Font size:
ಮಧುಗಿರಿ ಪಟ್ಟಣದ ಕೆ.ಇ.ಬಿ. ನೌಕರರ ಸಮುದಾಯ ಭವನದಲ್ಲಿಅಖಿಲ ಭಾರತ ರೊದ್ದಗಾರ ಒಕ್ಕಲಿಗ ಕ್ಷೇಮಾಭಿವೃದ್ಧಿ ಸಂಘದ ಪ್ರಥಮ ವರ್ಷದ ಬೃಹತ್ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಕೆ ಎನ್ . ರಾಜಣ್ಣ ಭಾಗವಹಿಸದ್ದರು.
ಇಂದು ಮಧುಗಿರಿ ಪಟ್ಟಣದ ಕೆ.ಇ.ಬಿ. ನೌಕರರ ಸಮುದಾಯ ಭವನದಲ್ಲಿ ಅಖಿಲ ಭಾರತ ರೊದ್ದಗಾರ ಒಕ್ಕಲಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಬೃಹತ್ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ಮಾಜಿ ರಾಜ್ಯಸಭಾ ಸದಸ್ಯರಾದಂತಹ ಶ್ರೀ ಎಂ.ವಿ.ರಾಜೀವ್ ಗೌಡ, ಶ್ರೀ ನಾಗರಾಜು ವಿ, ನಂಜಾರೆಡ್ಡಿ, ಅಶ್ವತ್ಥಯ್ಯ, ನಾರಾಯಣಪ್ಪ, ರಶ್ಮಿ ರಾಜಣ್ಣ, ರವರು ಹಾಗೂ ಸಂಘದ ಸದಸ್ಯರು ಮತ್ತು ಸಮುದಾಯದ ಮುಖಂಡರು ಉಪಸ್ಥಿತರಿದ್ದರು.






