PRABHAVAA.COM

ಕಬ್ಬು ಬೆಳೆಗಾರರ ಸಮಸ್ಯೆ; ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದು, ಪ್ರಯೋಜನವಾಗುವ ವಿಶ್ವಾಸ ಇದೆ: ಸಿಎಂ ಡಿ ಕೆ ಶಿವಕುಮಾರ್

Bengaluru Urban:

Font size:

10 ದಿನಗಳ ಕಾಲ ದಸರಾ ದೀಪಾಲಂಕಾರ ವಿಸ್ತರಣೆ

ರೈತರ ವಿಚಾರದಲ್ಲಿ ರಾಜಕಾರಣ ಮಾಡಲು ಇಷ್ಟವಿಲ್ಲ

ಸರ್ವ ಪಕ್ಷಗಳ ನಿಯೋಗದೊಂದಿಗೆ ಪ್ರಧಾನಿಗಳ ಭೇಟಿ

ಬೆಂಗಳೂರು, ಅ.19:

"ಕಬ್ಬು ಬೆಳೆಗಾರರ ವಿಚಾರವಾಗಿ ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ. ಅವರಿಂದ ಪ್ರಯೋಜನವಾಗುವ ಬಗ್ಗೆ ನನಗೆ ವಿಶ್ವಾಸವಿದೆ" ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.

"ಕಬ್ಬು ಬೆಳೆಗಾರರ ಹಿತ ಕಾಪಾಡಲು ನಾನು ಪ್ರಯತ್ನ ಪಟ್ಟಿದ್ದೇನೆ. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಪ್ರಯತ್ನ ಪಟ್ಟು, ಕೊನೆಗೆ ಮತ್ತೆ ಕಾಂಗ್ರೆಸ್ ಮೇಲೆ ಹಾಕಿದ್ದಾರೆ. ಕೇಂದ್ರ ಸರ್ಕಾರದ ಬಗ್ಗೆ ಈಗ ಏನು ಮಾತನಾಡುವುದಿಲ್ಲ. ಕಬ್ಬು ಬೆಳೆಗಾರರ ಸಮಸ್ಯೆಯನ್ನು ಎಲ್ಲರೂ ಸೇರಿ ಬಗೆಹರಿಸಬೇಕು" ಎಂದು ಹೇಳಿದರು.

ರೈತರ ವಿಚಾರದಲ್ಲಿ ರಾಜಕಾರಣ ಮಾಡಲು ಇಷ್ಟವಿಲ್ಲ

"ನನಗೆ ಈ ವಿಚಾರವಾಗಿ ರಾಜಕಾರಾಣ ಮಾಡೋಕೆ ಇಷ್ಟ ಇಲ್ಲ. ರೈತರ ಹತ್ತಿರ ಏನು ರಾಜಕಾರಣ ಮಾಡ್ತೀರ? ರಾಜಕಾರಣ ಮಾಡೋಕೆ ಬೇರೆ ಜನ ಇದ್ದಾರೆ. ಅವರು ಮಾಡುತ್ತಾರೆ. ಅವರು ಟೀಕೆ ಮಾಡುತ್ತಿರಲಿ. ಅದಕ್ಕೆಲ್ಲ ನಾವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ" ಎಂದರು.

ಸರ್ವ ಪಕ್ಷಗಳ ನಿಯೋಗದೊಂದಿಗೆ ಪ್ರಧಾನಿಗಳ ಭೇಟಿ

ಮುಂದಿನ ವಾರ ಬರದ ವಿಚಾರವಾಗಿ ಪ್ರಧಾನಿಗಳಿಗೆ ಮನವಿಯನ್ನು ಸಲ್ಲಿಸುತ್ತೀರ ಎಂದು ಕೇಳಿದಾಗ, "ಹೌದು, ಸರ್ವ ಪಕ್ಷಗಳ ನಿಯೋಗದೊಂದಿಗೆ ಪ್ರಧಾನಿಗಳನ್ನು ಭೇಟಿಯಾಗಿ ಮನವಿಯನ್ನು ಮಾಡುತ್ತೇವೆ. ವಿರೋಧ ಪಕ್ಷದವರೂ ಕೂಡ ನಮ್ಮ ಜೊತೆಗೆ ಬರುತ್ತೇವೆ ಎಂದು ಹೇಳಿದ್ದಾರೆ. ಈಗ ಏಕೆ ಸುಮ್ಮನೆ ಇದ್ದೀನಿ ಎಂದರೆ, ಬರಗಾಲ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದ ಎಲ್ಲಾ ಕಡೆ ಇದೆ. ದಸರಾ ಮುಗಿದು ರಾಜ್ಯೋತ್ಸವದ ನಡುವೆ ಮಧ್ಯದಲ್ಲಿ ಪ್ರಧಾನಿಗಳು ಸಮಯ ಕೊಟ್ಟರೆ ಹೋಗಿ ಮಾತನಾಡುತ್ತೇನೆ" ಎಂದರು.

10 ದಿನಗಳ ಕಾಲ ದಸರಾ ಲೈಟಿಂಗ್ ಮುಂದುವರಿಕೆ

ದಸರಾ ಲೈಟಿಂಗ್ ನೋಡುವುದಕ್ಕಾಗಿ ಟ್ರಾಫಿಕ್ ಜಾಮ್ ಆಗುತ್ತಿದೆ. ಇದನ್ನು ಮತ್ತಷ್ಟು ದಿನ ವಿಸ್ತರಿಸುವ ಚಿಂತನೆ ಇದೆಯೇ ಎನ್ನುವ ಪ್ರಶ್ನೆಗೆ, "ದಸರಾ ಲೈಟಿಂಗ್ ಅನ್ನು 10 ದಿನಗಳ ಕಾಲ ಮುಂದುವರಿಸುವ ಯೋಜನೆ ಇದೆ. ಸದ್ಯದಲ್ಲಿಯೇ ಈ ಬಗ್ಗೆ ಘೋಷಣೆಯಾಗಲಿದೆ' ಎಂದು ಮಾಹಿತಿ ನೀಡಿದರು.

"ದಸರಾಕ್ಕೆ ವಿಜಯನಗರ ಕಾಲದಿಂದ ಅರಸು ಕಾಲದ ತನಕ ಇತಿಹಾಸ ಇದೆ. ಕಂಬಳ ಕದರಿ ಮಂಜುನಾಥ ದೇವರಿಗಾಗಿ ಶುರುಮಾಡಿದ್ದು. ವಿಜಯನಗರ ಕಾಲದಿಂದಲೂ ಕೋಣಗಳಿಗೆ ಗೌರವ ಕೊಡುವ ಪದ್ಧತಿ ಇದೆ.
ಚಾಮುಂಡಿಗೆ ತೆಂಗಿನ ಕಾಯಿ ಹೊಡೀತಿವಲ್ಲ. ಆ ಕಾಯನ್ನು ಕಂಬಳಕ್ಕೆ ಬಹುಮಾನವಾಗಿ ನೀಡುತ್ತಿದ್ದರು. ಈಗ ಚಿನ್ನದ ನಾಣ್ಯ ಕಾಡೊತ್ತಾರೆ. ಅದನ್ನು ಮಾರಾಟ ಮಾಡುವುದಿಲ್ಲ. ಮದುವೆಗೆ ದಾನವಾಗಿ ಕೊಡ್ತಾರೆ" ಎಂದು ಹೇಳಿದರು.

"ಕೋಣಗಳನ್ನು ಸಾಕುವುದಕ್ಕೆ15ರಿಂದ 20 ಲಕ್ಷ ಖರ್ಚು ಮಾಡ್ತಾರೆ. ಮಕ್ಕಳಂತೆ ಪೋಷಣೆ ಮಾಡ್ತಾರೆ. ಕಂಬಳ ನಡೆಸಲು 3 ಸಾವಿರ ಜನ ಬಂದಿದ್ದಾರೆ. ಲಕ್ಷಾಂತರ ಜನ ನೋಡಿದ್ದಾರೆ. ನಾವು ದಸರಾದಲ್ಲಿ ಹೊಸ ಪರಂಪರೆ ಪ್ರಾರಂಭ ಮಾಡಿದ್ದೇವೆ. ಹೊಸದಾಗಿ ನಾವು ಏರ್ ಶೋ ಆರಂಭಿಸಿದ್ದೇವೆ. ಯುವ ದಸರಾ ಮಾಡಿ ಹೊರಗಡೆ ರಾಜ್ಯದವರನ್ನು ಕರೆದು ಲಕ್ಷಾಂತರ ಜನ ಯುವಕರಿಗೆ ಮನೋರಂಜನೆಯನ್ನು ಕೊಟ್ಟಿದ್ದೇವೆ" ಎಂದರು.

"ತುಳುನಾಡು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕೊಡಗು, ತುಮಕೂರು ಚಾಮರಾಜನಗರ, ಶ್ರೀರಂಗಪಟ್ಟಣದಲ್ಲಿ ಹೀಗೆ ರಾಜ್ಯದ ಎಲ್ಲಾ ಕಡೆ ದಸರಾ ನಡೆಯುತ್ತಿದೆ. ಇದು ನಮ್ಮ ದೇಶದ ಸಂಸ್ಕೃತಿ. ಕಲೆ, ಸಾಹಿತ್ಯ ನಮ್ಮ ಆಸ್ತಿ. ಇದನ್ನು ಉಳಿಸುವುದಕ್ಕೆ ಬೆಳೆಸುವುದಕ್ಕೆ ಪ್ರೋತ್ಸಾಹ ನೀಡಬೇಕು. ಈ ಕೆಲಸ ನಾವು ಮಾಡುತ್ತಿದ್ದೇವೆ" ಎಂದರು.

Comments

Leave a Comment

Prev Post ಶಿಕ್ಷಕರಿಗೆ ಬಡ್ತಿ ಪ್ರಕ್ರಿಯೆ ವೇಗ: ವರ್ಷಕ್ಕೆ ಎರಡು ಬಾರಿ ಕಡ್ಡಾಯ ಇಲಾಖಾ ಮುಂಬಡ್ತಿ ಸಭೆ ನಡೆಸಲು ಶಿಕ್ಷಣ ಇಲಾಖೆಯ ಸುತ್ತೋಲೆ

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಇನ್ನೆರಡು ತಿಂಗಳಲ್ಲಿ ಕಳೆದೆರಡು ಸಾಲಿನ ಉದ್ಯೋಗಿನಿ‌ ಯೋಜನೆಯ ಸಹಾಯ ಧನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ತೇರದಾಳ ಶಾಸಕ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಸಚಿವರ ಉತ್ತರ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News