Font size:
ನಲ್ಮೆಯ ನಂದಿನಿ" ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ
ಬೆಂಗಳೂರಿನ ಹೆಬ್ಬಾಳದಲ್ಲಿರುವ ಹೈನು ವಿಜ್ಞಾನ ಮಹಾ ವಿದ್ಯಾಲಯದ, ಕನ್ನಡ ಸಭಾಂಗಣದಲ್ಲಿ ಕೆ.ಎಂ.ಎಫ್ ಅಧಿಕಾರಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ "ನಲ್ಮೆಯ ನಂದಿನಿ" ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಸಹಕಾರ ಸಚಿವ ಕೆ ಎನ್ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಚಲನಚಿತ್ರ ನಿರ್ಮಾಪಕರಾದ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ರವರು, ಕೆ.ಎಂ.ಎಫ್ ಅಧಿಕಾರಿಗಳ ಸಂಘದ ಗೌರವಾಧ್ಯಕ್ಷರಾದ ರವಿಕೃಷ್ಣ ರೆಡ್ಡಿ ರವರು, ವ್ಯವಸ್ಥಾಪಕ ನಿರ್ದೇಶಕರಾದ ಜಗದೀಶ್ ರವರು, ಕೆ.ಸಿ.ವೀರಣ್ಣರವರು, ಗೋವಿಂದೇಗೌಡರವರು, ಕೃಷ್ಣಪ್ಪರವರು, ಶ್ರೀಮತಿ ಪದ್ಮಾವತಿಯವರು ಉಪಸ್ಥಿತರಿದ್ದರು






