Font size:
ಮುಂದಿನ ತಿಂಗಳು ಡಿಸೆಂಬರ್ ೫ ರಂದು ನಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಸನದ ಸ್ವಾಭಿಮಾನಿ ಸಮಾವೇಶಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಪೂರ್ವಸಿದ್ಧತೆಯ ಸಭೆ ಸಹಕಾರ ಸಚಿವರಾದ ಕೆ ಎನ್ ರಾಜಣ್ಣನವರ ನೇತೃತ್ವದಲ್ಲಿ ನಡೆಯಿತು.
ಮುಂದಿನ ತಿಂಗಳು ಡಿಸೆಂಬರ್ ೫ ರಂದು ನಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಸನದ ಸ್ವಾಭಿಮಾನಿ ಸಮಾವೇಶಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಪೂರ್ವಸಿದ್ಧತೆಯ ಸಭೆ ಸಹಕಾರ ಸಚಿವರಾದ ಕೆ ಎನ್ ರಾಜಣ್ಣನವರ ನೇತೃತ್ವದಲ್ಲಿ ನಡೆಯಿತು.
ಈ ಸಭೆಯಲ್ಲಿ ಸಚಿವರುಗಳಾದ ಹೆಚ್.ಸಿ.ಮಹದೇವಪ್ಪನವರು, ವೆಂಕಟೇಶ್ ರವರು ಹಾಗೂ ಶಾಸಕರಾದ ಯತೀಂದ್ರ ಸಿದ್ದರಾಮಯ್ಯನವರ ಜೊತೆ ಸ್ಥಳ ಪರಿಶೀಲನೆ ನೆಡೆಸಿ ಕಾರ್ಯಕ್ರಮದ್ದಲಿ ಭಾಗವಹಿಸಿದ್ದರು.
ಸಮಾವೇಶಕ್ಕೆ ಆಗಮಿಸಲಿರುವ ಅಭಿಮಾನಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಮೂಲ ಸೌಕರ್ಯ ಕಲ್ಪಿಸುವುದು ಹಾಗೂ ಇತರೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಶ್ರೇಯಸ್.ಎಂ.ಪಟೇಲ್ ರವರು, ಶಾಸಕರಾದ ಶಿವಲಿಂಗೇಗೌಡರವರು, ಮಳವಳ್ಳಿ ಶಿವಣ್ಣನವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷಣ್ ರವರು ಸೇರಿದಂತೆ ಮಾಜಿ ಶಾಸಕರುಗಳು, ಮುಖಂಡರುಗಳು ಹಾಜರಿದ್ದರು.