ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ 2024ಕ್ಕೆ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ

Belaguam:

Font size:

ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ 2024ಕ್ಕೆ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ

ಬೆಳಗಾವಿ ಸುವರ್ಣಸೌಧ ಡಿ.18 -ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು‌ ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ ಅವರು ಪರ್ಯಾಲೋಚನೆಗೆ ಇಟ್ಟ ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ 2024ಕ್ಕೆ
ವಿಧಾನ ಪರಿಷತ್ತಿನಲ್ಲಿ ಡಿ.18ರಂದು ಅಂಗೀಕಾರ ದೊರೆಯಿತು.
ಸಚಿವರ ಕೋರಿಕೆಯ ಮೇರೆಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಧೇಯಕ ಮೇಲೆ ಮಾತನಾಡಲು ಅವಕಾಶ ನೀಡಿದರು.
ಸದಸ್ಯರಾದ ಪಿ ಎಚ್ ಪೂಜಾರ, ಕೇಶವ ಪ್ರಸಾದ್, ಪ್ರತಾಪಸಿಂಹ ನಾಯಕ ಕೆ., ಹಾಗೂ ತಿಪ್ಪೇಸ್ವಾಮಿ ಕೆ.ಎ ಹಾಗೂ ಇನ್ನೀತರರು ವಿಧೇಯಕದ‌ ಮೇಲೆ ಮಾತನಾಡಿದರು.
ಈ ವಿಧೇಯಕದಲ್ಲಿ ಅಳವಡಿಸಿರುವ ನಿಯಮಗಳು ವ್ಯಾಜ್ಯಗಳ ತ್ವರಿತ ವಿಲೇಗೆ ಪೂರಕವಾಗಿವೆ. ಕೋರ್ಟಿನ ವ್ಯವಸ್ಥೆಗೆ ಮತ್ತು ಜನರ ವಿಶ್ವಾಸಕ್ಕೆ ವಿಧೇಯಕವು ಪೂರಕವಾಗಿದೆ ಎಂದು ಸದಸ್ಯರು ಸಲಹೆ ಮಾಡಿ ವಿಧೇಯಕವನ್ನು ಬೆಂಬಲಿಸಿದರು.
ಕಾಲ ಬದಲಾದಂತೆ ನ್ಯಾಯಾದಾನ ವ್ಯವಸ್ಥೆಯಲ್ಲಿ ಸಹ ಆಮೂಲಾಗ್ರ ಬದಲಾವಣೆ ತರಬೇಕು ಎನ್ನುವ ಯೋಚನೆಯೊಂದಿಗೆ, ಬಾಕಿ ಇರುವ ಲಕ್ಷಾಂತರ ಸಂಖ್ಯೆಯ ಸಿವಿಲ್ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಲೇ ಮಾಡಲು ಅನುಕೂಲವಾಗುವಂತೆ ವಿಧೇಯಕ ಜಾರಿಗೆ ಸರ್ಕಾರವು ಮುಂದಾಗಿದೆ ಎಂದು ಸಚಿವರಾದ ಹೆಚ್ ಕೆ ಪಾಟೀಲ ಅವರು ತಿಳಿಸಿ, ಸದನದಲ್ಲಿ ಮಂಡಿಸಿದ ವಿಧೇಯಕಕ್ಕೆ ಅನುಮೋದನೆ ನೀಡಿ, ಅಂಗೀಕರಿಸಬೇಕು ಎಂದು ಕೋರಿದರು.
ಬಳಿಕ ಧ್ವನಿಮತದ ಮೂಲಕ ಸದನವು ವಿಧೇಯಕವನ್ನು ಅಂಗೀಕರಿಸಿತು.

Prev Post ಗೃಹಲಕ್ಷ್ಮಿ’ ಯಿಂದ ಬದುಕಿಗೆ ಹೊಸ ಚೈತನ್ಯ ಮೂಡಿದೆ: ಮುಖ್ಯಮಂತ್ರಿಗಳ ಎದುರು ಗೃಹಲಕ್ಷ್ಮಿಯರ ಪ್ರಶಂಸೆ
Next Post ಮೇಲ್ಮನೆಯಲ್ಲೂ 2024ನೇ ಸಾಲಿನ ಬೃಹತ್ ಬೆಂಗಳೂರು ನಗರ ಪಾಲಿಕೆ ಎರಡನೇ ತಿದ್ದುಪಡಿ ವಿಧೇಯಕ ಅಂಗೀಕಾರ