Font size:
ಮಾಲ್ಡೀವ್ಸ್ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಡಾ. ಮೊಹಮ್ಮದ್ ಮುಯಿಜ್ಜು ಮತ್ತು ಪ್ರಥಮ ಮಹಿಳೆ ಶ್ರೀಮತಿ ಸಾಜಿದಾ ಮೊಹಮ್ಮದ್ ಬೆಂಗಳೂರಿಗೆ ಆಗಮನ ಸಚಿವ ಡಾ. ಎಂ.ಸಿ ಸುಧಾಕರ್ ಅವರಿಂದ ಆತ್ಮೀಯ ಸ್ವಾಗತ
ಬೆಂಗಳೂರು, ಅ.9- (ಕರ್ನಾಟಕ ವಾರ್ತೆ):
ಮಾಲ್ಡೀವ್ಸ್ ಗಣರಾಜ್ಯದ ಅಧ್ಯಕ್ಷರಾದ
ಗೌರವಾನ್ವಿತ ಡಾ. ಮೊಹಮ್ಮದ್ ಮುಯಿಜ್ಜು ಮತ್ತು ಪ್ರಥಮ ಮಹಿಳೆ ಶ್ರೀಮತಿ ಸಾಜಿದಾ ಮೊಹಮ್ಮದ್ ಹಾಗೂ ಅವರ ನಿಯೋಗ ಬೆಂಗಳೂರಿನ ಭೇಟಿಗಾಗಿ ಇಂದು ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಮಾಲ್ಡೀವ್ಸ್ ಗಣರಾಜ್ಯದ ಗೌರವಾನ್ವಿತ ಅಧ್ಯಕ್ಷರನ್ನು ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಅವರು ಆತ್ಮೀಯವಾಗಿ ಸ್ವಾಗತಿಸಿದರ.
ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಉಮಾ ಮಹದೇವನ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಡಾ. ಎನ್. ಶಿವಶಂಕರ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಸೇರಿದಂತೆ ಗಣ್ಯರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು






