ಈ ಸಂದರ್ಭದಲ್ಲಿ ಗ್ರಾಮದಲ್ಲಿದ್ದ ಹಲವು ಪುರಾತನ ಪ್ರಾಚ್ಯವಸ್ತುಗಳನ್ನು ಸಂಗ್ರಹಣೆಗೆ ಚಾಲನೆ ನೀಡಲಾಯಿತು.
ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಶ್ರೀ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಸಿದ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮದಲ್ಲಿ ಸಚಿವರಾದ ಕೆ. ಎಚ್. ಪಾಟೀಲ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮದಲ್ಲಿದ್ದ ಹಲವು ಪುರಾತನ ಪ್ರಾಚ್ಯವಸ್ತುಗಳನ್ನು ಸಂಗ್ರಹಣೆಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಸಿ. ಸಿ. ಪಾಟೀಲ್, ಶ್ರೀ ಜಿ. ಎಸ್. ಪಾಟೀಲ್, ಶ್ರೀ ಕೆಂಚಪ್ಪ ಈ. ಪೂಜಾರ, ಶ್ರೀಮತಿ ಪುಷ್ಪ ಎಸ್. ಪಾಟೀಲ್, ಶ್ರೀ ಸಲ್ಮಾ ಫಾಹಿಮ್, ಶ್ರೀ ರಮಣದೀಪ್ ಚೌಧರಿ, ಶ್ರೀ ಕೆ. ವಿ. ರಾಜೇಂದ್ರ, ಶ್ರೀ ಗೋವಿಂದರೆಡ್ಡಿ, ಶ್ರೀ ಭರತ್ ಎಸ್., ಶ್ರೀ ಬಿ. ಎನ್. ನೇಮಗೌಡ, ಶ್ರೀ ದೇವರಾಜು ವಿ., ಡಾ. ಡಿ. ಸ್ಮಿತಾ, ಡಾ. ಶರಣ್ ಗೋಗೇರಿ, ಶ್ರೀ ರಾಜಕುಮಾರ ಎಸ್. ಭಜಂತ್ರಿ, ಶ್ರೀ ಅ. ಧ. ಕಟ್ಟಿಮನಿ, ಶ್ರೀ ಕೊಟ್ರೇಶ್ವರ ವಿಭೂತಿ, ಶ್ರೀ ಪ್ರದೀಪ ಆಲೂರ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು
2.ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನಡೆದ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮದ ಪ್ರಯುಕ್ತ ಲಕ್ಕುಂಡಿಯ ಗ್ರಾಮದ ಮನೆ ಮನೆಗೆ ತೆರಳಿ ಪ್ರಾಚ್ಯಾವಶೇಷ ವಸ್ತುಗಳನ್ನು ಸಂಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ವಿವಿಧೆಡೆ ದೊರೆತ, ದೇವರ ಮೂರ್ತಿಗಳು ,ಹಳೆಯ ಕಾಲದ ನಾಣ್ಯಗಳು, ಬಂಗಾರ ಹಾಗೂ ಮುತ್ತಿನ ಆಭರಣಗಳು ಮತ್ತು ದೇವಾಲಯದ ಕಂಬ ಬಾಗಿಲುಗಳನ್ನು ಪಲ್ಲಕ್ಕಿಯಲ್ಲಿ ಇಟ್ಟು ತರಲಾಯಿತು.






