PRABHAVAA.COM

ಕರ್ನಾಟಕ ನಾಟಕ ಅಕಾಡೆಮಿಯ 2026-27 ಪ್ರಶಸ್ತಿ ಘೋಷಣೆ:

Bengaluru Urban:

Font size:

ಕರ್ನಾಟಕ ನಾಟಕ ಅಕಾಡೆಮಿಯ 2026-27 ಪ್ರಶಸ್ತಿ ಘೋಷಣೆ: ಡಾ. ಮುಖ್ಯಮಂತ್ರಿ ಚಂದ್ರು ಜೀವಮಾನ ಸಾಧನೆ ಪುರಸ್ಕೃತ, 25 ಕಲಾವಿದರು ಹಾಗೂ 7 ದತ್ತಿನಿಧಿ ಪುರಸ್ಕೃತರಿಗೆ ಗೌರವ

ಜೀವಮಾನ ಸಾಧನೆ ಗೌರವ ಪ್ರಶಸ್ತಿಗೆ ಬೆಂಗಳೂರಿನ ಡಾ. ಮುಖ್ಯಮಂತ್ರಿ ಚಂದ್ರು ಅವರನ್ನು ಆಯ್ಕೆ ಮಾಡಲಾಗಿದೆ. ವಾರ್ಷಿಕ ಪ್ರಶಸ್ತಿಗಳಲ್ಲಿ ಧಾರವಾಡದ ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠ, ಬಾಗಲಕೋಟೆಯ ಇಳಕಲ್‌ನ ರಮೇಶ ತಿಪ್ಪಣ್ಣ ಚಿತ್ರಗಾರ, ಹಾಸನ ಮೂಲದ ಶಿವಾನಂದ ತಗಡೂರು (ವಾಸ್ತವ್ಯ – ಬೆಂಗಳೂರು), ದೇವನಹಳ್ಳಿ ಬೆಂಗಳೂರು ಗ್ರಾಮಾಂತರದ ಆರ್. ರಾಮಕೃಷ್ಣ (ಚನ್ನಯ್ಯ), ಗದಗದ ಲಕ್ಕುಂಡಿಯ ಅನುಸೂಯ ರೇವಣಸಿದ್ದಯ್ಯ ಹೊಸೂರುಮಠ, ಕಲಬುರಗಿಯ ಅಯ್ಯಣ್ಣ ಸ್ವಾಮಿ ಹಿರೇಮಠ, ಶಿವಮೊಗ್ಗದ ಸಾಗರದ ಫಣಿಯಮ್ಮ ಹೆಚ್.ಎಸ್., ಕೊಪ್ಪಳದ ಮಲ್ಲಪ್ಪ ಭರಮಪ್ಪ ಕುರಿ, ಮಂಡ್ಯದ ಕೆ.ಪಿ. ಸ್ವಾಮಿ, ಉತ್ತರ ಕನ್ನಡದ ಸಿದ್ದಾಪುರದ ಸುಶೀಲಾ ಹೆಗಡೆ ಮೂರೂರು, ಬೆಂಗಳೂರಿನ ರಾಜಕುಮಾರ್ ಎಸ್., ಶಿವಮೊಗ್ಗದ ಸಾಗರದ ಡಾ. ಎಂ. ಗಣೇಶ್ ಹೆಗ್ಗೋಡು, ಯಲಹಂಕ ಬೆಂಗಳೂರು ನಗರದಿಂದ ವೈ.ಎನ್. ಉಮಾ, ಬೆಳಗಾವಿಯ ಬೈಲಹೊಂಗಲದ ಗದಿಗೆಯ್ಯಾ ವಿ. ಹಿರೇಮಠ, ವಿಜಯನಗರದ ಕೂಡ್ಲಿಗಿಯ ಟಿ. ಭಾರತಿ, ದಾವಣಗೆರೆಯ ಬಿ. ಸಾವಿತ್ರಮ್ಮ, ತುಮಕೂರಿನ ಎಂ.ಸಿ. ಶಿವರುದ್ರಪ್ಪ ಹಾಗೂ ಬೆಂಗಳೂರಿನ ವೇಣುಗೋಪಾಲ್ ಕೆ. ಅವರನ್ನು ಆಯ್ಕೆ ಮಾಡಲಾಗಿದೆ.

ದತ್ತಿನಿಧಿ ಪ್ರಶಸ್ತಿಗಳಲ್ಲಿ ಕೋಲಾರದ ಮಾಲೂರಿನ ಎನ್.ಎಂ. ಲಕ್ಷ್ಮಯ್ಯ, ಬೆಂಗಳೂರಿನ ಬಿ.ಜಿ. ಶ್ರೀಧರ (ಎಚ್.ವಿ. ವೆಂಕಟಸುಬ್ಬಯ್ಯ ದತ್ತಿ ಪುರಸ್ಕಾರ), ವಿಜಯಪುರದ ಅಶ್ವಾಕ ಹುಸೇನ ಹಾ. ಜಾಗೀರದಾರ (ಬಿ.ಆರ್. ಅರಿಶಿಣಗೋಡಿ ದತ್ತಿ ಪುರಸ್ಕಾರ), ಮೈಸೂರಿನ ಟಿ. ನರಸೀಪುರದ ಡಾ. ಎಂ. ಚಂದ್ರಪ್ಪ (ಕೆ. ರಾಮಚಂದ್ರಯ್ಯ ದತ್ತಿ ಪುರಸ್ಕಾರ), ಮೈಸೂರಿನ ಮಾಲತಿಶ್ರೀ (ಮಾಲತಿಶ್ರೀ ಮೈಸೂರು ದತ್ತಿ ಪುರಸ್ಕಾರ), ಗದಗದ ದಯಾನಂದ ಚ. ಬೀಳಗಿ (ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ), ತುಮಕೂರಿನ ಗಂಗಾಧರ ರೆಡ್ಡಿ ವಿ.ಆರ್. (ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ), ತುಮಕೂರಿನ ವೈ.ಎನ್. ಶಿವಣ್ಣ (ಕಲ್ಟರ್ ಕಮೆಡಿಯನ್ ಕೆ. ಹಿರಣ್ಣಯ್ಯ ದತ್ತಿ ಪುರಸ್ಕಾರ) ಹಾಗೂ ಚಿತ್ರದುರ್ಗದ ಸಾಣೇಹಳ್ಳಿಯ ಚಂದ್ರಮ್ಮ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರು ಹಾಗೂ ರಂಗಭೂಮಿಯ ದಿಗ್ಗಜರು ಭಾಗವಹಿಸಲಿದ್ದಾರೆ. ಈ ಪುರಸ್ಕಾರಗಳು ಕನ್ನಡ ರಂಗಭೂಮಿಯ ಶ್ರೀಮಂತ ಪರಂಪರೆಯನ್ನು ಮತ್ತಷ್ಟು ಬಲಪಡಿಸುವುದರೊಂದಿಗೆ ಕಲಾವಿದರ ಸಾಧನೆಗೆ ರಾಷ್ಟ್ರಮಟ್ಟದ ಮಾನ್ಯತೆ ನೀಡಲಿವೆ.

Comments

Leave a Comment

Prev Post ಸಾಮಾಜಿಕ ಭದ್ರತಾ ಯೋಜನೆಗಳಡಿ ಸಂದೇಹಾಸ್ಪದ ಫಲಾನುಭವಿಗಳ ಬದುಕಿಗೆ ಮತ್ತೆ ಭರವಸೆ

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಇನ್ನೆರಡು ತಿಂಗಳಲ್ಲಿ ಕಳೆದೆರಡು ಸಾಲಿನ ಉದ್ಯೋಗಿನಿ‌ ಯೋಜನೆಯ ಸಹಾಯ ಧನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ತೇರದಾಳ ಶಾಸಕ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಸಚಿವರ ಉತ್ತರ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News