ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯ ಮಂತ್ರಿ ಡಿ ಕೆ ಶಿಕುಮಾರ್ ಅವರು ಕೆಂಗಲ್ ಹನುಮಂತಯ್ಯ ಅವರ ಪುಣ್ಯ ಸ್ಮರಣೆಯ ಪ್ರಯುಕ್ತ ಅವರ ಪ್ರತಿಮೆಗೆ ಮಾಪಾರ್ಪಣೆ ಮಾಡಿದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯ ಮಂತ್ರಿ ಡಿ ಕೆ ಶಿಕುಮಾರ್ ಅವರು ಕೆಂಗಲ್ ಹನುಮಂತಯ್ಯ ಅವರ ಪುಣ್ಯ ಸ್ಮರಣೆಯ ಪ್ರಯುಕ್ತ ಅವರ ಪ್ರತಿಮೆಗೆ ಮಾಪಾರ್ಪಣೆ ಮಾಡಿದರು.
ಕೆಂಗಲ್ ಹನುಮಂತಯ್ಯ
ಮೈಸೂರು ರಾಜ್ಯದ ೨ನೆಯ ಮುಖ್ಯ ಮಂತ್ರಿ
೩೦ ಮಾರ್ಚ್ ೧೯೫೨ – ೧೯ ಆಗಸ್ಟ್ ೧೯೫೬
ಕೆಂಗಲ್ ಹನುಮಂತಯ್ಯರವರು ೧೯೫೨ ರಿಂದ ೧೯೫೬ ರವರೆಗೆ ಈಗಿನ ಕರ್ನಾಟಕ ರಾಜ್ಯದ ಹಿಂದಿನ ಸ್ವರೂಪವಾದ ಹಳೇ ಮೈಸೂರು ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದರು.ಅವರ ದೂರದೃಷ್ಟಿ ಮತ್ತು ವಿಧಾನಸೌಧದ ನಿರ್ಮಾಣಕ್ಕಾಗಿ ಅವರನ್ನು ನೆನೆಯಲಾಗುತ್ತದೆ.
ಜನನ, ವಿದ್ಯಾಭ್ಯಾಸ, ಹಾಗೂ ವೃತ್ತಿ ಜೀವನ
ಸ್ವತಂತ್ರ ಭಾರತದ ಪ್ರಮುಖ ರಾಜಕೀಯ ಮುತ್ಸದ್ದಿಯೂ , ಧೀಮಂತ ರಾಜಕಾರಣಿಯೂ ಆದ ಶ್ರೀ ಕೆಂಗಲ್ ಹನುಮಂತಯ್ಯನವರು ಆಗಿನ ಬೆಂಗಳೂರು ಜಿಲ್ಲೆಯ(ಈಗಿನ ರಾಮನಗರ), ರಾಮನಗರ ತಾಲೂಕಿನ ಲಕ್ಕಪ್ಪನಪಳ್ಳಿಯಲ್ಲಿ ೧೯೦೮ರಲ್ಲಿ ಒಕ್ಕಲಿಗ ಕುಟುಂಬವೊಂದರಲ್ಲಿ ಹುಟ್ಟಿದರು. ೧೯೩೦ ರಲ್ಲಿ ಮೈಸೂರು ಮಹಾರಾಜಾ ಕಾಲೇಜಿನಿಂದ ಆರ್ಟ್ಸ್ ಪದವಿಯನ್ನು ಪಡೆದರು. ನಂತರ ಪೂನಾ ಲಾ ಕಾಲೇಜಿನಿಂದ ಎಲ್. ಎಲ್. ಬಿ. ಯನ್ನು ಮುಗಿಸಿದರು. ಅದೇ ವರ್ಷ ಅವರು ಬಾರ್ ಪ್ರವೇಶಿಸಿ ಸತತ ಯಶಸ್ವೀ ವೃತ್ತಿಗೆ ನಾಂದಿ ಹಾಡಿದರು. ಕಾಲೇಜುದಿನಗಳಲ್ಲಿಯೇ ಅವರು ತಮ್ಮ ಉತ್ಸಾಹ ಮತ್ತು ಚುರುಕುತನವನ್ನು ಪ್ರದರ್ಶಿಸಿದ್ದರು. ವಿದ್ಯಾರ್ಥಿ ಸಂಘ ಮತ್ತು ಕರ್ನಾಟಕ ಸಂಘಗಳಿಗೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಮಹಾತ್ಮಾ ಗಾಂಧಿಯವರಿಂದ ಪ್ರೇರಿತರಾಗಿ ಸ್ವಾತಂತ್ರ್ಯಹೋರಾಟಕ್ಕಿಳಿದು ಅದಮ್ಯಶಕ್ತಿ ಮತ್ತು ಅರ್ಪಣಾಮನೋಭಾವವನ್ನು ಮೆರೆದರು. ಈ ಹೋರಾಟದ ಅವಧಿಯಲ್ಲಿ ಅವರು ಏಳು ಬಾರಿ ಬಂಧನಕ್ಕೊಳಗಾದರು
ರಾಜಕೀಯ ಜೀವನ
ಸ್ವಾತಂತ್ರ್ಯದ ನಂತರದ ದಿನಗಳು
ಸುದೀರ್ಘ ಹೋರಾಟದ ನಂತರ ಭಾರತವು ೧೯೪೭ ರ ಅಗಸ್ಟ್ ೧೫ ರಂದು ಸ್ವತಂತ್ರವಾಯಿತು. ರಾಜಕಾರಣದಲ್ಲಿ ಅದಾಗಲೇ ಸುವಿಖ್ಯಾತರಾಗಿದ್ದ ಕೆಂಗಲ್ ಹನುಮಂತರಾಯರನ್ನು ಒಮ್ಮತದಿಂದ 'ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ'ರನ್ನಾಗಿ ೧೯೪೮ ರಲ್ಲಿ ಆರಿಸಲಾಯಿತು.
ಮುಖ್ಯಮಂತ್ರಿ
೧೯೫೧ ರಲ್ಲಿ ಮೈಸೂರು ರಾಜ್ಯಕ್ಕೆ ಕೆಂಗಲ್ ಹನುಮಂತಯ್ಯನನವರು ಎರಡನೆ ಮುಖ್ಯಮಂತ್ರಿಯಾದರು. ಜನರ ನಿಜವಾದ ನಾಯಕರಾಗಿದ್ದುಕೊಂಡು ರಾಜಕೀಯ ಹಸ್ತಕ್ಷೇಪವಿಲ್ಲದ ದಕ್ಷ ಆಡಳಿತವನ್ನು ನೀಡಿ ರಾಜ್ಯದ ಏಳಿಗೆಗೆ ಮತ್ತು ಗ್ರಾಮೀಣ ಜನರ ಉದ್ಧಾರಕ್ಕೆ ದುಡಿದರು. ದೂರದೃಷ್ಟಿಯುಳ್ಳ ನಾಯಕನಾಗಿ ಅವರು ಅನೇಕ ಸಾಧನೆಗಳನ್ನು ಮಾಡಿದರು.ಅದಕ್ಕೆ ಬೆಂಗಳೂರಿನಲ್ಲಿರುವ ಭವ್ಯ ವಿಧಾನಸೌಧ ಕಟ್ಟಡವೇ ಸಾಕ್ಷಿಯಾಗಿದೆ. ದೇಶದಲ್ಲೆ ಅತೀ ದೊಡ್ಡದವಾದ ಶಾಸಕಾಂಗ ಮತ್ತು ಆಡಳಿತ ಕಚೇರಿಯ ಕಟ್ಟಡವಿದು.ಇದರ ಕಲ್ಪನೆ ಮತ್ತು ನಿರ್ಮಾಣ ಪೂರ್ಣತಃ ಅವರದೇ. ಈ 'ಗ್ರಾನೈಟ್ ಕಟ್ಟಡ ರಚನೆ'ಯು 'ದ್ರಾವಿಡ ಶೈಲಿ'ಯನ್ನು ಆಧರಿಸಿದೆ. ಜವಾಹರಲಾಲ್ ನೆಹರುರವರು 'ಈ ಕಟ್ಟಡವನ್ನು ನೋಡಿ ಮಂತ್ರಮುಗ್ಧನಾದೆ' ಎಂದು ಹೇಳಿದ್ದಾರೆ.
ಕರ್ನಾಟಕ ಏಕೀಕರಣದ ಹೋರಾಟಗಾರ
ಕರ್ನಾಟಕದ ಏಕೀಕರಣವು ಅವರ ಇನ್ನೊಂದು ಮಹಾನ ಸಾಧನೆ.ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯವಾಗಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಭಾಷೆಯಾಧಾರಿತ ರಾಜ್ಯ ನಿರ್ಮಾಣವನ್ನು ಬೆಂಬಲಿಸಿ ೧೯೫೫ ರಲ್ಲಿ 'ಮೈಸೂರು ವಿಧಾಯಕಸಭೆ'ಯಲ್ಲಿ ಅವರು ಮಾಡಿದ ಭಾಷಣವು ಐತಿಹಾಸಿಕವಾಗಿದೆ.
ಲೋಕಸಭೆಯ ಸದಸ್ಯ
೧೯೬೨, ೧೯೬೭ ಅನದ ೧೯೭೧ರ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು[೧].
ಕೇಂದ್ರ ಮಂತ್ರಿ
ಅವರು ೧೯೭೧ ರ ಜನವರಿಯಲ್ಲಿ ಕೇಂದ್ರ ಸರಕಾರವನ್ನು ಸೇರಿ ರೈಲು ಇಲಾಖೆಗೆ ಕ್ಯಾಬಿನೆಟ್ ಮಂತ್ರಿಯಾದರು. 'ಭಾರತೀಯ ರೇಲ್ವೆಯಲ್ಲಿ ಅಲ್ಪಾವಧಿಯಲ್ಲೆ ದಕ್ಷ ಆಡಳಿತವನ್ನು ನೀಡಿ ಸಾಧನೆ ಮೆರೆದರು'. ಅವರ ರಾಜಕೀಯ ಕಾರ್ಯಾವಧಿಯು ಪ್ರಾಮಾಣಿಕ, ದಕ್ಷ ಆಡಳಿತ, ಗ್ರಾಮೀಣ ಮತ್ತು ದುರ್ಬಲ ವರ್ಗಗಳ ಜೀವನ ಸುಧಾರಣೆ, ಪ್ರಜಾಪ್ರಭುತ್ವದಲ್ಲಿ ಯುವಜನತೆಯ ತರಬೇತಿ ಮತ್ತು ಸಾಂಪ್ರದಾಯಿಕ ಮೌಲ್ಯಗಳ ಶಿಕ್ಷಣಕ್ಕಾಗಿ ಸಾಂಸ್ಕೃತಿಕ ಇಲಾಖೆಯ ರಚನೆಗಳನ್ನು ಒಳಗೊಂಡಿತ್ತು.






