ಮಾಜಿ ಮುಖ್ಯಮಂತ್ರಿ ರಾಜಕೀಯ ಮುತ್ಸದ್ದಿ ಎಸ್.ಎಂ. ಕೃಷ್ಣ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಹುಟ್ಟೂರು ಸೋಮನಹಳ್ಳಿಯಲ್ಲಿ ಇಂದು ನೆರವೇರಿತು.

somanahalli:

Font size:

ಕೃಷ್ಣ ಅವರ ಮೊಮ್ಮಗ, ಡಿ.ಕೆ. ಶಿವಕುಮಾರ್ ಅವರ ಅಳಿಯ ಅಮರ್ತ್ಯ ಹೆಗ್ಡೆ ತಮ್ಮ ತಾತ ಎಸ್.ಎಂ.ಕೃಷ್ಣ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು

ಮಾಜಿ ಮುಖ್ಯಮಂತ್ರಿ ರಾಜಕೀಯ ಮುತ್ಸದ್ದಿ ಎಸ್.ಎಂ. ಕೃಷ್ಣ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಹುಟ್ಟೂರು ಸೋಮನಹಳ್ಳಿಯಲ್ಲಿ ಇಂದು ನೆರವೇರಿತು.

ಕೃಷ್ಣ ಅವರ ಮೊಮ್ಮಗ, ಡಿ.ಕೆ. ಶಿವಕುಮಾರ್ ಅವರ ಅಳಿಯ ಅಮರ್ತ್ಯ ಹೆಗ್ಡೆ ತಮ್ಮ ತಾತ ಎಸ್.ಎಂ.ಕೃಷ್ಣ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು

ಅಗ್ನಿಸ್ಪರ್ಶಕ್ಕೂ ಮುನ್ನ ಎಸ್ಎಂ ಕೃಷ್ಣ ಅವರ ಚಿತೆಗೆ ಪತ್ನಿ ಪ್ರೇಮಾ, ಪುತ್ರಿಯರು, ಸಂಬಂಧಿಕರು ಗಂಧದ ತುಂಡುಗಳನ್ನು ಇಟ್ಟು ಅಂತಿಮ ವಿದಾಯ ಹೇಳಿದರು. ಬಳಿಕ ಮಂಡ್ಯ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಮೃತರ ಗೌರವಾರ್ಥವಾಗಿ ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಲಾಯಿತು.

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ರಾಜ್ಯದ ಹಲವು ಸಚಿವರು, ಶಾಸಕರುಗಳು, ರಾಜಕೀಯ ನಾಯಕರುಗಳು ಭಾಗಿಯಾಗಿ ಅಂತಿಮ ನಮನ ಸಲ್ಲಿಸಿದರು.

ಮಂಗಳವಾರ ನಿಧನರಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣರವರ ಪಾರ್ಥೀವ ಶರೀರವನ್ನು ಅವರ ಸದಾಶಿವ ನಗರದ ನಿವಾಸದಲ್ಲಿ ನಿನ್ನೆ ಇಡೀ ದಿನ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದ್ದು, ಬುಧವಾರ ಬೆಳಿಗ್ಗೆ ಅವರ ಪಾರ್ಥೀವ ಶರೀರದ ಅಂತಿಮ ಯಾತ್ರೆ ಬೆಂಗಳೂರಿನಿಂದ ಸೋಮನಹಳ್ಳಿಯವರೆಗೂ ನಡೆಯಿತು.
ಪುಷ್ಪಾಲಂಕೃತ ಗಾಜಿನ ವಾಹನದಲ್ಲಿ ಕೃಷ್ಣರವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ನಡೆದಿದ್ದು, ದಾರಿಯುದ್ಧಕ್ಕೂ ಸಾವಿರಾರು ಜನ ದರ್ಶನ ಪಡೆದು ಕಂಬನಿ ಮಿಡಿದು ಅಗಲಿದ ನಾಯಕನಿಗೆ ಗೌರವ ಸಲ್ಲಿಸಿದರು.

ಬೆಂಗಳೂರಿನ ಸದಾಶಿವ ನಗರದ ಎಸ್.ಎಂ ಕೃಷ್ಣ ಅವರ ನಿವಾಸದಲ್ಲಿ ಪಾರ್ಥೀವ ಶರೀರದ ಅಂತಿಮಯಾತ್ರೆ ಆರಂಭಕ್ಕೂ ಮುನ್ನ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಎಸ್.ಎಂ ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ, ಅವರ ಪುತ್ರಿಯರು, ಮೊಮ್ಮಕ್ಕಳು ಹಾಗೂ ಅವರ ಹತ್ತಿರದ ಸಂಬಂಧಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇವರುಗಳು ಪಾರ್ಥೀವ ಶರೀರಕ್ಕೆ ಪೂಜೆ ಸಲ್ಲಿಸಿದರು. ನಂತರ ಪಾರ್ಥೀವ ಶರೀರದ ಮೆರವಣಿಗೆ ಆರಂಭವಾಗಿ ಬೆಂಗಳೂರಿನ ಟೌನ್‌ಹಾಲ್,ಮೈಸೂರು ಸರ್ಕಲ್, ರಾಜರಾಜೇಶ್ವರಿ ಗೇಟ್, ಕೆಂಗೇರಿ, ಬಿಡದಿ, ರಾಮನಗರ, ಚೆನ್ನಪಟ್ಟಣ ಮೂಲಕ ಮದ್ದೂರಿನ ಸೋಮನಹಳ್ಳಿಗೆ ತಲುಪಿತು.

ಮಾರ್ಗಮಧ್ಯೆ ಮೈಸೂರು ರಸ್ತೆ,ಕೆಂಗೇರಿ, ಬಿಡದಿ, ರಾಮನಗರ, ಚೆನ್ನಪಟ್ಟಣಗಳಲ್ಲೂ ಕೆಲ ಕಾಲ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.ಸೋಮನಹಳ್ಳಿಯ ಎಸ್.ಎಂ ಕೃಷ್ಣ ಅವರ ನಿವಾಸದಲ್ಲಿ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನದ ನಂತರ ಅಂತ್ಯಕ್ರಿಯೆ ನೆರವೇರಿತು.

ಪಾರ್ಥೀವ ಶರೀರ ಸಾಗಿದ ದಾರಿಯ ಇಕ್ಕೆಲ್ಲಗಳಲ್ಲೂ ಸಾವಿರಾರು ಜನ ನಿಂತು ಎಸ್.ಎಂ ಕೃಷ್ಣ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಅಗಲಿದ ನಾಯಕನ ನಿಧನಕ್ಕೆ ಕಂಬನಿ ಮಿಡಿದು ಅಗಲಿದ ನಾಯಕನಿಗೆ ಪುಷ್ಪವೃಷ್ಠಿ ಮಾಡಿ ಕೈಮುಗಿದು ಅಂತಿಮ ಗೌರವ ಸಲ್ಲಿಸಿದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಂತ್ಯಕ್ರಿಯೆ ನಡೆದ ಅವರ ಹುಟ್ಟೂರಿನ ಸ್ವಂತ ಜಾಗವಾದ ಕಾಫಿ ಡೇ ಯ ಆವರಣದಲ್ಲಿ ಎಲ್ಲ ಗಣ್ಯರಿಗೆ ಹಾಗೂ ಸಾರ್ವಜನಿಕರಿಗೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ವಿಶೇಷ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಲಾಗಿತಲ್ಲದೆ ಗಣ್ಯರಿಗೆ ವಿಶೇಷ ಗ್ಯಾಲರಿಗಳನ್ನು ಸಹಾ ನಿರ್ಮಾಣ ಮಾಡಲಾಗಿತ್ತು.

Prev Post ಮುಸ್ಸಂಜೆಯಲ್ಲಿ ಮುದಗೊಳಿಸಿದ ಸಾಂಸ್ಕೃತಿಕ ಮೆರವಣಿಗೆ, ಸಮಯ, ಸೌಂದರ್ಯ, ಸೃಜನಶೀಲತೆಯ ಸಿಂಚನ ಶ್ರದ್ಧಾ- ಭಕ್ತಿಯ ತೇರಿಗೆ ಸಾಂಸ್ಕೃತಿಕ ಮೆರುಗು
Next Post ಲಿಂಗಾಯತ ಸಮುದಾಯವನ್ನು ಹಿಂದುಳಿದ ಪ್ರವರ್ಗ-2ಎ ಗೆ ಸೇರಿಸಬಾರದು ಎಂದು ಒತ್ತಾಯಿಸಿ, ಮನವಿ