ಮನೆದೇವರಿಗೆ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ ದಂಪತಿ

Hassan:

Font size:

ಉಪ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ನಿಖಿಲ್

ಹಾಸನ: ಇಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ಮನೆ ದೇವರು ಹಾಸನ ಜಿಲ್ಲೆಯ ಯಲಿಯೂರು ಗ್ರಾಮದಲ್ಲಿರುವ ದೇವಿರಮ್ಮ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ದೇವಿರಮ್ಮ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ,ಪ್ರಾರ್ಥಿಸಿದರು.

ನಂತರ ದೇವೇಗೌಡರ ಹುಟ್ಟೂರು ಹರದನಹಳ್ಳಿಯಲ್ಲಿರುವ ಶ್ರೀ ದೇವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.ಹಾಗೆಯೇ ಜಿಲ್ಲೆಯ ಹಳೇಕೋಟೆ ಗ್ರಾಮ ಶ್ರೀ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ರಂಗನಾಥಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು

000

ಹಾಸನ : ಚನ್ನಪಟ್ಟಣ ಚುನಾವಣಾ ಫಲಿತಾಂಶ ವಿಚಾರವಾಗಿ ಯಾರೂ ಬೆಟ್ಟಿಂಗ್ ಕಟ್ಟದಂತೆ ಎನ್​ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಸನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮನವಿ ಮಾಡಿದ್ದಾರೆ.

ಯಾರೂ ಕೂಡ ಬೆಟ್ಟಿಂಗ್ ಕಟ್ಟಿ ಆರ್ಥಿಕ ನಷ್ಟ ಅನುಭವಿಸಬೇಡಿ. ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿ ಆರಾಮಾಗಿರಿ. ಬೆಟ್ಟಿಂಗ್​ನಿಂದ ಎಷ್ಟೋ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಚುನಾವಣೆಯ ಫಲಿತಾಂಶ ವಿಚಾರವಾಗಿ ಯಾರೂ ಬೆಟ್ಟಿಂಗ್ ಕಟ್ಟಬೇಡಿ. ಫೋನ್ ಸ್ವಿಚ್ ಆಫ್ ಮಾಡಿ ಮಲಗಿಬಿಡಿ, ಬೆಟ್ಟಿಂಗ್ ಕಟ್ಟಿ ಆರ್ಥಿಕ ನಷ್ಟ ಅನುಭವಿಸಬೇಡಿ. ಮಾಧ್ಯಮದ ಮೂಲಕ ನಿಖಿಲ್ ಕುಮಾರಸ್ವಾಮಿ ಅವರು ಮನವಿ ಮಾಡಿದರು.

ಎಲ್ಲರ ಬೆಂಬಲ ಸಿಕ್ಕಿದ್ದರಿಂದ ಗೆಲುವಿನ ವಿಶ್ವಾಸ ಮೂಡಿದೆ. ನಿಮ್ಮಲ್ಲಿ ಮನವಿ ಮಾಡುವೆ. ಎಲ್ಲದಕ್ಕೂ ದೇವರಿದ್ದಾನೆ. ಆರಾಮಾಗಿ ಮಲಗಿ. ಜನತೆಯ ಮತ್ತು ದೇವರ ಆಶೀರ್ವಾದದಿಂದ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.

ಈ ಉಪಚುನಾವಣೆಯಲ್ಲಿ ಮಾಜಿ ಸಚಿವರು, ಶಾಸಕರು, ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಸಾಕಷ್ಟು ಜನ ನನ್ನ ಚುನಾವಣೆಗಾಗಿ ದುಡಿದಿದ್ದಾರೆ. ಜೆಡಿಎಸ್ ಪಕ್ಷದ ಇತಿಹಾಸದಲ್ಲಿ ಇಂತಹ ಚುನಾವಣೆ ನಡೆದಿರಲಿಲ್ಲ. ಇದು ಇತಿಹಾಸದ ಪುಟಗಳಲ್ಲಿ ಉಳಿಯುವ ಚುನಾವಣೆ ಎಂದರು

ಗೆಲುವಿನ ವಿಶ್ವಾಸವಿದೆ

ಯುವಕರು, ಹಿರಿಯರು ಸೇರಿದಂತೆ ಎಲ್ಲರೂ ಉತ್ಸಾಹದಿಂದ ನನ್ನ ಜೊತೆ ಹೆಜ್ಜೆ ಹಾಕಿದ್ದಾರೆ. ಹಾಗಾಗಿ ನನ್ನ ಹೃದಯದಲ್ಲಿ ಸಂಪೂರ್ಣ ಗೆಲುವಿನ ವಿಶ್ವಾಸವಿದೆ. ದೇವೇಗೌಡರು, ಕುಮಾರಣ್ಣ 1500 ಕೋಟಿ ಅನುದಾನ ತಂದು ಚನ್ನಪಟ್ಟಣದ ಅಭಿವೃದ್ಧಿ ಮಾಡಿದ್ದಾರೆ. ಕ್ಷೇತ್ರದ ಜನರು ಆಶೀರ್ವಾದ ಮಾಡಿದರೆ ಮುಂದಿನ ದಿನಗಳಲ್ಲಿ ಯುವ ಸಮುದಾಯಕ್ಕೆ ಆದ್ಯತೆ ಕೊಡುತ್ತೇನೆ. ಉದ್ಯೋಗ ಸೃಷ್ಟಿ ಮಾಡಲು ದೃಢ ಸಂಕಲ್ಪ ಮಾಡಿದ್ದೇನೆ ಎಂದು ತಿಳಿಸಿದರು

ಕುಮಾರಣ್ಣ ಲಾಟರಿ‌ ನಿಷೇಧ ಮಾಡಿದ್ರು‌ ಎಂದು ಮಾತಾಡ್ತೀವಿ,ಆದರೆ ಆನ್‌ಲೈನ್ ಗೇಮ್ ಗಳಿಗೆ ಬಹಳ ಜನ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು, ಇದು ಸಮಾಜವನ್ನ ಒಡೆಯುವ ಕೆಲಸ ಇಂತಹ ಕೃತ್ಯಗಳಿಗೆ ಯಾರೂ ಕೂಡ ಕೈ ಹಾಕಬೇಡಿ ಎಂದು ನಿಖಿಲ್ ಅವರು ಮನವಿ ಮಾಡಿದರು.

ದಾಖಲೆಗಳು ರಾಜ್ಯದ‌‌ ಜನತೆ ಮುಂದೆ ಇಡಲಿ

ಆಪರೇಷನ್ ಕಮಲ ವಿಚಾರಕ್ಕೆ ಮಾತನಾಡಿದ ಅವರು, ಇದು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಆಗಬಾರದು. ಆ ರೀತಿ‌ ದಾಖಲೆಗಳು ಇದೆ ಅನ್ನೋದಾದ್ರೆ ರಾಜ್ಯದ‌‌ ಜನತೆ ಮುಂದೆ ಇಡಲಿ. ಇವೆಲ್ಲ ಚರ್ಚೆಗೆ ಗ್ರಾಸವಾಗುವ ವಿಚಾರ ಆಗಬಾರದು ಎಂದರು.

ಇವತ್ತು136 ಶಾಸಕರನ್ನ ಕಾಂಗ್ರೆಸ್ ನವರು ಇಟ್ಟುಕೊಂಡಿದ್ದಾರೆ. ಸರ್ಕಾರ ರಚನೆ‌ ಮಾಡೋದಕ್ಕಿಂತ‌ ಹೆಚ್ಚಿನ ಸ್ಥಾನವನ್ನ ಜನ ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಹಗರಣಗಳ ವಿರುದ್ಧ ನಾವುಕೂಡ ಜಾಗೃತಿ‌ ಮೂಡಿಸುವ ಪಾದಯಾತ್ರೆ ಮಾಡಿದ್ದೇವೆ ಎಂದರು.

ಕಳೆದ‌ ಲೋಕಸಭಾ ಚುನಾವಣೆ ವೇಳೆ ನಾಲ್ಕು ತಿಂಗಳು ಗ್ಯಾರಂಟಿ ತಡೆಹಿಡಿದಿದ್ದರು. ಈಗ ಚುನಾವಣೆ ‌ಬರ್ತಿದ್ದಂಗೆ‌ ಗೃಹಲಕ್ಷ್ಮಿ ಯೋಜನೆಯನ್ನ ನಾಲ್ಕೂ ತಿಂಗಳ ಹಣ ಒಟ್ಟಿಗೆ ಹಾಕ್ತೀವಿ ಅಂತಾರೆ. ಎಷ್ಟರ ಮಟ್ಟಿಗೆ ಜನಗಳಿಗೆ ಗ್ಯಾರೆಂಟಿ ರೀಚ್ ಆಗ್ತಿದೆ ಅನ್ನುವುದಕ್ಕೆ ಸರ್ಕಾರ ಉತ್ತರ ಕೊಡಬೇಕು ಎಂದು ಪ್ರಶ್ನಿಸಿದರು.

ಸರ್ಕಾರ ಉರುಳಿಸೋದಗಾಲಿ ಅಥವಾ ದುಡ್ಡು ಕೊಟ್ಟು ಎಂ‌ಎಲ್‌ಗಳನ್ನ ಕೊಂಡುಕೊಳ್ಳುವ ಪ್ರಶ್ನೆಯೇ ಇಲ್ಲ. ಇಂದು ರಾಜ್ಯ ಸರ್ಕಾರಕ್ಕೆ‌ ಜನ ಏನು ಆಶೀರ್ವಾದ ಮಾಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ‌ ಜನರೇ ತಿರಸ್ಕಾರ ಮಾಡುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು,ಚುನಾವಣೆ ಬಳಿಕ ಕಳೆದ ವರ್ಷ ಯಲಿಯೂರಮ್ಮನ ದೇವಾಲಯಕ್ಕೆ ಭೇಟಿ ನೀಡಿದ್ದೆ.ಇಂದು ದೇವೇಗೌಡರು ಮತ್ತು ರೇವಣ್ಣ ಸಾಹೇಬ್ರು ಕಟ್ಟಿಸಿರೋ ದೇವೇಶ್ವರ ದೇವಾಲಯಕ್ಕೆ ಬಂದು ದರ್ಶನ ಮಾಡಿದ್ದೇನೆ.ನನ್ನ ಪತ್ನಿ ಮನೆದೇವರ ದರ್ಶನ ಮಾಡಬೇಕೆಂದುಕೊಂಡಿದ್ದರು.
ಅದೇ‌ ರೀತಿ‌ ಇಂದು ಕುಟುಂಬ ಸಮೇತ ಬಂದು ದರ್ಶನ ಮಾಡಿದ್ದೇವೆ ಎಂದು ತಿಳಿಸಿದರು.

ನನ್ನ ಉಪ ಚುನಾವಣೆ ಅನಿರೀಕ್ಷಿತ‌ ಬೆಳವಣಿಗೆ.ಎಲ್ಲವೂ ಕೂಡ ಜಗಜ್ಜಾಹಿರ, ತೆರೆದ ಪುಸ್ತಕ ಎರಡು ಪಕ್ಷದ ವರಿಷ್ಠರ ಆದೇಶದಂತೆ‌ ಈ ಉಪ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದೇನೆ.ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬಂದು ಸ್ವಯಂ ಪ್ರೇರಿತರಾಗಿ ನಿಖಿಲ್ ಕುಮಾರಸ್ವಾಮಿ ಗೆಲ್ಲಬೇಕು ಎಂದು ಹಗಲಿರುಳು ಶ್ರಮಿಸಿದ್ದಾರೆ. ಚುನಾವಣೆ ‌ಸಂದರ್ಭ ಅವರೆಲ್ಲರನ್ನೂ ಕಾಣಲು ಆಗಿಲ್ಲ, ಅವರೆಲ್ಲರನ್ನೂ ಎಲ್ಲಾ ಕಾಲದಲ್ಲೂ ಸ್ಮರಿಸಿಕೊಳ್ಳುತ್ತೇನೆ ಎಂದರು.

ಗೆಲ್ಲುತ್ತೇನೆಂದು ಆತ್ಮ ವಿಶ್ವಾಸವಿದೆ

ರೈತ ನಾಯಕ ಬಿ.ಎಸ್ ಯಡಿಯೂರಪ್ಪನವರೇ ಕರೆದು ನನ್ನ ಸ್ಪರ್ಧೆ ಬಗ್ಗೆ ತೀರ್ಮಾನ ಮಾಡಿದ್ರು, ಎಲ್ಲಾ ನಾಯಕರೂ ಈ ಉಪ ಚುನಾವಣೆ ‌ಬಗ್ಗೆ ತೀರ್ಮಾನ ತೆಗೆದುಕೊಂಡರು. ಎಲ್ಲಾ ಗ್ರಾಮದ‌ ಅಣ್ಣ, ತಮ್ಮಂದಿರೂ, ತಾಯಂದಿರೂ ನಿಖಿಲ್ ಗೆಲುವಿಗೆ ಹರಸಿದ್ದಾರೆ. ಮನೆದೇವರ ಆವರಣದಲ್ಲಿ ಕುಳಿತು ಹೇಳುತ್ತಿದ್ದೇನೆ ಈ ಉಪ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ನ

ಯುವ ಸಮುದಾಯಕ್ಕೆ ನನ್ನದೇ ಆದ ಕೂಡುಗೆ ನೀಡುತ್ತೇನೆ

ಚನ್ನಪಟ್ಟಣದ ಕ್ಷೇತ್ರದ ಅಭಿವೃದ್ಧಿಗೆ
ಕುಮಾರಣ್ಣ ಅವರು ಸಾವಿರಾರು ಕೋಟಿ‌ ಅನುದಾನ ತಂದು ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ನಾನೂ ಕೂಡ ಕ್ಷೇತ್ರದ ಯುವ ಸಮುದಾಯಕ್ಕೆ ನನ್ನದೇ ಆದ ಕೊಡುಗೆ ನೀಡುತ್ತೇನೆ.
ಯುವಕರಪರವಾಗಿ ಕೆಲಸ ಮಾಡುತ್ತೇನೆ ಕುಮಾರಸ್ವಾಮಿ ಅವರು ‌ಕೇಂದ್ರ ಕೈಗಾರಿಕಾ‌ ಮಂತ್ರಿಗಳಾಗಿದ್ದಾರೆ.ಅವರ ಜೊತೆಗೂಡಿ ಕೈಗಾರಿಕೆಗಳನ್ನ ತಂದು ಮಹಿಳೆಯರಿಗೆ. ಯುವ ಸಮುದಾಯಕ್ಕೆ ಕೆಲಸ ಕೊಡಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.

Prev Post ಬಿಜೆಪಿ 100 ಕೋಟಿ ಆಫರ್; ದಾಖಲೆ ಬಿಡುಗಡೆ ಮಾಡಿ ಮೊದಲು ಕಾಂಗ್ರೆಸ್ಸಿಗರ ಆರೋಪಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಖಡಕ್ ಸವಾಲು
Next Post ಶ್ರೀ ಕನಕದಾಸರ 537 ನೇ ಜಯಂತಿ ಕಾರ್ಯಕ್ರಮವನ್ನು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ಎಸ್.ಸುರೇಶ(ಬೈರತಿ) ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು