ವಖ್ಫ್ ಆಸ್ತಿ ಯಾರಪ್ಪನದೂ ಅಲ್ಲ - ಜಮೀರ್ ಅಹಮದ್ ಖಾನ್

vijayapure:

Font size:

ವಖ್ಫ್ ಆಸ್ತಿ ಯಾರಪ್ಪನದೂ ಅಲ್ಲ - ಜಮೀರ್ ಅಹಮದ್ ಖಾನ್ ಅಪಪ್ರಚಾರ ಮಾಡಬೇಡಿ ಎಂದು ಯತ್ನಾಳ್ ಗೆ ಸವಾಲ್

ವಿಜಯಪುರ :ವಖ್ಫ್ ಬೋರ್ಡ್ ಆಸ್ತಿ ಯಾರಪ್ಪನದು ಅಲ್ಲ, ಮಿಸ್ಟರ್ ಯತ್ನಾಳ್. ಅದು ದಾನಿಗಳು ಸಮುದಾಯಕ್ಕೆ ಕೊಟ್ಟಿರುವ ದಾನ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ವಿಜಯಪುರದಲ್ಲಿ ವಖ್ಫ್ ಅದಾಲತ್ ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಖ್ಫ್ ಆಸ್ತಿ ಸರ್ಕಾರದಿಂದ ಪಡೆದಿಲ್ಲ, ಬದಲಿಗೆ ಸರ್ಕಾರಿ ಸಂಸ್ಥೆ ಗಳೇ ವಖ್ಫ್ ಆಸ್ತಿ ಒತ್ತುವರಿ ಮಾಡಿವೆ. ಖಬರಸ್ಥಾನಕ್ಕೆ ಹೊರತು ಪಡಿಸಿ ವಖ್ಫ್ ಬೋರ್ಡ್ ಗೆ ಸರ್ಕಾರ ಜಮೀನು ಕೊಟ್ಟಿಲ್ಲ. ವ್ಯವಸ್ಥಿತ ವಾಗಿ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಹೋಗಬೇಡಿ ಎಂದು ತಿಳಿಸಿದರು.
ವಿಜಯಪುರದಲ್ಲಿ ಬೇರೆ ಯವರಿಗೆ ಸೇರಿದ ಆಸ್ತಿ ಗೆಲ್ಲಾ ಖಾತೆ ಮಾಡಿಸಿಕೊಳ್ಳಲು ಜಮೀರ್ ಅಹಮದ್ ಬರುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ವೇದಿಕೆಯಲ್ಲಿ ಮಾತನಾಡುತ್ತಾ ನೇರವಾಗಿ ತರಾಟೆಗೆ ತೆಗೆದುಕೊಂಡ ಸಚಿವರು, ವಖ್ಫ್ ಆಸ್ತಿ ನಿಮ್ಮಪ್ಪ ನದೂ ಅಲ್ಲ, ನಮ್ಮಪ್ಪನ ದು ಅಲ್ಲ. ಸಮುದಾಯದ ಒಳಿತಿಗಾಗಿ ದಾನಿಗಳು ಕೊಟ್ಟ ದೇವರ ಆಸ್ತಿ ಎಂದು ಹೇಳಿದರು.
ವಖ್ಫ್ ಆಸ್ತಿ ಒತ್ತುವರಿ ತೆರವುಗೊಳಿಸಿ ಶಿಕ್ಷಣ ಮತ್ತು ಅರೋಗ್ಯ ಸೇವೆಗೆ ಬಳಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ವಖ್ಫ್ ಅದಾಲತ್ ಮಾಡಲಾಗುತ್ತಿದೆ. ಬಿಜಾಪುರದಲ್ಲಿ 338 ಅರ್ಜಿ ಬಂದಿದ್ದು ಅದರಲ್ಲಿ 17 ಒತ್ತುವರಿ, 81 ಖಾತೆ, 77 ಖಬರಾಸ್ಥಾನ, 25 ಸರ್ವೆ ಸೇರಿದಂತೆ ಇತರೆ ಸಮಸ್ಯೆ ಗಳಿಗೆ ಸಂಬಂಧ ಪಟ್ಟಿದ್ದು ಮಂಗಳವಾರ ಅಧಿಕಾರಿಗಳ ಸಭೆಯಲ್ಲಿ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳ ಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಸಾಕಷ್ಟು ವಖ್ಫ್ ಆಸ್ತಿ ಒತ್ತುವರಿ ಆಗಿದ್ದು ತೆರವು ಮಾಡಲು ಕ್ರಮ ಕೈಗೊಳ್ಳಲಾಗಿದೆ. ವಖ್ಫ್ ಆಸ್ತಿ ಸಂರಕ್ಷಣೆ ಮಾಡುವುದು ನಿಮ್ಮ ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಮೌಲಾನಾ ತನ್ವಿರ್ ಹಾಶ್ಮಿ, ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಶಾಸಕರಾದ ನಾಡಗೌಡ, ಅಶೋಕ್ ಮನಗೋಳಿ, ವಿಠಲ ಕಟಕ ದೊಂಡ, ಪರಿಷತ್ ಸದಸ್ಯ
ಅಬ್ದುಲ್ ಜಬ್ಬಾರ್, ಜಿಲ್ಲಾ ವಖ್ಫ್ ಸಲಹಾ ಸಮಿತಿ ಅಧ್ಯಕ್ಷ ಕೌಸರ್ ನಿಯಾಜ್, ಮುಖಂಡ ಹಮೀದ್ ಮುಶ್ರಿ ಮತ್ತಿತರರು ಉಪಸ್ಥಿತರಿದ್ದರು.

Prev Post ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದ ಶ್ರೀ ಹೊನ್ನಕೇರಿ ಮಲ್ಲಯ್ಯನ ಮೂರ್ತಿ ಪ್ರತಿಷ್ಠಾಪನೆ,
Next Post ಕಾಂಗ್ರೆಸ್ ನ ಜಾತಿ ರಾಜಕಾರಣವನ್ನು ಹರಿಯಾಣ ಜನತೆ ತಿರಸ್ಕರಿಸಿದ್ದಾರೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ