ಲೆಕ್ಕದಲ್ಲಿ ಮತ್ತೆ ಗೆದ್ದ ಸಿಎಂ ಸಿದ್ದರಾಮಯ್ಯ

:

Font size:

ತುಂಗಭದ್ರ ಅಣೆಕಟ್ಟೆಯಿಂದ ಯಾವ ರಾಜ್ಯದ ಎಷ್ಟು ಎಕರೆ ಪ್ರದೇಶಕ್ಕೆ ನೀರು ಒದಗಿಸಲಾಗುತ್ತಿದೆ ಎನ್ನುವ ಬಗ್ಗೆ ಅಂಕಿ ಅಂಶ ಸಮೇತ ವಿವರಿಸಿದರು. ಎಡ ಮತ್ತು ಬಲ ದಂಡೆಯಲ್ಲಿ ಎಷ್ಟೆಷ್ಟು ಎಕರೆಗೆ ನೀರುಣಿಸಲಾಗುತ್ತಿದೆ ಎನ್ನುವ ಅಂಕಿ ಅಂಶ ಕೂಡ ಹೇಳಿದರು. ಈ ವೇಳೆ ವೇದಿಕೆಯಲ್ಲಿದ್ದ ಕೆಲವರು ಬೇರೆ ಅಂಕಿ ಅಂಶ ಹೇಳಿ ಅವರನ್ನು ತಿದ್ದಲು ಯತ್ನಿಸಿದರು. ಆದರೆ, ಎಲ್ಲರು ಕೊಟ್ಟ ಅಂಕಿ ಅಂಶಗಳನ್ನು ಪರಿಶೀಲಿಸಿದ ಮುಖ್ಯಮಂತ್ರಿಗಳು ಬಳಿಕ ಇಲಾಖೆ ಮುಖ್ಯಸ್ಥರನ್ನು ಕರೆದು ದಾಖಲೆ ತರಿಸಿಕೊಂಡರು. ದಾಖಲೆಗಳ ಪ್ರಕಾರ ಮೊದಲಿಗೆ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದ ಅಂಕಿ ಅಂಶಗಳು, ಕೊಟ್ಟ ಲೆಕ್ಕವೇ ಸರಿಯಾಗಿತ್ತು. ಬಳಿಕ ಮುಖ್ಯಮಂತ್ರಿಗಳು ಸಭಿಕರ ಕಡೆಗೆ 👍(ಥಂಬ್ಸ್ ಅಪ್) ತೋರಿಸಿ ನನ್ನ ಲೆಕ್ಕವೇ perfect ಎಂದರು. ಜನರು ಶಿಳ್ಳೆ ಹಾಕಿ ಸಂಭ್ರಮಿಸಿದರು.

ಭಾಷಣದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಲೆಕ್ಕದಲ್ಲಿ ಪರ್ಫೆಕ್ಟ್ ಎಂದು ಮತ್ತೊಮ್ಮೆ ಸಾಬೀತು ಪಡಿಸಿದರು.

Prev Post ತಜ್ಞರ ವರದಿಯ ಆಧಾರದ ಮೇಲೆ ಗೇಟ್ ಗಳ ನಿರ್ವಹಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ
Next Post ಒಂದು ವರ್ಷದೊಳಗೆ ತುಂಗಭದ್ರಾ ಜಲಾಶಯಕ್ಕೆ ನೂತನ ಕ್ರಸ್ಟ್ ಗೇಟ್ ಗಳ ಅಳವಡಿಕೆಗೆ ಕ್ರಮ: ಡಿಸಿಎಂ ಡಿ. ಕೆ. ಶಿವಕುಮಾರ್