರ ಮದುವೆಯಾದರು. ಮಗಳು ಕಾವ್ಯ.
ಈ ದಂಪತಿಗಳು ‘ಸಂಕೇತ್’ ಎಂಬ ಹವ್ಯಾಸಿ ರಂಗ ತಂಡವನ್ನು ಕಟ್ಟಿ ‘ಅಂಜುಮಲ್ಲಿಗೆ’, ‘ಬ್ಯಾರಿಸ್ಟರ್’, ‘ಸಂಧ್ಯಾ ಛಾಯ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ಆಟ ಬೊಂಬಾಟ’, ‘ನಾಗಮಂಡಲ’ ಮುಂತಾದ ಸುಂದರ ನಾಟಕಗಳ ನಿರ್ಮಾಣ, ನಿರ್ವಹಣೆಗಳಲ್ಲಿ ಸಕ್ರಿಯ ಪಾತ್ರವಹಿಸಿದರು. ನಾಟಕರಂಗದಲ್ಲಿಯೇ ಪ್ರಾರಂಭದಿಂದ ಒಡನಾಟ ಬೆಳೆಸಿಕೊಂಡಿದ್ದ ಶಂಕರ್‌ನಾಗ್ ದಂಪತಿಗಳು ರಂಗಭೂಮಿಯ ಕಲಾವಿದರಿಗೆ ನೆರವಾಗುವಂತೆ, ನಾಟಕಗಳ ಪ್ರದರ್ಶನ ಸುಗಮವಾಗಿರುವಂತೆ ನಾಟಕಮಂದಿರವೊಂದನ್ನು ನಿರ್ಮಿಸಬೇಕೆಂದಿದ್ದರು. ಆ ಯೋಜನೆಯು ಕಾರ್ಯರೂಪಕ್ಕೆ ಬರುವ ಮುಂಚೆಯೇ ಶಂಕರ್‌ನಾಗ್ ದುರ್ಮರಣಕ್ಕೀಡಾದರು.

ಸೆಪ್ಟೆಂಬರ್ ೩೦, ೧೯೯೦ ರಂದು ದಾವಣಗೆರೆಯ ಹಳ್ಳಿಯೊಂದಾದ ಅನಗೋಡು ಹಳ್ಳಿಯಲ್ಲಿ ಜೋಕುರಸ್ವಾಮಿ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸಂದರ್ಭವದು ಬೆಂಗಳೂರಿನಿಂದ ತೆರಳುತ್ತಿದ್ದ ಶಂಕರ್‌ನಾಗ್ ಅವರು ಕಾರು ಅಪಘಾತದಿಂದ ತಮ್ಮ ಕೊನೆಯುಸಿರೆಳೆದರು.

ಪ್ರಶಸ್ತಿ, ಗೌರವ
ಇವರು ಹಲವಾರು ರಾಜ್ಯಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು ಉದಾಹರಣೆಗೆ ಮಿಂಚಿನ ಓಟ ಮತ್ತು ನೋಡಿ ಸ್ವಾಮಿ ನಾವಿರೋದೆ ಹೀಗೆ ಚಿತ್ರಗಳಿಗೆ ಕ್ರಮವಾಗಿ ದ್ವಿತೀಯ ಅತ್ಯುತ್ತಮ ಚಿತ್ರ (೧೯೭೯-೮೦ರಲ್ಲಿ) ಹಾಗೂ ತೃತೀಯ ಅತ್ಯುತ್ತಮ ಚಿತ್ರ (೧೯೮೩-೮೪ರಲ್ಲಿ) ಪ್ರಶಸ್ತಿಗಳನ್ನು ರಾಜ್ಯಸರ್ಕಾರದ ವತಿಯಿಂದ ತಮ್ಮದಾಗಿಸಿಕೊಂಡರು.

ಆಕ್ಸಿಡೆಂಟ್ ೧೯೮೪-೮೫ ರ ಸಾಲಿನ ಪ್ರಥಮ ಅತ್ಯುತ್ತಮ ಚಿತ್ರ ಎಂದು ರಾಜ್ಯ ಸರ್ಕಾರವಷ್ಟೇ ಅಲ್ಲದೆ ಪಾನನಿಷೇಧದ ಬಗೆಗಿನ ಉತ್ತಮ ಚಿತ್ರವೆಂದು ಪರಿಗಣಿತವಾಗಿ ರಜತ ಕಮಲ ಮತ್ತು ನಗದು ಬಹುಮಾನವನ್ನು ರಾಷ್ಟ್ರ ಪ್ರಶಸ್ತಿಯಾಗಿ ಪಡೆದರು.
ಕನ್ನಡ ಚಿತ್ರೋದ್ಯಮಕ್ಕೆ ಕಂಪ್ಯೂಟರ್ ಚಾಲಿತ ಶಬ್ದಗ್ರಹಣ ತಂತ್ರಜ್ಞಾನವನ್ನು ಕೊಡುಗೆಯಾಗಿತ್ತ ಸಂಕೇತ್ ಸ್ಟುಡಿಯೋ ಶಂಕರ್‌ನಾಗ್ ಅವರ ಮತ್ತೊಂದು ಕಲಾ ಕೊಡುಗೆಯಾಗಿತ್ತು.
ಸುಮಾರು ೯೪ ಚಿತ್ರಗಳಲ್ಲಿ ಅಭಿನಯಿಸಿದ ಶಂಕರ್‌ನಾಗ್, ನಟನೆ ಮತ್ತು ನಿರ್ದೇಶನ ಎರಡರಲ್ಲೂ ಸೈ ಎನ್ನಿಸಿಕೊಂಡವರು. ಅವರ ಚಿತ್ರಗಳನ್ನು ಪ್ರೇಕ್ಷಕರು ಮತ್ತು ವಿಮರ್ಶಕರು ಇಬ್ಬರೂ ಮೆಚ್ಚಿಕೊಂಡದ್ದು ಶಂಕರರ ಹೆಗ್ಗಳಿಕೆ.[೧೦]
ನಿಗೂಢ ರಹಸ್ಯ ಶಂಕರ್‌ನಾಗ್ ಅಭಿನಯದ ಕೊನೆಯ ಚಿತ್ರ.

ನಿರ್ದೇಶನದ ಚಿತ್ರಗಳು

ಒಂದು ಮುತ್ತಿನ ಕಥೆ
ಜನ್ಮ ಜನ್ಮದ ಅನುಬಂಧ
ಮಿಂಚಿನ ಓಟ
ಗೀತಾ
ನೋಡಿ ಸ್ವಾಮಿ ನಾವಿರೋದು ಹೀಗೆ
ಹೊಸ ತೀರ್ಪು
ಆಕ್ಸಿಡೆಂಟ್
ಒಂದು ಮುತ್ತಿನ ಕಥೆ
ಮಾಲ್ಗುಡಿ ಡೇಸ್ ಧಾರಾವಾಹಿ
ಲಾಲಚ್ (ಹಿಂದಿ)
ಶಂಕರ್‌ನಾಗ್ ಅವರ ಕನಸುಗಳು

ನಂದಿ ಬೆಟ್ಟಕ್ಕೆ ರೋಪ್ ವೇ, ಬೆಂಗಳೂರಿಗೆ ಮೆಟ್ರೋ ರೈಲು, ರಂಗಮಂದಿರ ಇವೆಲ್ಲಕ್ಕೂ ನಕ್ಷೆ ತಯಾರಿಸಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಸರ್ಕಾರದ ಮುಂದೆ ಇಟ್ಟಿದ್ದರು ಶಂಕರ್‌ನಾಗ್.

ಚಿತ್ರಗಳ ಪಟ್ಟಿ

1) ಒಂದಾನೊಂದು ಕಾಲದಲ್ಲಿ - ೧೯೭೮
2) ಸೀತಾ ರಾಮು - ೧೯೭೯
3) ಐ ಲವ್ ಯೂ - ೧೯೭೯
4) ಪ್ರೀತಿ ಮಾಡು ತಮಾಷೆ ನೋಡು - ೧೯೭೯
5) ಮಧುಚಂದ್ರ - ೧೯೭೯
6) ಮಿಂಚಿನ ಓಟ - ೧೯೮೦
7) ಆಟೋರಾಜ - ೧೯೮೦
8) ಮೂಗನ ಸೇಡು - ೧೯೮೦
9) ಹದ್ದಿನ ಕಣ್ಣು - ೧೯೮೦
10) ಒಂದು ಹೆಣ್ಣು ಆರು ಕಣ್ಣು - ೧೯೮೦
11) ಆರದ ಗಾಯ - ೧೯೮೦
12) ರುಸ್ತುಮ್ ಜೋಡಿ - ೧೯೮೦
13) ಜನ್ಮ ಜನ್ಮದ ಅನುಬಂಧ - ೧೯೮೦
14) ತಾಯಿಯ ಮಡಿಲಲ್ಲಿ - ೧೯೮೧
15) ಕುಲಪುತ್ರ - ೧೯೮೧
16) ಹಣಬಲವೋ ಜನಬಲವೋ - ೧೯೮೧
17) ಗೀತಾ - ೧೯೮೧
18) ದೇವರ ಆಟ - ೧೯೮೧
19) ಭರ್ಜರಿ ಬೇಟೆ - ೧೯೮೧
20) ಮುನಿಯನ ಮಾದರಿ - ೧೯೮೧
21) ಜೀವಕ್ಕೆ ಜೀವ - ೧೯೮೧
22) ಅರ್ಚನ - ೧೯೮೨
23) ಬೆಂಕಿ ಚೆಂಡು - ೧೯೮೨
24) ಕಾರ್ಮಿಕ ಕಳ್ಳನಲ್ಲ - ೧೯೮೨
25) ನ್ಯಾಯ ಎಲ್ಲಿದೆ? - ೧೯೮೨
26) ಧರ್ಮ ದಾರಿ ತಪ್ಪಿತು - ೧೯೮೨
27) ಗೆದ್ದಮಗ - ೧೯೮೩
28) ನ್ಯಾಯ ಗೆದ್ದಿತು - ೧೯೮೩
29) ಚಂಡಿ ಚಾಮುಂಡಿ - ೧೯೮೩
30) ಕೆರಳಿದ ಹೆಣ್ಣು - ೧೯೮೩
31) ಸ್ವರ್ಗದಲ್ಲಿ ಮದುವೆ - ೧೯೮೩
32) ಆಕ್ರೋಶ - ೧೯೮೩
33) ನೋಡಿ ಸ್ವಾಮಿ ನಾವಿರೋದು ಹೀಗೆ - ೧೯೮೩
34) ನಗಬೇಕಮ್ಮ ನಗಬೇಕು - ೧೯೮೪
35) ರಕ್ತ ತಿಲಕ - ೧೯೮೪
36) ತಾಳಿಯ ಭಾಗ್ಯ - ೧೯೮೪
37) ಬೆಂಕಿ ಬಿರುಗಾಳಿ - ೧೯೮೪
38) ಕಾಳಿಂಗ ಸರ್ಪ - ೧೯೮೪
39) ಇಂದಿನ ಭಾರತ - ೧೯೮೪
40) ಬೆದರು ಬೊಂಬೆ - ೧೯೮೪
41) ಶಪಥ - ೧೯೮೪
42) ಗಂಡು ಭೇರುಂಡ - ೧೯೮೪
43) ಪವಿತ್ರ ಪ್ರೇಮ - ೧೯೮೪
44) ಆಕ್ಸಿಡೆಂಟ್ - ೧೯೮೪
45) ಆಶಾಕಿರಣ - ೧೯೮೪
46) ಮಕ್ಕಳಿರಲವ್ವ ಮನೆತುಂಬ - ೧೯೮೪
47) ಅಪೂರ್ವ ಸಂಗಮ - ೧೯೮೪
48) ತಾಯಿ ಕನಸು - ೧೯೮೫
49) ಪರಮೇಶಿ ಪ್ರೇಮ ಪ್ರಸಂಗ - ೧೯೮೫
50) ಮಾನವ ದಾನವ - ೧೯೮೫
51) ಕಿಲಾಡಿ ಅಳಿಯ - ೧೯೮೫
52) ವಜ್ರಮುಷ್ಟಿ - ೧೯೮೫
53) ಕರಿನಾಗ - ೧೯೮೫
54) ತಾಯಿಯೆ ನನ್ನ ದೇವರು - ೧೯೮೬
55) ನಾ ನಿನ್ನ ಪ್ರೀತಿಸುವೆ - ೧೯೮೬
56) ಅಗ್ನಿ ಪರೀಕ್ಷೆ - ೧೯೮೬
57) ರಸ್ತೆ ರಾಜ - ೧೯೮೬
58) ಸಂಸಾರದ ಗುಟ್ಟು - ೧೯೮೬
59) ತಾಯಿ - ೧೯೮೭
60) ಈ ಬಂಧ ಅನುಬಂಧ - ೧೯೮೭
61) ಹುಲಿ ಹೆಬ್ಬುಲಿ - ೧೯೮೭
62) ಲಾರಿ ಡ್ರೈವರ್ - ೧೯೮೭
63) ಅಂತಿಮ ಘಟ್ಟ - ೧೯೮೭
64) ದಿಗ್ವಿಜಯ - ೧೯೮೭
65) ಶಕ್ತಿ - ೧೯೮೮
66) ಸಾಂಗ್ಲಿಯಾನ - ೧೯೮೮
67) ಧರ್ಮಾತ್ಮ - ೧೯೮೮
68) ಮಿಥಿಲೆಯ ಸೀತೆಯರು - ೧೯೮೮
69) ತರ್ಕ - ೧೯೮೯
70) ಮಹಾಯುದ್ಧ - ೧೯೮೯
71) ಅಂತಿಂಥ ಗಂಡು ನಾನಲ್ಲ - ೧೯೮೯
72) ವಾಲ್ ಪೋಸ್ಟರ್ - ೧೯೮೯
73) ಸಿ.ಬಿ.ಐ ಶಂಕರ್ - ೧೯೮೯
74) ಇದು ಸಾಧ್ಯ - ೧೯೮೯
75) ರಾಜ ಸಿಂಹ - ೧೯೮೯
76) ಜಯಭೇರಿ - ೧೯೮೯
77) ನರಸಿಂಹ - ೧೯೮೯
78) ಎಸ್.ಪಿ.ಸಾಂಗ್ಲಿಯಾನ ಭಾಗ-೨ - ೧೯೯೦
79) ರಾಮರಾಜ್ಯದಲ್ಲಿ ರಾಕ್ಷಸರು - ೧೯೯೦
80) ಮಹೇಶ್ವರ - ೧೯೯೦
81) ತ್ರೀನೇತ್ರ - ೧೯೯೦
82) ಆವೇಶ - ೧೯೯೦
83) ಹೊಸ ಜೀವನ - ೧೯೯೦
84) ಹಳ್ಳಿಯ ಸುರಾಸುರರು - ೧೯೯೦
85) ಭಲೇ ಚತುರ - ೧೯೯೦
86) ಆಟ ಬೊಂಬಾಟ - ೧೯೯೦
87) ನಿಗೂಢ ರಹಸ್ಯ - ೧೯೯೦
88) ನಕ್ಕಳಾ ರಾಜಕುಮಾರಿ - ೧೯೯೧
89) ಪುಂಡಪ್ರಚಂಡ - ೧೯೯೧
90) ಸುಂದರಕಾಂಡ - ೧೯೯೧
91) ನಾಗಿಣಿ - ೧೯೯೧
92) ಪ್ರಾಣ ಸ್ನೇಹಿತ - ೧೯೯೩
93) ಸರ್ವಸಾಕ್ಷಿ (ಮರಾಠಿ) - ೧೯೭೮
94) ಉತ್ಸವ್ (ಹಿಂದಿ) - ೧೯೮೪

Prev Post ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಮಕ್ಕಳ ಪ್ರೋತ್ಸಾಹ ಧನ 1 ರಿಂದ 2 ಲಕ್ಷಕ್ಕೆ ಹೆಚ್ಚಳ : ಸಚಿವ ಡಾ ಹೆಚ್ ಸಿ ಮಹದೇವಪ್ಪ
Next Post ನಮ್ಮ ವಂಶಕ್ಕೆ ಕಣ್ಣೀರು ಬಳುವಳಿಯಾಗಿ ಬಂದಿದೆ ಎಂದ ದೇವೇಗೌಡರು